ಶ್ರೀನಿವಾಸಪ್ರಭು 
ನ್ಯೂಸ್

ಸಾಹಿತ್ಯ ಕೃತಿಯ ಶ್ರೇಷ್ಠ ಪಾತ್ರಗಳ ಸ್ಮಾರಕ ಅಗತ್ಯ: ನಟ ಶ್ರೀನಿವಾಸ ಪ್ರಭು ಆಶಯ- literary work

ಶರ್ಲಾಕ್ ಹೋಮ್ಸ್ ನೆನಪು ಶಾಶ್ವತ. ಕೋನನ್ ಡಾಯ್ಲ್ ರಚಿಸಿದ ಕಾದಂಬರಿಯೊಂದರ ಕಾಲ್ಪನಿಕ ಪಾತ್ರ ‘ಶರ್ಲಾಕ್ ಹೋಮ್ಸ್’ ಆದರೂ, ಆ ಪಾತ್ರ ಸಾಹಿತ್ಯಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಅದು ನಮ್ಮೊಂದಿಗೆ ಬದುಕುತ್ತಿರುವ ಪಾತ್ರ ಎಂದು ಜನರು ನಂಬಲು ಶುರುಮಾಡಿದರು. ಅದೇ ಒಂದು ಲೇಖನಿಗಿರುವ ಶಕ್ತಿ ಎಂದರು.

ಬೆಂಗಳೂರು: ಕನ್ನಡದ ಖ್ಯಾತ ಸಾಹಿತ್ಯ ಕೃತಿಗಳಲ್ಲಿ ದಾಖಲಾದ ಶ್ರೇಷ್ಠ ಪಾತ್ರಗಳನ್ನಾಧರಿಸಿ ಸ್ಮಾರಕಗಳನ್ನು ನಿರ್ಮಿಸುವ ಕುರಿತು ಸರ್ಕಾರ ಚಿಂತಿಸಬೇಕಿದೆ ಎಂದು ಹಿರಿಯ ನಟ ಶ್ರೀನಿವಾಸಪ್ರಭು ಸಲಹೆ ನೀಡಿದ್ದಾರೆ.

ಅಂಕಿತ ಪುಸ್ತಕ ಪ್ರಕಾಶನ ಬನಶಂಕರಿ 2ನೇ ಹಂತದ ಸುಚಿತ್ರ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಐದು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಶರ್ಲಾಕ್ ಹೋಮ್ಸ್ ನೆನಪು ಶಾಶ್ವತ. ಕೋನನ್ ಡಾಯ್ಲ್ ರಚಿಸಿದ ಕಾದಂಬರಿಯೊಂದರ ಕಾಲ್ಪನಿಕ ಪಾತ್ರ ‘ಶರ್ಲಾಕ್ ಹೋಮ್ಸ್’ ಆದರೂ, ಆ ಪಾತ್ರ ಸಾಹಿತ್ಯಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು. ಅದು ನಮ್ಮೊಂದಿಗೆ ಬದುಕುತ್ತಿರುವ ಪಾತ್ರ ಎಂದು ಜನರು ನಂಬಲು ಶುರುಮಾಡಿದರು. ಅದೇ ಒಂದು ಲೇಖನಿಗಿರುವ ಶಕ್ತಿ ಎಂದರು.

ಭಾರತದ ಶರ್ಲಾಕ್ ಹೋಮ್ಸ್ ಖ್ಯಾತಿಯ ಪಶ್ಚಿಮ ಬಂಗಾಳದ ಶರದೇಂದು ಬಂದೋಪಾಧ್ಯಾಯ ರಚಿಸಿದ ‘ವ್ಯೋಮಕೇಶಬಕ್ಷಿಯ ಸಾಹಸಗಳು’ ಮಾಲಿಕೆಯ ಕೃತಿಗಳು ವಿಶಿಷ್ಟವಾಗಿವೆ. ಅದನ್ನು ಡಾ. ಎಂ.ವಿ. ನಾಗರಾಜರಾವ್ ಅವರ ‘ಗೋಲಪ ಕಾಲೋನಿ ರಹಸ್ಯ’ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. ಕೋನನ್ ಡಾಯ್ಲ್ ಸೃಷ್ಟಿಸಿದ ಶರ್ಲಾಕ್ ಹೋಮ್ಸ್ ಕಾದಂಬರಿಯ ಪಾತ್ರ ಎಷ್ಟುಪ್ರಭಾವಿಯಾಗಿತ್ತು ಅಂದರೆ, ಲಂಡನ್‌ನಲ್ಲಿ ಅದರ ಸ್ಮಾರಕವಿದೆ. ಕರ್ನಾಟಕದಲ್ಲೂ ಈ ಬಗೆಯ ಸ್ಮಾರಕ ಅಗತ್ಯವಿದೆ ಎಂದರು.

ಸಮಾರಂಭದಲ್ಲಿ ‘ಗೋಲಪ ಕಾಲೋನಿ ರಹಸ್ಯ’ ಕೃತಿ ಸೇರಿ ವಸುಮತಿ ಉಡುಪ ರಚಿಸಿದ ‘ಜೀವನ್ಮುಖಿ’ (ಕಥಾಸಂಕಲನ), ಡಾ. ಎ.ಓ. ಆವಲಮೂರ್ತಿ ಅವರ ‘ದೇವರು’ ವಿಜ್ಞಾನ ಮತ್ತು ವಿಜ್ಞಾನಿಗಳು’, ರವಿರಾಜ ಬೈಕಂಪಾಡಿ ಅವರ ‘ಅದಲು ಬದಲು’ (ಪತ್ತೇದಾರಿ ಕಾದಂಬರಿ) ಹಾಗೂ ಪಾರ್ವತಿ ಜಿ. ಐತಾಳ್ ಬರೆದಿರುವ ‘ಬೇಸಿಗೆಯ ಮಳೆ’ (ಕಾದಂಬರಿ) ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

ಲೇಖಕಿ ವಿದ್ಯಾರಶ್ಮಿ ಪೆಲತ್ತಡ್ಕ, ಲೇಖಕ ಶರತ್ ಭಟ್ ಸೇರಾಜೆ, ಕವಿ ಬಿ.ಆರ್.ಎಲ್ ಹಾಗೂ ಅಂಕಿತ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಉಪಸ್ಥಿತರಿದ್ದರು.