ಶಿವಮೊಗ್ಗ: ವಿಶ್ವಕರ್ಮ ಯಕ್ಷಾಭಿಮಾನಿ ವೇದಿಕೆ, ಗುಡಿ ಎಂಪೋರಿಯಂ ಆಶ್ರಯದಲ್ಲಿ ಜೂ.1ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಸ್ನೇಹದ ಕಡಲಲ್ಲಿ ಸಂಗೀತ ಸಂಜೆ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮದ ವ್ಯವಸ್ಥಾಪಕ ಶಶಿ ಎಸ್. ಮಂಗಳಗಾರ್ ಹೇಳಿದರು.
ಸಿನಿಮಾ ನಟ ಶ್ರೀನಾಥ್ ಉಪಸ್ಥಿತಿಯಲ್ಲಿ ಬೆಂಗಳೂರಿನ ಪರಮಪದ ತಂಡದ ಕಲಾವಿದರಾದ ರಾಮಚಂದ್ರ ಹಡಪದ, ಆರ್.ಕೆ.ಸ್ಪರ್ಶಾ ಮತ್ತು ದಿವ್ಯಾ ಅವರು ಶ್ರೀನಾಥ್ ಅಭಿನಯದ ಚಿತ್ರಗಳ ಹಾಡುಗಳನ್ನು ಪ್ರಸ್ತುತಪಡಿಸುವರು. ರಾಘವೇಂದ್ರ ಎನ್. ಕಾಂಚನ್ ನಿರೂಪಣೆ ಇರಲಿದೆ. ದೀಪಕ್ ಜಯಶೀಲನ್ ತಂಡ ವಾದ್ಯಗೋಷ್ಠಿ ನಡೆಸಿಕೊಡಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ವಿಜಯಕುಮಾರ್, ಎಎಸ್ಪಿ ಅನಿಲ್‌ಕುಮಾರ್ ಭೂಮರಡ್ಡಿ ಅವರನ್ನು ಸನ್ಮಾನಿಸಲಾಗುವುದು. ಪತ್ರಕರ್ತರಾದ ಎಸ್.ಚಂದ್ರಕಾಂತ್, ಸೂರ್ಯನಾರಾಯಣ್, ಮಾಜಿ ಎಂಎಲ್‌ಸಿ ಎಸ್.ರುದ್ರೇಗೌಡ, ಸಂಗೀತ ಕಲಾವಿದ ಹುಮಾಯೂನ್ ಹರ್ಲಾಪುರ್, ಸಾಹಿತಿ ಎಂ.ಎನ್.ಸುಂದರರಾಜ್, ಬಂಟರ ಸಂಘದ ಅಧ್ಯಕ್ಷ ಡಾ. ಎ.ಸತೀಶ್‌ಕುಮಾರ್ ಶೆಟ್ಟಿ, ವಕೀಲ ಮಧುಸೂದನ್, ಗುಡಿ ಎಂಪೋರಿಯಂ ಪಾಲುದಾರೆ ಚಿತ್ರಾ ಗಿರೀಶ್ ಭಾಗವಹಿಸುವರು ಎಂದು ತಿಳಿಸಿದರು. ಪ್ರಮುಖರಾದ ಭರತ್, ಸಚಿನ್, ಪ್ರಕಾಶ್, ಅಮೋಘ್ ಸುದ್ದಿಗೋಷ್ಠಿಯಲ್ಲಿದ್ದರು.