ನ್ಯೂಸ್

ಆಸ್ಪತ್ರೆಗೆ ಸೇರಿದ 10ವರ್ಷದ ಬಾಲಕ ಡಿಸ್ಚಾರ್ಜ್ ಆದಾಗ ಮುದುಕನಾಗಿದ್ದ! ಆತನಿಗಿದ್ದ ಕಾಯಿಲೆಯಾದರೂ ಏನು?

ವಾಷಿಂಗ್ಟನ್​: ಸಾಮಾನ್ಯವಾಗಿ ಯಾರಿಗಾದರೂ ಕಾಯಿಲೆ ಬಂದರೆ ಆಸ್ಪತ್ರೆಗೆ ಹೋಗುತ್ತಾರೆ. ಆದರೆ, ಅಲ್ಲಿ ಉಳಿಯಲು ಯಾರು ಬಯಸುವುದಿಲ್ಲ? ಕೆಲವೊಮ್ಮೆ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದರೆ ಆಸ್ಪತ್ರೆಗೆ ದಾಖಲಾಗಿ ಕೆಲವು ದಿನಗಳ ನಂತರ ವಾಪಸ್ಸಾಗುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ 10ನೇ ವಯಸ್ಸಿನಲ್ಲಿ ಆಸ್ಪತ್ರೆ ಸೇರಿ 62 ನೇ ವಯಸ್ಸಿನಲ್ಲಿ ಇತ್ತೀಚೆಗೆ ಡಿಸ್ಚಾರ್ಜ್ ಆಗಿದ್ದಾರೆ.

ಆತ ಆಸ್ಪತ್ರೆಯಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ಕಳೆಯಲು ಕಾರಣ ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ. ವಿವರಗಳಿಗೆ ಹೋಗುವುದಾದರೆ.. ಅಮೆರಿಕದಲ್ಲಿ ಚಾರ್ಲ್ಸ್ ಎಂಬಾತನನ್ನು 10 ವರ್ಷದವನಾಗಿದ್ದಾಗ ಕಲಿಕಾ ನ್ಯೂನತೆ', (ನರಸಂಬಂಧಿ ಕಾಯಿಲೆ) ಯಿಂದ ಕುಟುಂಬ ಸದಸ್ಯರು ಆಸ್ಪತ್ರೆಗೆ ಕರೆದೊಯ್ದರು. ಆದರೆ ಈಗ ಚಾರ್ಲ್ಸ್ ಗೆ 62 ವರ್ಷ. ಆದರೆ ಆತನ ಆರೋಗ್ಯ ಸುಧಾರಿಸಲೇ ಇಲ್ಲ.

ಚಾರ್ಲ್ಸ್‌ನ ಸಹೋದರ ಮಾರ್ಗೋ ತನ್ನ ಸಹೋದರನನ್ನು ಆಸ್ಪತ್ರೆಯಿಂದ ಹೊರತರಲು ಹರಸಾಹಸ ಪಟ್ಟನು. ಇದರ ಪರಿಣಾಮ 62 ನೇ ವಯಸ್ಸಿನಲ್ಲಿ, ಚಾರ್ಲ್ಸ್ ಮೊದಲ ಬಾರಿಗೆ ಮನೆಗೆ ಬಂದಿದ್ದಾರೆ.

ಆಸ್ಪತ್ರೆಯಲ್ಲೇ ಬೆಳೆದ ಚಾರ್ಲ್ಸ್ ಈಗ ಹೊರಗೆ ಬಂದು ರಸ್ತೆ ಬದಿಯ ಪಬ್ ಗೆ ಹೋಗಿ ಊಟ ಮಾಡುತ್ತಾನೆ. ಒಟ್ಟಾರೆ ಐದು ದಶಕ ಆಸ್ಪತ್ರೆಯಲ್ಲಿ ಸಮಯ ಕಳೆದ ಚಾರ್ಲ್ಸ್ ಈಗ ಸ್ವಚ್ಛಂದವಾಗಿ ಬದುಕುತ್ತಿದ್ದಾನೆ.