ನ್ಯೂಸ್

ಆನ್​ಲೈನ್​ ತರಗತಿ ವೇಳೆ ಮೊಬೈಲ್​ ಸ್ಫೋಟ: 8ನೇ ತರಗತಿ ವಿದ್ಯಾರ್ಥಿ ಗಾಯ

arunakunigal

ಭೋಪಾಲ್​: ಶಾಲೆಯ ಆನ್​ಲೈನ್​ ತರಗತಿ ನಡೆಯುತ್ತಿದ್ದಾಗ ಮೊಬೈಲ್​ ಫೋನ್​ ಸ್ಫೋಟಗೊಂಡು ಮಧ್ಯಪ್ರದೇಶದ 15 ವರ್ಷದ ಬಾಲಕನೊಬ್ಬ ಗಾಯಗೊಂಡಿದ್ದಾನೆ.

ಗುರುವಾರ ಮಧ್ಯಾಹ್ನ ಸತ್ನಾ ಜಿಲ್ಲೆಯ ಚಾಂಕುಯ್ಯ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪಾಲಕರು ಕೆಲಸಕ್ಕೆ ಹೋಗಿದ್ದರು. ಮನೆಯಲ್ಲೇ ಇದ್ದ ಎಂಟನೇ ತರಗತಿಯ ವಿದ್ಯಾರ್ಥಿಯಾದ ರಾಮಪ್ರಕಾಶ್​ ಭದೌರಿ ಆನ್​ಲೈನ್​ ಕ್ಲಾಸ್​ ಅಟೆಂಟ್​ ಮಾಡಿದ್ದ.

ಈ ವೇಳೆ ಮೊಬೈಲ್​ ಸ್ಫೋಟಗೊಂಡಿದ್ದು, ಬಾಲಕನ ದವಡೆಗೆ ಗಾಯವಾಗಿದೆ. ಸ್ಫೋಟದ ಶಬ್ದ ಕೇಳಿದ ಅಕ್ಕಪಕ್ಕದವರು ಬಾಲಕನ ಮನೆಗೆ ಧಾವಿಸಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ.