ದೆಹಲಿ: ಪಾರ್ಲೆ-ಜಿ ಅಂದಾಕ್ಷಣ ಕಣ್ಮುಂದೆ ಬರುತ್ತೆ ಬಿಸ್ಕತ್ತು, ಮಿಠಾಯಿ. ಅಷ್ಟರಮಟ್ಟಿಗೆ ಹೆಸರುವಾಸಿ ಪಾರ್ಲೆ-ಜಿ ಪ್ರಾಡೆಕ್ಟ್. ಇದೀಗ ಈ ಪಾರ್ಲೆ-ಜಿ ಗೋಧಿ ಹಿಟ್ಟು ಮಾರಾಟಕ್ಕೂ ಬಂಡವಾಳ ಹೂಡಿದೆ. ಈ ಬಗ್ಗೆ ಪಾರ್ಲೆ-ಜಿ ಕಂಪನಿಯು ಇಂದು ಅಧಿಕೃತವಾಗಿ ಘೋಷಿಸಿದೆ.
ಈ ಕಂಪನಿಯ ಗೋಧಿ ಹಿಟ್ಟು 'ಪಾರ್ಲೆ-ಜಿ ಚಕ್ಕಿ ಹಿಟ್ಟು' ಬ್ರ್ಯಾಂಡ್ನಡಿ ಮಾರುಕಟ್ಟೆ ಪ್ರವೇಶಿಸಿದೆ. ಸದ್ಯ ಈ ಹಿಟ್ಟು ದೇಶದ ಉತ್ತರ ಮತ್ತು ಪಶ್ಚಿಮ ವಲಯಗಳಲ್ಲಿ ಲಭ್ಯವಿದ್ದು, 2 ಕೆಜಿ, 5 ಕೆಜಿ ಮತ್ತು 10 ಕೆಜಿ ತೂಕದ ಹಿಟ್ಟಿನ ಪ್ಯಾಕೇಟ್ಗಳು ಮಾರುಕಟ್ಟೆಯಲ್ಲಿ ಮಳಿಗೆಗಳನ್ನ ಪ್ರವೇಶಿಸಿವೆ. ನಗರ ಮತ್ತು ಗ್ರಾಮೀಣ ಮಾರುಕಟ್ಟೆ ಎರಡನ್ನೂ ಕೇಂದ್ರೀಕರಿಸಿ ಪಾರ್ಲೆ-ಜಿ ಚಕ್ಕಿ ಹಿಟ್ಟನ್ನು ಸರಬರಾಜು ಮಾಡಲಾಗುತ್ತಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.
ವಿಶ್ವಾಸಾರ್ಹ ಬ್ರ್ಯಾಂಡ್‌ನ ಭರವಸೆಯೊಂದಿಗೆ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿನ ಗ್ರಾಹಕರನ್ನು ಪಾರ್ಲೆ-ಜಿ ಚಕ್ಕಿ ಹಿಟ್ಟು' ತಲುಪಲಿದೆ ಎಂದು ಪಾರ್ಲೆ ಪ್ರಾಡಕ್ಟ್ಸ್‌ನ ಸೀನಿಯರ್ ವಿಭಾಗದ ಮುಖ್ಯಸ್ಥ ಮಾಯಾಂಕ್ ಶಾ ಹೇಳಿದ್ದಾರೆ.