ನ್ಯೂಸ್

ಮೆಜೆಸ್ಟಿಕ್​ ಸಮೀಪ ರೈಲ್ವೆ ಬ್ರಿಡ್ಜ್​ ಕೆಳಗೆ ಸಿಲುಕಿದ ಲಾರಿ: ಟ್ರಾಫಿಕ್​ ಜಾಮ್​

ಬೆಂಗಳೂರು: ಮೆಜೆಸ್ಟಿಕ್​ ರೈಲ್ವೆ ನಿಲ್ದಾಣ ಸಮೀಪದ ರೈಲ್ವೆ ಬ್ರಿಡ್ಜ್​ ಕೆಳಗೆ ಸೋಮವಾರ ಬೆಳ್ಳಂಬೆಳಗ್ಗೆ ಭಾರೀ ಗಾತ್ರದ ಲಾರಿಯೊಂದು ಸಿಲುಕಿದ್ದು, ಟ್ರಾಫಿಕ್​ ಜಾಮ್ ಉಂಟಾಗಿದೆ.

ಬ್ರಿಡ್ಜ್​ನ ಕೆಳಗೆ ಭಾರೀ ಗಅತ್ರದ ವಾಹನಗಳು ಸಂಚರಿಸಲು ಸಾಧ್ಯವಿಲ್ಲ. ಆದರೂ ಲಾರಿ ಚಾಲಕ ಎತ್ತರದ ಮಿತಿ ಗೊತ್ತಿಲ್ಲದೆ ಬ್ರಿಡ್ಜ್​ನ ಕೆಳಗೆ ನುಗ್ಗಿದ್ದು, ಲಾರಿ ಸಿಲುಕಿದೆ. ಲಾರಿಯನ್ನ ಹೊರ ತೆಗೆಯಲು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ಬೆಂಗಳೂರು ನಗರದ ಕೇಂದ್ರವಾದ ಮೆಜೆಸ್ಟಿಕ್​ ಬಳಿ ಸದಾ ವಾಹನ ದಟ್ಟಣೆ ಹೆಚ್ಚಾಗಿರುತ್ತೆ. ಇನ್ನು ಲಾರಿ ಸಿಲುಕಿರುವ ಪರಿಣಾಮ ಸುಮಾರು ದೂರ ಟ್ರಾಫಿಕ್​ ಜಾಮ್ ಉಂಟಾಗಿದ್ದು, ವಾಹನ ಸವಾರರು ಮತ್ತು ಪ್ರಯಾಣಿಕರು ಪರದಾಡುತ್ತಿದ್ದಾರೆ.