Rahul Gandhi: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಂದ "ಮತ ಕಳ್ಳತನ" ಅರೋಪಕ್ಕೆ ಗುರಿಯಾಗಿರುವ ಗುರ್ಕಿರತ್ ಸಿಂಗ್ ಡಾಂಗ್, ತಮ್ಮ ಮೇಲೆ ಹೊರಿಸಿರುವ ಆಪಾದನೆಯನ್ನು ಸಾಬೀತುಪಡಿಸಲು ಪುರಾವೆಗಳನ್ನು ಒದಗಿಸಬೇಕೆಂದು ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ರಾಹುಲ್ ಗಾಂಧಿ ಪತ್ರಿಕಾಗೋಷ್ಠಿಯಲ್ಲಿನ ಆರೋಪಗಳಿಗೆ ತಿರುಗೇಟು ನೀಡಿರುವ ಗುರ್ಕಿರತ್, ಇದು ಆಧಾರರಹಿತ ಆರೋಪವಾಗಿದ್ದು, ತಾವೂ 4 ಬಾರಿ ಮತ ಚಲಾಯಿಸಿದ್ದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದ್ದಾರೆ. ನಾಲ್ಕು ವೋಟರ್ ಐಡಿಗಳು ಇದ್ದಿದ್ದು ನಿಜ, ಆದರೆ, ನಿಯಮಗಳ ಪ್ರಕಾರ ನಾನು ಅವುಗಳ ರದ್ದತಿಗೆ ಅರ್ಜಿ ಈ ಮೊದಲೇ ಅರ್ಜಿ ಸಲ್ಲಿಸಿದ್ದೆ ಎಂದರು. ಈ ವಿಷಯವಾಗಿ ಅವರ ಕುಟುಂಬಕ್ಕೆ ಕಿರುಕುಳ ನೀಡಲಾಗುತ್ತಿದ್ದು, ವಿನಾಕಾರಣ ತಮ್ಮನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿದ್ದಕ್ಕಾಗಿ ಯೂಟ್ಯೂಬರ್ ವಿರುದ್ಧ ದೂರು ನೀಡುವುದಾಗಿ ತಿಳಿಸಿದ್ದಾರೆ.
ಈ ವಿಷಯವಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ, ರಾಹುಲ್ ಗಾಂಧಿ ಮಾಡಿದ ಪ್ರತಿಯೊಂದು ಆರೋಪಗಳು ಸತ್ಯಾಸತ್ಯತೆಯ ಪರಿಶೀಲನೆಯಲ್ಲಿ ಕುಸಿದಿವೆ ಎಂದರು.
ಆಗಸ್ಟ್ 7 ರಂದು ರಾಹುಲ್ ಗಾಂಧಿ ಮತ ಕಳ್ಳತನದ ಬಗ್ಗೆ ಮಾತನಾಡುತ್ತಾ, ಭಾರತದಲ್ಲಿ ಚುನಾವಣೆ ಮೋಸದಿಂದ ನಡೆಯುತ್ತಿದ್ದು, ಇದಕ್ಕೆ ಚುನಾವಣಾ ಆಯೋಗ ಕೈ ಜೋಡಿಸಿದೆ. ಪ್ರತಿಯೊಂದು ಪ್ರಜಾಪ್ರಭುತ್ವದಲ್ಲೂ ಎಲ್ಲ ಸರ್ಕಾರಗಳಿಗೂ ಆಡಳಿತ ವಿರೋಧಿ ಅಲೆ ಇರುತ್ತದೆ. ಆದರೆ ಯಾವುದೋ ಕಾರಣಕ್ಕೂ ಆ ವಿರೋಧಿ ಅಲೆಗೆ ಬಳಲದ ಏಕೈಕ ಪಕ್ಷ ಬಿಜೆಪಿ ಮಾತ್ರ ಎಂದಿದ್ದರು.
ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ಬಗ್ಗೆ ಉಲ್ಲೇಖಿಸುತ್ತಾ, ಗುರ್ಕಿರತ್ ಸಿಂಗ್ ಡಾಂಗ್ ಹೆಸರು ಪ್ರಸ್ತಾಪಿಸಿ, ಒಂದೇ ಕ್ಷೇತ್ರದ ನಾಲ್ಕು ವಿಭಿನ್ನ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಿದ್ದರು.(ಏಜೆನ್ಸೀಸ್)