ನ್ಯೂಸ್

ಡಿಕೆಶಿ ಕೈಗೆ ಪೆಟ್ಟು: ತಡವಾಗಿ ಭಾರತ್​ ಜೋಡೋ ಪಾದಯಾತ್ರೆಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರ ಮುಂಗೈಗೆ ಪೆಟ್ಟಾಗಿದ್ದು, ಪರಿಣಾಮ ಇಂದು ತಡವಾಗಿ ಭಾರತ್​ ಜೋಡೋ ಪಾದಯಾತ್ರೆಗೆ ತೆರಳಿದ್ದಾರೆ.

ನಿನ್ನೆ(ಶುಕ್ರವಾರ) ದೆಹಲಿಯ ಇಡಿ ಕಚೇರಿಗೆ ತೆರಳಿ ವಿಚಾರಣೆ ಎದುರಿಸಿ ಡಿಕೆಶಿ ವಾಪಸ್​ ಆಗಿದ್ದರು. ಮನೆ ಬಳಿ ಕೈ ಇಟ್ಟು ಏಳುವ ಸಂದರ್ಭದಲ್ಲಿ ಏರ್ ಕ್ರ್ಯಾಕ್ ಆಗಿದೆ.

ನೋವಿದ್ದ ಕಾರಣ ಇಂದು ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಂಡರು. ಎಕ್ಸ್​ರೇ ತೆಗೆದಾಗ ಮುಂಗೈನಲ್ಲಿ ಸಣ್ಣ ಏರ್ ಕ್ರ್ಯಾಕ್ ಆಗಿರುವುದು ಗೊತ್ತಾಗಿದೆ.

ವೈದ್ಯರು ಚಿಕಿತ್ಸೆ ನೀಡಿ ಕೈಗೆ ಬ್ಯಾಂಡೇಜ್ ಹಾಕಿದ್ದಾರೆ. ಹಾಗಾಗಿ ತಡವಾಗಿ ಅಂದರೆ ಮಧ್ಯಾಹ್ನ 12.30ರ ವೇಳೆಗೆ ಭಾರತ್​ ಜೋಡೋ ಪಾದಯಾತ್ರೆಯನ್ನ ಸೇರಿಕೊಂಡಿದ್ದಾರೆ.