ಬೀರೂರು ಸಮೀಪ ಬ್ಯಾಗಡೇಹಳ್ಳಿ ಗ್ರಾಮದ ಬಳಿ ಬೋನಿಗೆ ಬಿದ್ದಿರುವ ಚಿರತೆ.  
ನ್ಯೂಸ್

ಬ್ಯಾಗಡೇಹಳ್ಳಿಯಲ್ಲಿ ಬೋನಿಗೆ ಬಿದ್ದ ಚಿರತೆ

ಬೀರೂರು: ಸಮೀಪದ ಅಮೃತ್‌ಮಹಲ್ ಕಾವಲ್‌ಗೆ ಹೊಂದಿಕೊಂಡಿರುವ ಬ್ಯಾಗಡೇಹಳ್ಳಿ ಗ್ರಾಮದ ಬಳಿ ಶನಿವಾರ 4 ವರ್ಷದ ಗಂಡು ಚಿರತೆ ಸೆರೆ ಸಿಕ್ಕಿದೆ.
ನಾಲ್ಕೈದು ದಿನಗಳಿಂದ ಚಿರತೆ ಸಂಚಾರ ಮಾಡುತ್ತಿರುವ ಬಗ್ಗೆ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಅದರಂತೆ ಚಿರತೆಯ ಜಾಡು ಹಿಡಿದು ಬೋನು ಇರಿಸಲಾಗಿತ್ತು. ಆಹಾರ ಅರಿಸಿಕೊಂಡು ಬಂದಿರುವ ಚಿರತೆ ರಾತ್ರಿ ಬೋನಿನಲ್ಲಿ ಬಿದ್ದಿದೆ. ಚಿರತೆ ಆರೋಗ್ಯಯುತವಾಗಿದ್ದು ಮೀಸಲು ಅರಣ್ಯ ಪ್ರದೇಶಕ್ಕೆ ಬಿಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದರು.
ಚಿರತೆ ಬೋನಿಗೆ ಬಿದ್ದಿರುವ ವಿಷಯ ತಿಳಿದ ತಕ್ಷಣ ಬೀರೂರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನೋಡಲು ಜಮಾಯಿಸಿದ್ದರು. ಕೆಲವರು ಮೊಬೈಲ್‌ನಲ್ಲಿ ೆಟೋ ಕ್ಲಿಕ್ಕಿಸಿಕೊಂಡು ಮೈಮರೆಯುತ್ತಿದ್ದರೆ, ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಗಾಬರಿಗೊಂಡಿದೆ ದೂರ ಸರಿಯಿರಿ ಎಂದು ಕಳಿಸುವುದರಲ್ಲಿ ಸುಸ್ತಾದರು.
ಕಾರ್ಯಾಚರಣೆಯಲ್ಲಿ ಆರ್‌ಎ್ಒ ರಜಿತಾ ಸಾಬ್ ನಾಡಾಸ್, ಡಿವೈಆರ್‌ಎ್ಒ ರವಿಕುಮಾರ್, ಸಂತೋಷ್ ಕುಮಾರ್, ಸಿಬ್ಬಂದಿ ಪ್ರಸನ್ನ, ರವಿಕುಮಾರ್, ಜಯಪ್ರಕಾಶ್ ಇದ್ದರು.