Dead: ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ಕಳ್ಳನೊಬ್ಬ ವ್ಯಕ್ತಿಯೊಬ್ಬ ಕಟ್ಟಡದ ಕಿಟಕಿಯಿಂದ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.
ಹೈದರಾಬಾದ್ನ ಗಾಂಧಿಭವನದ ಹಿಂಭಾದಲ್ಲಿರುವ ಕಟ್ಟಡಕ್ಕೆ ಕಳ್ಳನೊರ್ವ ಭಾನುವಾರ ತಡರಾತ್ರಿ(ಮಾ.23) ನುಗ್ಗಿದ್ದಾನೆ. ಮೊದಲ ಮಹಡಿಯಲ್ಲಿ ಯಾರೋ ಓಡಾಡುತ್ತಿದ್ದಾರೆ ಎಂದು ಬಿಲ್ಡಿಂಗ್ನ ಕೆಲವರು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನು ತಿಳಿದ ಕಳ್ಳ ಕಟ್ಟಡದಿಂದ ತಪ್ಪಿಸಿಕೊಳ್ಳಲು ಕಿಟಕಿಯಿಂದ ಜಂಪ್ ಮಾಡಿದ್ದಾನೆ.
ಆತ ಕುಡಿದಿದ್ದರಿಂದ ಎದ್ದು ಹೋಗುತ್ತಾನೆ ಎಂದು ಬಿಲ್ಡಿಂಗ್ ಪಕ್ಕದ ನಿವಾಸಿಗಳು ಅಂದುಕೊಂಡಿದ್ದಾರೆ. ಆದರೆ, ಬೆಳಗ್ಗೆ ನೋಡಿದರೆ, ಕೆಳಗೆ ಬಿದ್ದ ಇತ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಅನುಮಾನಾಸ್ಪದ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಶವಪರೀಕ್ಷೆಯ ವರದಿಯ ಆಧಾರದ ಮೇಲೆ ಅಗತ್ಯವಿದ್ದರೆ ಪ್ರಕರಣದ ವಿಭಾಗಗಳನ್ನು ಬದಲಾಯಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.(ಏಜೆನ್ಸೀಸ್)