ನ್ಯೂಸ್

ಅತ್ತೆ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಅಳಿಮಯ್ಯ!

Mandara

ಜೈಪುರ: ಅತ್ತೆ ಮನೆಯ ಎದುರೇ ಅಳಿಯ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜಸ್ಥಾನದ ಜಾಲ್ವಾರ್​ನಲ್ಲಿ ನಡೆದಿದೆ.

ಪವನ್​ ಅಗರ್​ವಾಲ್​ ಹೆಸರಿನ ವ್ಯಕ್ತಿ ಸಾಕಷ್ಟು ಸಾಲ ಮಾಡಿಕೊಂಡಿದ್ದ. ಅದರ ಜತೆ ಕುಟುಂಬದೊಂದಿಗೂ ಜಗಳ ಆಡಿಕೊಂಡಿದ್ದ ಎನ್ನಲಾಗಿದೆ. ಸಾಕಷ್ಟು ನೋವುಗಳಿಂದ ಬಳಲಿದ್ದ ಆತ ಅತ್ತೆ ಮನೆಗೆ ಬಂದಿದ್ದಾನೆ. ಮನೆಯ ಎದುರಿಗೆ ನಿಂತು ದೇಹಕ್ಕೆ ಬೆಂಕಿ ಹಚ್ಚಿಕೊಂಡಿದ್ದಾನೆ. ಹೊತ್ತಿ ಉರಿಯುತ್ತಿದ್ದ ಬೆಂಕಿ ನೋಡಿ ಸುತ್ತ ಮುತ್ತಲಿನ ಜನರು ಓಡಿಬಂದು ಆತನ ಮೇಲೆ ನೀರು ಸುರಿದಿದ್ದಾರೆ.

ಪವನ್​ ಬೆಂಕಿ ಹಚ್ಚಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್​)