ನ್ಯೂಸ್

ಕುಮಾರಸ್ವಾಮಿ ಜತೆ ಸಮಸ್ಯೆಗಳ ಬಗ್ಗೆ ಸಮಾಲೋಚನೆ ನಡೆಸಿದ 20ಕ್ಕೂ ಹೆಚ್ಚು ಮಠದ ಸ್ವಾಮೀಜಿಗಳು

ಬಿಡದಿ: ಸಣ್ಣಪುಟ್ಟ ಸಮುದಾಯಗಳ ಇಪ್ಪತ್ತಕ್ಕೂ ಹೆಚ್ಚು ಮಠಗಳ ಸ್ವಾಮೀಜಿಗಳು ಮಂಗಳವಾರ ಬೆಳಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಆಶೀರ್ವದಿಸಿದರು.

ಬಿಡದಿಯ ಕೇತಿಗಾನಹಳ್ಳಿ ಗ್ರಾಮದಲ್ಲಿರುವ ಎಚ್​ಡಿಕೆ ಅವರ ತೋಟಕ್ಕೆ ಭೇಟಿ ನೀಡಿದ ಶ್ರೀಗಳು, ತಮ್ಮ ಸಮುದಾಯಗಳ ಸ್ಥಿತಿಗತಿ, ಸಮಸ್ಯೆ, ಸವಾಲುಗಳು ಸೇರಿದಂತೆ ರಾಜ್ಯದ ಆಗುಹೋಗುಗಳ ಬಗ್ಗೆ ಚರ್ಚೆ ನಡೆಸಿದರು.

ದೊಡ್ಡಬಳ್ಳಾಪುರದ ವಾಲ್ಮೀಕಿ ಗುರು ಪೀಠದ ಶ್ರೀ ಬ್ರಹ್ಮಾನಂದ ಗುರೂಜಿ, ಈಡಿಗ ಗುರುಪೀಠದ ರಾಣಿಬೆನ್ನೂರು ಶ್ರೀ ಪ್ರಣವಾನಂದ ಸ್ವಾಮಿ, ಚಿತ್ರದುರ್ಗದ ಬಂಜಾರ ಗುರುಪೀಠದ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ವಾಡಿಯ ಸವಿತಾ ಸಮಾಜ ಗುರುಪೀಠದ ಶ್ರೀ ಶ್ರೀಧರಾನಂದ ಸರಸ್ವತಿ ಸ್ವಾಮೀಜಿ, ಹಿರಿಯೂರಿನ ಅರಳಯ್ಯ ಗುರುಪೀಠದ ಶ್ರೀ ಅರಳಯ್ಯ ಮಹಾಸ್ವಾಮೀಜಿ, ಕಲಬುರಗಿಯ ಪಿಂಜಾರ ಗುರುಪೀಠದ ಶ್ರೀ ಸಿದ್ದಬಸವ ಕಬೀರಾನಂದ ಸ್ವಾಮೀಜಿ, ಕಲಬುರಗಿಯ ಶ್ರೀ ಅಂಬಿಗರ ಚೌಡಯ್ಯ ಗುರುಪೀಠದ ಶ್ರೀ ವರಲಿಂಗ ಸ್ವಾಮೀಜಿ, ಹರಿಹರದ ಕೇದಾರ ಗುರು ಪೀಠದ ಶಾಖಾ ಮಠದ ಶ್ರೀ ಸಿದ್ದಲಿಂಗ ಶಿವಾಚರ್ಯ ಸ್ವಾಮೀಜಿ, ಅಗಡಿಯ ಅಕ್ಕಿಮಠದ ಶ್ರೀ ಗುರುಲಿಂಗ ಸ್ವಾಮೀಜಿ, ಚಿತ್ರದುರ್ಗದ ಭೋವಿ ಗುರುಪೀಠದ ಗಂಗಾಧರೇಶ್ವರ ಶ್ರೀಗಳು, ಶಿವಮೊಗ್ಗದ ರುದ್ರಾಕ್ಷಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಬೆಂಗಳೂರಿನ ಪಿಂಜಾರ ಗುರುಪೀಠದ ಶ್ರೀ ಸಂಗಮಾನಾಥ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ ಇನ್ನೂ ಅನೇಕ ಸ್ವಾಮೀಜಿಗಳು ಎಚ್​ಡಿಕೆ ಅವರನ್ನು ಭೇಟಿ ಮಾಡಿದರು.