ನ್ಯೂಸ್

ದೇವೇಗೌಡ- ಸಿದ್ದರಾಮಯ್ಯ ನಮ್ಮ ಆಸ್ತಿ... ಅವರಿಬ್ಬರೂ ಚೆನ್ನಾಗಿರ್ಬೇಕು: ಈಶ್ವರಪ್ಪ

arunakunigal

ಬೆಂಗಳೂರು: ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಚೆನ್ನಾಗಿರಬೇಕು. ಅವರಿಬ್ಬರೂ ನಮ್ಮ ಆಸ್ತಿ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಅರೆ, ಇದ್ಹೇನಿದು ದೇವೇಗೌಡ ಮತ್ತು ಸಿದ್ದರಾಮಯ್ಯ ಅವರು ಈಶ್ವರಪ್ಪಗೆ ಆಸ್ತಿನಾ? ಅದ್ಹೇಗೆ ಎಂದೆಲ್ಲ ಹುಬ್ಬೇರಿಸಬೇಡಿ. ನಮ್ಮ ಆಸ್ತಿ ಅಂದಿದ್ದರ ಒಳಾರ್ಥ ಬೇರೆಯೇ ಇದೆ.

ಕರೊನಾ ರೂಲ್ಸ್​ಗೂ ಡೋಂಟ್​ ಕೇರ್​. ಮೇಕೆದಾಟು ಪಾದಯಾತ್ರೆ ಮಾಡಿಯೇ ಮಾಡುತ್ತೇವೆ ಎಂದು ಕಾಂಗ್ರೆಸ್​ ಹೇಳಿದೆ. ಈ ಕುರಿತು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಮತ್ತು ದೇವೇಗೌಡರು ನಮ್ಮ ಆಸ್ತಿ. ಅವರು ಚೆನ್ನಾಗಿರಲಿ ಎಂಬುದು ನಮ್ಮ‌ ಭಾವನೆ. ಅದಕ್ಕೆ ಈಗ ಪಾದಯಾತ್ರೆಯನ್ನ ಮಾಡಬೇಡಿ ಎಂದಿದ್ದೇವೆ. ಮಾಡೇ ಮಾಡ್ತೇವೆ ಅಂದ್ರೆ ಅವರಿಗೆ ಸೇರಿದ್ದು. ಮುಂದೆ ಅದರ ಬಗ್ಗೆ ನೋಡೋಣ ಎಂದರು.