ನ್ಯೂಸ್

ಜಸ್ಟ್​ಪಾಸ್ ಮಾಡುವಂತೆ ದೈವಕ್ಕೆ ಪತ್ರ

ಕುಂದಾಪುರ(ಉಡುಪಿ): ಪರೀಕ್ಷೆಯಲ್ಲಿ ನನಗೆ ಜಸ್ಟ್ ಪಾಸ್ ಆಗುವಷ್ಟು ಅಂಕ ಬೇಕು ಎಂದು ಬೇಡಿಕೆ ಇರಿಸಿ, ಹಕ್ಲಾಡಿ ಸಮೀಪದ ಹೊಮ್ಮಿದೆಯ ಹೊಳ್ಮಗೆ ಹೊರ್ ಬೊಬ್ಬರ್ಯ ದೈವಸ್ಥಾನದ ಕಾಣಿಕೆ ಹುಂಡಿಗೆ ಬೇಡಿಕೆ ಪಟ್ಟಿಯನ್ನು ವಿದ್ಯಾರ್ಥಿಯೊಬ್ಬ ಸಲ್ಲಿಸಿದ್ದು, ಪತ್ರದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಸ್ಟ್ ಪಾಸ್ ಮಾಡುವಂತೆ ಮನವಿ ಮಾಡಿರುವ ವಿದ್ಯಾರ್ಥಿ, ಗಣಿತದಲ್ಲಿ 36-39, ಇಂಗ್ಲಿಷ್​ನಲ್ಲಿ 37-39, ಕನ್ನಡದಲ್ಲಿ 39-40, ವಿಜ್ಞಾನದಲ್ಲಿ 38-39, ಹಿಂದಿಯಲ್ಲಿ 39-40, ಸಮಾಜದಲ್ಲಿ 37-38 ಅಂಕಗಳು ಸಿಗಲಿ. ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ ಇರಬೇಕು ದೇವರೇ ಹೊರ್ ಬೊಬ್ಬರ್ಯ, ಇದಕ್ಕಿಂತಲೂ ನನಗೆ ಕಡಿಮೆ ಬೇಡ ಎಂದು ಬರೆಯಲಾಗಿದೆ. ಆದರೆ ಪತ್ರದಲ್ಲಿ ಯಾವುದೇ ಹೆಸರಿಲ್ಲ.