ನ್ಯೂಸ್

ಯುವತಿಯ ಮುಂದೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿ

ಬೆಂಗಳೂರು: ಕಾರು ಪಾರ್ಕಿಂಗ್ ಮಾಡಿ ಕುಳಿತಿದ್ದ ಯುವತಿ ಮುಂಭಾಗ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ.

ಈ ಘಟನೆ ಮಹದೇವಪುರದ ಬಾಗಮನೆ ಟೆಕ್ ಪಾರ್ಕ್ ಸಮೀಪದ ಸರ್ವೀಸ್ ರಸ್ತೆಯಲ್ಲಿ ನಡೆದಿದ್ದು, ಈ ಬಗ್ಗೆ ಯುವತಿಯೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು, ನಿಮ್ಮ ಸಂಪರ್ಕ ಸಂಪರ್ಕ ಸಂಖ್ಯೆ ನೀಡುವಂತೆ ಕೇಳಿದ್ದು, ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

ಜ.೪ರ ರಾತ್ರಿ ೮:೪೦ ರ ಸುಮಾರಿಗೆ ಮಹದೇವಪುರದ ಬಾಗಮನೆ ಟೆಕ್ ಪಾರ್ಕ್ ಎದುರಿನ ಸರ್ವೀಸ್ ರಸ್ತೆಯಲ್ಲಿ ಕಾರನ್ನು ಪಾರ್ಕಿಂಗ್ ಮಾಡಿ, ಕಾರಿನೊಳಗೆ ಕುಳಿತಿದೆ. ಈ ವೇಳೆ ಎಲ್ಲಿಂದಲ್ಲೋ ಬಂದ ವ್ಯಕ್ತಿಯೊಬ್ಬ ಅನುಚಿತವಾಗಿ ವರ್ತಿಸಿ, ನನ್ನನ್ನು ದಿಟ್ಟಿಸುತ್ತಿದ್ದ. ಬಳಿಕ ನನ್ನ ಕಾರಿನ ಮುಂಭಾಗಕ್ಕೆ ಬಂದು ಹಸ್ತಮೈಥುನ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಈತನ ವರ್ತನೆಯಿಂದ ಹೆದರಿ ಕೂಡಲೇ ಕಾರಿನ ಡೋರ್ ಲಾಕ್ ಮಾಡಿಕೊಂಡು ಅಲ್ಲಿಂದ ಹೊರಡಲು ಮುಂದಾದೆ. ಆದರೆ, ನನ್ನ ಕಾರಿನ ಹಿಂದೆ ಇನ್ನೊಂದು ಕಾರು ಇದ್ದ ಕಾರಣಕ್ಕೆ ಅಲ್ಲಿಂದ ಹೋಗಲು ಸಾಧ್ಯವಾಗಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ.

ಹಸ್ತಮೈಥುನ ಮಾಡಿಕೊಂಡೆ, ಆ ಅಪರಿಚಿತ ವ್ಯಕ್ತಿ ತನ್ನ ಕಾರಿನ ಸುತ್ತಲು ಓಡಾಡಲು ಮುಂದಾಗಿದ್ದ. ನಂತರ ಕಾರಿನ ಬಳಿ ಬಂದು ನನ್ನ ನೋಡಿ ಸನ್ನೆ ಮಾಡಿದ್ದ. ಕೂಡಲೇ ನಾನು ಸ್ಟೆರಿಂಗ್ ಕೆಳಗೆ ಅವಿತುಕೊಂಡು, ನನ್ನ ಸೇಹಿತರಿಗೆ ಫೋನ್ ಮಾಡಿ ಕರೆಸಿಕೊಂಡೆ. ಅವರು ಬರುತ್ತಿದ್ದಂತೆ ಆತ ನಾಪತ್ತೆಯಾಗಿದ್ದ. ಆ ಬಳಿಕ ಆತನನ್ನು ಹುಡುಕಾಟ ನಡೆಸಿದರೂ, ಎಲ್ಲಿಯೂ ಪತ್ತೆಯಾಗಲಿಲ್ಲ. ಇಂಥವರಿಂದ ರಕ್ಷಣೆ ಕೊಡಿ ಎಂದು ಯುವತಿ ಟ್ವೀಟ್ ಮಾಡಿದ್ದಾರೆ.