ಬೆಂಗಳೂರು: ೧೨ ಕ್ಕೂ ಹೆಚ್ಚು ಮಂದಿಯನ್ನು ಹನಿಟ್ರ್ಯಾಪ್‌ಗೆ ಬಲೆಗೆ ಬೀಳಿಸಿ ಲಕ್ಷಾಂತರ ದೋಚಿರುವ ಮುಂಬೈ ಮೂಲದ ಮಾಡೆಲ್‌ನನ್ನು ಪುಟ್ಟೇನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಂಡಸರ ಮನೆಗೆ ಬರಲು ಹೇಳಿ ಅವರನ್ನು ಬಿಕಿನಿಯಲ್ಲಿ ಸ್ವಾಗತಿಸಿ ಬಳಿಕ ಹನಿಟ್ರ್ಯಾಪ್‌ಗೆ ಬಲೆಗೆ ಬೀಳಿಸುತ್ತಿದ್ದ ನೇಹಾ ಅಲಿಯಾಸ್ ಮೆಹರ್‌ನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ಟೆಲಿಗ್ರಾಮ್ ಆ್ಯಪ್ ಮೂಲಕ ಪರಿಚಿತರಾದವರನ್ನು ಮನೆಗೆ ಕರೆಯಿಸಿಕೊಂಡು ರಂಗಿನಾಟದ ಹಸಿ ಬಿಸಿ ದೃಶ್ಯ ಸೆರೆ ಹಿಡಿದು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮೆಹರ್‌ನನ್ನು ಪೊಲೀಸರು ಮುಂಬೈನಲ್ಲಿ ಬಂಧಿಸಿ ನಗರಕ್ಕೆ ಕರೆ ತಂದಿದ್ದು, ತನಿಖೆ ವೇಳೆ ಮಾಡೆಲ್ ನೇಹಾಳ ಒಂದೊಂದೇ ರಂಗಿನಾಟ ಬಟಾಬಯಲಾಗಿವೆ. ೧೨ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡುವ ಮೂಲಕ ಒಟ್ಟು 30 ಲಕ್ಷಕ್ಕೂ ಹೆಚ್ಚು ವಂಚಿಸಿದ್ದಾಳೆ ಎಂದು ತನಿಖೆ ವೇಳೆ ಗೊತ್ತಾಗಿದೆ ಎಂದು ತಿಳಿದು ಬಂದಿದೆ.
ಮೂವರ ಬಂಧನವಾಗಿತ್ತು:
ಈ ಪ್ರಕರಣದಲ್ಲಿ ಈ ಹಿಂದೆ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್, ಯಾಸಿನ್ ಎಂಬುವವರ ಬಂಧನವಾಗಿತ್ತು. ಇವರು ಈ ಬಾಂಬೆ ಮಾಡೆಲ್ ಇಟ್ಟುಕೊಂಡು ಗಂಡಸರಿಗೆ ಬಲೆ ಬೀಸುತ್ತಿದ್ದರು. ಅಲ್ಲದೇ ಹನಿಟ್ರ್ಯಾಪ್ ಜಾಲಕ್ಕೆ ಕೆಡವಲು ಕತ್ನಾ ಅಸ್ತ್ರ ಪ್ರಯೋಗ ಮಾಡಲಾಗುತ್ತಿತ್ತು ಎನ್ನುವ ಮಾಹಿತಿ ತಿಳಿದುಬಂದಿದೆ. ಈಗಾಗಲೇ ಟೆಲಿಗ್ರಾಮ್ ಮೂಲಕ ಕೆಲವರನ್ನು ಸಂಪರ್ಕ ಮಾಡಿದ್ದ ಮೆಹರ್, ಲೈಂಗಿಕ ಕ್ರಿಯೆಗೆ ಜೆಪಿ ನಗರ ಐದನೇ ಹಂತದಲ್ಲಿರುವ ಮನೆಗೆ ಕರೆಯಿಸಿಕೊಳ್ಳುತ್ತಿದ್ದಳು. ಮಾಡೆಲ್ ಮೇಲಿನ ಆಸೆಗೆ ಸಂತ್ರಸ್ಥರು ಬಂದು ಮನೆ ಬೆಲ್ ಮಾಡುತ್ತಿದ್ದಂತೆಯೇ ನೇಹಾ, ಬಿಕಿನಿಯಲ್ಲಿ ಬಂದು ಹಗ್ ಮಾಡಿ ಸ್ವಾಗತ ಕೋರುತ್ತಿದ್ದಳು. ಈ ಬಿಕಿನಿ ಸ್ವಾಗತದ ಹಸಿ ಬಿಸಿ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿತ್ತು. ಬಳಿಕ ಮೂರೇ ನಿಮಿಷದಲ್ಲಿ ಮನೆಗೆ ವಿಲನ್ಸ್ ಎಂಟ್ರಿಯಾಗಿ ಯುವತಿ ಜತೆಗಿನ ವಿಡಿಯೋ ಮೊಬೈಲ್ನಲ್ಲಿ ಸೆರೆ ಹಿಡಿಯುತ್ತಿದ್ದರು. ಅದಕ್ಕೂ ಮೊದಲು ಮನೆಗಳ ಬರುವ ಅತಿಥಿಗಳ ವ್ಯಕ್ತಿ ಮೊಬೈಲ್ ಕಸಿದುಕೊಳ್ಳುತ್ತಿದ್ದರು. ಅಲ್ಲದೇ ಮೊಬೈಲ್ನಲ್ಲಿರುವ ನಂಬರ್ ಎಲ್ಲವನ್ನು ನೋಟ್ ಮಾಡಿಕೊಳ್ಳುತ್ತಿದ್ದರು. ಇಷ್ಟವಾಗುತ್ತಿದ್ದಂತೆಯೇ ಹಣಕ್ಕೆ ಡಿಮ್ಯಾಂಡ್ ಇಡಲು ಶುರುಮಾಡುತ್ತಿದ್ದರು. ಹಣ ಕೊಡಲು ನಿರಾಕರಿಸಿದರೆ ನಿಮ್ಮ ವಿಡಿಯೋವನ್ನು ಸ್ನೇಹಿತರು, ಸಂಬಂಧಿಕರು ಹಾಗೂ ಕುಟುಂಬಸ್ಥರಿಗೆ ಕಳಿಸುವುದಾಗಿ ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು. ಅಲ್ಲದೇ ಯುವತಿ ಮುಸ್ಲಿಂ ಆಗಿದ್ದಾಳೆ, ಆಕೆಯನ್ನು ಮದುವೆ ಆಗುವಂತೆ ಬೆದರಿಕೆ ಜತೆಗೆ ಮದುವೆ ಆಗಬೇಕಾದರೆ ಕತ್ನಾ ಮಾಡಿಸಬೇಕು ಎಂದು ಧಮ್ಕಿ ಹಾಕುತ್ತಿದ್ದರು. ಅದಲ್ಲದೇ ಮುಸ್ಲಿಂ ಆಗಿ ಕನ್ವರ್ಟ್ ಆಗುವಂತೆ ಬೆದರಿಸುತ್ತಿದ್ದರು. ಇದರಿಂದ ಸಂತ್ರಸ್ಥರು ಹೆದರಿ ಹಣ ವರ್ಗಾವಣೆ ಮಾಡುತ್ತಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಈ ಗ್ಯಾಂಗ್‌ನಿಂದ ವಂಚನೆಗೊಳಗಾದ ವೈಟ್‌ಫೀಲ್ಡ್ ನಿವಾಸಿಯೊಬ್ಬರು ಮಾ.೪ ರಂದು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಟೆಲಿಗ್ರಾಂ ಆ್ಯಪ್ ಮೂಲಕ ಪರಿಚಯವಾದ ಮೆಹರ್ ವಾಟ್ಸ್‌ಆ್ಯಪ್ ಮೂಲಕ ಚಾಟ್ ಮಾಡಿ ನನ್ನ ಪತಿ ದುಬೈನಲ್ಲಿ ಕೆಲಸ ಮಾಡುತ್ತಿದ್ದಾನೆ. ನಾನು ಸೆಕ್ಸ್ ಮಾಡಲು ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಹೇಳಿ ತನ್ನ ೆಟೋ ಮತ್ತು ಲೋಕೇಷನ್ ಕಳುಹಿಸಿದ್ದಳು. ಇದರಂತೆ ಜೆ.ಪಿ.ನಗರದ ೫ ನೇ ಹಂತದ ಮನೆಗೆ ಬಂದಾಗ ಸ್ವಲ್ಪ ಹೊತ್ತಿನ ನಂತರ ಮೂವರು ಅಪರಿಚಿತರು ಬಂದು ನೀನು ಯಾರು ಇಲ್ಲಿಗೆ ಏಕೆ ಬಂದಿದ್ದೀಯಾ ಎಂದು ಹಲ್ಲೆ ನಡೆಸಿ ನಿನ್ನನ್ನು ಬೆತ್ತಲೆ ಮಾಡಿ ರಸ್ತೆಯಲ್ಲಿ ಓಡುಸುತ್ತೇವೆ. ಮಸೀದಿಗೆ ಕರೆದುಕೊಂಡು ಹೋಗಿ ನಿನಗೆ ಮುಂಜಿ ಮಾಡಿಸಿ ಮೆಹರ್‌ನೊಂದಿಗೆ ಮದುವೆ ಮಾಡಿಸುತ್ತೇವೆ ಎಂದು ಹೆದರಿಸಿ ನೀನು ೩ ಲಕ್ಷ ಕೊಟ್ಟರೆ ನಿನ್ನನ್ನು ಬಿಟ್ಟು ಕಳುಹಿಸುತ್ತೇವೆ ಎಂದು ಹಣಕ್ಕೆ ಬೇಡಿಕೆ ಇಟ್ಟು ಪೋನ್ ಪೇ ಮೂಲಕ ೨೧,೫೦೦ ವರ್ಗಾವಣೆ ಮಾಡಿಕೊಂಡು, ಬಳಿಕ ನಿನ್ನ ಕ್ರೇಡಿಟ್ ಕಾರ್ಡ್‌ನಲ್ಲಿ 2.5 ಲಕ್ಷ ರೂ. ನೀಡು ಎಂದು ಹೇಳಿದ್ದಾಗ ದೂರುದಾರರು ನನ್ನ ಕ್ರೇಡಿಟ್ ಕಾರ್ಡ್ ಮನೆಯಲ್ಲಿ ಇದೆ ಎಂದಾಗ ನಿನ್ನೊಂದಿಗೆ ನಾವು ಬರುತ್ತೇವೆ ಎಂದು ಮನೆಯ ಹೊರಗಡೆ ಕರೆದುಕೊಂಡು ಬಂದಾಗ ಅವರಿಂದ ತಪ್ಪಿಸಿಕೊಂಡು ಬಂದು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು.
ಈ ಪ್ರಕರಣ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ೧೨ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್ ಮಾಡುವ ಮೂಲಕ ಒಟ್ಟು 30 ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.