ನ್ಯೂಸ್

ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್​ ಮನೆಯೆದುರು ಬೆಂಕಿ ಹಚ್ಚಿಕೊಳ್ಳಲು ಮುಂದಾದ ಯುವಕ; ಕಾರಣ ಕ್ಷುಲ್ಲಕ ಎನಿಸಿದರೂ ಆತನ ಹತಾಶೆ ಹಾಗಿತ್ತು...

ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಅವರ ಪಾಟ್ನಾ ನಿವಾಸದ ಎದುರು ಯುವಕನೋರ್ವ ಬೆಂಕಿ ಹಚ್ಚಿಕೊಂಡು ಸಾಯಲು ಪ್ರಯತ್ನಿಸಿದ್ದಾನೆ.

ಯುವಕನ ಹೆಸರು ಅಭಿಜಿತ್​ ಶರ್ಮಾ. ಆತ ಮುಖ್ಯಮಂತ್ರಿ ಮನೆಯೆದುರು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಲು ಕಾರಣ ಡೆಂಘೆ ಕಾಯಿಲೆ ಎನ್ನಲಾಗಿದೆ. ಹಾಗಂತ ಅವನಿಗೇನೂ ಡೆಂಘೆ ಜ್ವರ ಬಂದಿರಲಿಲ್ಲ.

ರಾಜ್ಯದಲ್ಲಿ ಡೆಂಘೆ ಜ್ವರದ ಪ್ರಮಾಣ ವಿಪರೀತವಾಗುತ್ತಿದ್ದರೂ ಅದರ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಸಾಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಎಂದು ಆರೋಪಿಸಿ ತನಗೆ ತಾನೇ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ಎಂದು ಮೂಲಗಳು ತಿಳಿಸಿವೆ.

ಈತನ ಹತ್ತಿರದ ಸಂಬಂಧಿಯೋರ್ವರು ಡೆಂಘೆಯಿಂದಲೇ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು ಎನ್ನಲಾಗಿದೆ. (ಏಜೆನ್ಸೀಸ್​)