ನ್ಯೂಸ್

ಕುಡಿದ ಮತ್ತಿನಲ್ಲಿ ಈಜಲು ಕೆರೆಗೆ ಹಾರಿದ ವ್ಯಕ್ತಿ ಮೃತ್ಯು

ನೆಲಮಂಗಲ: ಮದ್ಯದ ನಶೆಯಲ್ಲಿದ್ದ ವ್ಯಕ್ತಿ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ ಘಟನೆ ನರಸಾಪುರ ಗ್ರಾಮದಲ್ಲಿ ನೆಡೆದಿದೆ. ತಾಲ್ಲೂಕಿನ ತ್ಯಾಮಗೊಂಡ್ಲು ಸಮೀಪದ ನರಸಾಪುರ ಗ್ರಾಮದ ನಿವಾಸಿ ಮಾಯಣ್ಣ (53) ಮೃತ ವ್ಯಕ್ತಿ.

ಮದ್ಯದ ನಶೆಯಲ್ಲಿ ಈಜಲು ಕೆರೆಗೆ ಹಾರಿದ್ದಾನೆ. ಕೆರೆಯಲ್ಲಿ ತುಂಬಿಕೊಂಡಿದ್ದ ಹೂಳಿಗೆ ಸಿಲುಕಿ ಸಾವನ್ನಪ್ಪಿದ್ದಾನೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮತ್ತು ನೆಲಮಂಗಲ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ರಾತ್ರಿಯವರೆಗೂ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹಕ್ಕಾಗಿ ಶೋಧ ಕಾರ್ಯ ನೆಡೆಸಿದ್ದರು. ಆದರೆ ಬೆಳಕಿನ ಕೊರತೆಯ ಕಾರಣ ಮೃತದೇಹ ಪತ್ತೆಯಾಗಿರಲಿಲ್ಲ. ಬೆಳಿಗ್ಗೆ ಮತ್ತೆ ಕಾರ್ಯಾಚರಣೆಗಿಳಿದ ಅಗ್ನಿಶಾಮಕ ಸಿಬ್ಬಂದಿಗಳು ತೆಪ್ಪ ಮತ್ತು ಬೋಟ್ ಸಹಾಯದಿಂದ ಮಧ್ಯಾಹ್ನದ ವೇಳೆಗೆ ಕೆರೆಯಲ್ಲಿ ಸಿಲುಕಿದ್ದ ಮೃತದೇಹವನ್ನ ಹೊರತೆಗೆದಿದ್ದಾರೆ.

ಈ ಸಂಬಂಧ ಸ್ಥಳಕ್ಕೆ ಧಾವಿಸಿದ ತ್ಯಾಮಗೊಂಡ್ಲು ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.