ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತ್‌ಉಲ್ ಉಲಮಾ ವತಿಯಿಂದ ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಮೊದಲ ಸಭೆ ಇತೀಚೆಗೆ ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ನಡೆಯಿತು. ಜಂಇಯ್ಯತ್‌ಉಲ್ ಉಲಾಮ ಜಿಲ್ಲಾ ಉಪಾಧ್ಯಕ್ಷ ಪಿ.ಬಿ.ಇಸ್ಮಾಯಿಲ್, ಉಮ್ಮರ್ ಫೈಝಿ, ಬಷೀರ್ ಹಾಜಿ ಇತರರು ಇದ್ದರು. 
ನ್ಯೂಸ್

ನ.25ರಂದು ಮಡಿಕೇರಿಯಲ್ಲಿ ಸಮಸ್ತ ಬೃಹತ್ ಪ್ರಚಾರ ಸಮ್ಮೇಳನ

ಸಿದ್ದಾಪುರ: ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಉಲಮಾ ವತಿಯಿಂದ ಸಮಸ್ತ 100ನೇ ವಾರ್ಷಿಕ ಸಮ್ಮೇಳನದ ಸ್ವಾಗತ ಸಮಿತಿ ಮೊದಲ ಸಭೆಯು ಇತೀಚೆಗೆ ಸಿದ್ದಾಪುರದ ವರಕ್ಕಲ್ ಸ್ಮಾರಕ ಸೌಧದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಜಂಇಯ್ಯತ್‌ಉಲ್ ಉಲಮಾ ಅಧ್ಯಕ್ಷರು ಕೊಡಗು ಜಿಲ್ಲಾ ಉಪ ಖಾಝಿಗಳಾದ ಶೈಖುನಾ ಎಂ.ಎಂ. ಅಬ್ದುಲ್ಲಾ ಫೈಝಿ ಉಸ್ತಾದ್ ಎಡಪಾಲ ಅವರು ಪ್ರಾರ್ಥನೆ ನೆರವೇರಿಸಿದರು. ಕೊಡಗು ಜಿಲ್ಲಾ ಸಮಸ್ತ ಜಂಇಯ್ಯತ್‌ಉಲ್ ಉಲಾಮ ಜಿಲ್ಲಾ ಉಪಾಧ್ಯಕ್ಷ ಪಿ.ಬಿ.ಇಸ್ಮಾಯಿಲ್ ಮುಸ್ಲಿಯಾರ್ ಸಭೆಯನ್ನು ಉದ್ಘಾಟಿಸಿದರು.

ಸಮಸ್ತ ನೇತಾರರ ಜೀವನ ಚರಿತ್ರೆ ಮತ್ತು ಸಮಸ್ತ ಶತಮಾನೋತ್ಸವ ವಿಜಯಗೊಳಿಸಲು ಸರ್ವರೂ ಸಜ್ಜಾಗಬೇಕೆಂದು ಇಬ್ರಾಹಿಂ ಫೈಝಿ ವಯನಾಡ್ ಕರೆ ನೀಡಿದರು. ಕೊಡಗು ಜಂಇಯ್ಯತಉಲ್ ಉಲಮಾ, ಜಿಲ್ಲಾ ಕಾರ್ಯದರ್ಶಿ ಉಸ್ಮಾನ್ ಫೈಝಿ ಸ್ವಾಗತಿಸಿದರು. ಕೊಡಗು ಜಿಲ್ಲಾ ಜಂಇಯ್ಯಉಲ್ ಮುಅಲ್ಲಿಮೀನ್ ಕಾರ್ಯದರ್ಶಿ ಆರಿಫ್ ಫೈಝಿ ಸಮ್ಮೇಳನ ಕುರಿರು ವಿವರಿಸಿದರು.

ಕೊಡಗು ಜಿಲ್ಲಾ ಜಂಇಯ್ಯತ್‌ಉಲ್ ಉಲಮಾ ಇದರ ವತಿಯಿಂದ ನವೆಂಬರ್ 25ಕ್ಕೆ ಬೃಹತ್ ಸಮಸ್ತ ಪ್ರಚಾರ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಮ್ಮರ್ ಫೈಝಿ, ಬಷೀರ್ ಹಾಜಿ, ಸಿಎಂ ಹಮೀದ್ ಮೌಲ್ವಿ, ಇಕ್ಬಾಲ್ ಮೌಲ್ವಿ, ಅಶ್ರಫ್ ಫೈಝಿ, ತಮ್ಲೀಕ್ ದಾರಿಮಿ, ಶುಹೈಬ್ ಫೈಝಿ, ನೌಫಲ್ ಹುದವಿ, ರಹೂಫ್ ಹುದವಿ, ಕೆ.ಎ.ಯಾಕೂಬ್ ಬಜೆಗುಂಡಿ, ರವೂಫ್ ಹಾಜಿ, ಬಶೀರ್ ಹಾಜಿ, ಎಂ.ಎಂ. ಎಸ್.ಹುಸೇನ್, ವಿಖಾಯ ಕರೀಂ ಮುಸ್ಲಿಯಾರ್ ಮತ್ತಿತರರು ಹಾಜರಿದ್ದರು.