ಕೇರಳ: ಇದೇ ಡಿ.05ರಂದು ವಿಶ್ವಾದ್ಯಂತ ಬಿಡುಗಡೆಯಾಗಿರುವ ಪುಷ್ಪ-2(Pushpa-2) ಸಿನಿಮಾ ಭಾರೀ ಹಿಟ್ ಆಗಿದ್ದು, ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿದೆ.
ಚಿತ್ರದ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತೀವೆ. ಅಲ್ಲದೇ ದೇವಿಯ ಸಾಂಗ್ವೊಂದರಲ್ಲಿ ನಟ ಅಲ್ಲು ಅರ್ಜುನ್ ಗಂಗಮ್ಮ ತಲ್ಲಿ(ಗಂಗಮ್ಮ ಜಾತ್ರೆ) ವೇಷ ಧರಿಸಿದ್ದ ಪಾತ್ರ ಸಖತ್ ವೈರಲ್ ಆಗಿದೆ. ಇದೇ ತರ ಅಲ್ಲು ಫ್ಯಾನ್ಸ್ ಕೂಡ ವೇಷ ಧರಿಸಿ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋ ತುಣುಕುಗಳು ಸಹ ಎಲ್ಲಡೆ ಹರಿದಾಡುತ್ತಿವೆ.
ಕೇರಳದಲ್ಲಿ ಇದೀಗ ಅಭಿಮಾನಿಯೊಬ್ಬರು ಗಂಗಮ್ಮ ತಲ್ಲಿ ವೇಷ ಹಾಕಿ ಕುಣಿಯುತ್ತಿರುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಹೌದು, ಕೇರಳ ಮೂಲದ ಮುಕೇಶ್ ಮೋಹನ್ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಈ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈವರೆಗೂ ಈ ಕ್ಲಿಪ್ 5 ಮೀಲಿಯನ್ ವಿಕ್ಷಣೆಯನ್ನು ಪಡೆದಿದೆ.
ಇನ್ನು ಈ ವಿಡಿಯೋದಲ್ಲಿ, 'ಇಲ್ಲಿನ ತ್ರಿಶೂರ್ ಚಿತ್ರಮಂದಿರದ ಹೊರಗೆ ಅಭಿಮಾನಿಯೊಬ್ಬ ತನ್ನ ದೇಹದ ತುಂಬಾ ನೀಲಿ ಬಣ್ಣ ಲೇಪನ ಮಾಡಿಕೊಂಡಿದ್ದು, ಮುಖಕ್ಕೆ ಕೆಂಪು ಬಣ್ಣ ಹಾಕಿಕೊಂಡು ಪುಷ್ಪ-2ರ ಗಂಗಮ್ಮ ತಲ್ಲಿ ಅವತಾರ ತಾಳಿ ಡ್ರಮ್ಸ್ಬೀಟ್ಗಳಿಗೆ ಸಾವಿರಾರು ಜನರ ಮಧ್ಯ ಡ್ಯಾನ್ಸ್ ಮಾಡುತ್ತಿದ್ದಾನೆ. ಅಲ್ಲದೆ, ಅವರ ಹೊಟ್ಟೆಯ ಮೇಲೆ ಅಲ್ಲು ಅರ್ಜುನ್ ಅವರ ಪೋಟೋವನ್ನು ಚಿತ್ರಿಕರಿಸಿದ್ದು, ನೋಡುಗರನ್ನು ಆಶ್ಚರ್ಯಪಡಿಸುತ್ತಿದ್ದಾರೆ. ಇದೀಗ ಪುಷ್ಪ-2 ಸಿನಿಮಾದ ಜತೆ ಈ ಡ್ಯಾನ್ಸ್ನ ಕ್ಲಿಪ್ ಕೂಡ ಧೂಳ್ ಎಬ್ಬಿಸುತ್ತಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಈ ವ್ಯಕ್ತಿ ದಾಸನ್ ಎಂದು ಹೇಳಲಾಗಿದೆ. ಅಲ್ಲದೆ, ಇತ ಹುಲಿವೇಷಗಳನ್ನು ಹಾಕಿ ಬೀದಿಗಳಲ್ಲಿ ಕುಣಿವುದಕ್ಕೆ ಪ್ರಸಿದ್ಧಿ ಪಡಿದ್ದಾನೆ ಎಂದು ಹೇಳಲಾಗಿದೆ, (ಏಜೆನ್ಸೀಸ್).