Railway: ಮುಂಬೈನ ಕಿಂಗ್ ಸರ್ಕಲ್ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಚಲಿಸುವ ರೈಲನ್ನು ಹತ್ತುವಾಗ ಆಯತಪ್ಪಿದ್ದು, ಅಲ್ಲಿನ ಸಿಬ್ಬಂದಿ ಆತನನ್ನು ರಕ್ಷಿಸಿದ ಘಟನೆ ಮಂಗಳವಾರ ರಾತ್ರಿ (ಆ.05) ನಡೆದಿದೆ.
ಇದನ್ನೂ ಓದಿ: ಚಿಕಿತ್ಸೆಗೆ ಬಂದ ಯುವಕನ ಪ್ರೀತಿಯಲ್ಲಿ ಬಿದ್ದ ಮನಶ್ಶಾಸ್ತ್ರಜ್ಞೆ: ಮದುವೆಯಾದ ಬಳಿಕ ನಡೆಯಿತು ಘೋರ ದುರಂತ! Psychiatrist
ವಡಾಲಾ ರೈಲ್ವೆ ಪೊಲೀಸರ ಪ್ರಕಾರ, ರಾತ್ರಿ 11:50 ರ ಸುಮಾರಿಗೆ ಛತ್ರಪತಿ ಶಿವಾಜಿ ಟರ್ಮಿನಲ್ನಿಂದ ಚಲಿಸುತ್ತಿದ್ದ ಸ್ಥಳೀಯ ರೈಲು ಕಿಂಗ್ ಸರ್ಕಲ್ ರೈಲ್ವೆ ನಿಲ್ದಾಣಕ್ಕೆ ಬಂದಾಗ ಈ ಘಟನೆ ಸಂಭವಿಸಿದೆ. ಇನ್ನು ಪ್ಲಾಟ್ಫಾರ್ಮನಲ್ಲಿ ಜನದಟ್ಟಣೆ ಇಲ್ಲದಿದ್ದರೂ ಪ್ರಯಾಣಿಕ ಚಲಿಸುವ ರೈಲು ಹತ್ತುವಾಗ ಕಾಲು ಜಾರಿದ್ದಾನೆ. ಇನ್ನು ಈ ವ್ಯಕ್ತಿ ರೈಲಿನಿಂದ ಬೀಳುವುದನ್ನು ಗಮನಿಸಿದ ಕರ್ತವ್ಯನಿರತ ವಡಾಲಾ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ತಕ್ಷಣವೇ ಪ್ರಯಾಣಿಕನ್ನು ಎಳೆದುಕೊಂಡು ಆತನನ್ನು ರಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ನಾವು ಒಂದು ಸೆಕೆಂಡ್ ತಡಮಾಡಿದ್ದರೆ, ಆ ವ್ಯಕ್ತಿ ರೈಲು ಹಾಗೂ ಪ್ಲಾಟ್ಫಾರ್ಮ್ ನಡುವೆ ಬೀಳುವ ಸಾಧ್ಯತೆ ಇತ್ತು. ನಮ್ಮ ಅಧಿಕಾರಿಗಳು ತ್ವರಿತವಾಗಿ ಕಾರ್ಯನಿರ್ವಹಿಸಿ, ಆತನ ಜೀವವನ್ನು ಕಾಪಾಡಿದ್ದಾರೆ. ರೈಲು ಹತ್ತುವಾಗ ಆತುರಪಡಬೇಡಿ ಮತ್ತು ನಿಮ್ಮ ಸ್ವಂತ ಸುರಕ್ಷತೆಗೆ ಆದ್ಯತೆ ನೀಡಿ ಎಂದು ಹಿರಿಯ ಅಧಿಕಾರಿ ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ. (ಏಜೆನ್ಸೀಸ್)