ಬೆಂಗಳೂರು: ಶಿಕ್ಷಣ ಸಚಿವಾಲಯದ ಉನ್ನತ ಶಿಕ್ಷಣ ಇಲಾಖೆಯಿಂದ 13 ರಾಜ್ಯಗಳಲ್ಲಿರುವ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಿರ್ದೇಶಕರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಸಿಕ್ಕಿಂ, ಮೇಘಾಲಯ, ಗೋವಾ, ಕರ್ನಾಟಕ (ಸುರತ್ಕಲ್), ಭೂಪಾಲ್ (ಮಧ್ಯಪ್ರದೇಶ), ವರಂಗಲ್ (ತೆಲಂಗಾಣ), ರಾಯ್ಪುರ (ಚತ್ತೀಸ್ಗಡ), ಪಾಟ್ನಾ (ಬಿಹಾರ್), ಶ್ರೀನಗರ್ (ಜಮ್ಮು ಮತ್ತು ಕಾಶ್ಮೀರ), ಜಮ್ಶೆಡ್ಪುರ (ಅಸ್ಸಾಂ), ದುರ್ಗಾಪುರ (ವೆಸ್ಟ್ ಬೆಂಗಾಳ) ಮತ್ತು ತ್ರಿಪುರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
2,10,000 ರೂ. ಮಾಸಿಕ ವೇತನದೊಂದಿಗೆ ಇತರ ಸರ್ಕಾರಿ ಭತ್ಯೆ ಇರಲಿದೆ. ಪಿಎಚ್ಡಿ ಪದವಿಯೊಂದಿಗೆ ನಾಯಕತ್ವ ಗುಣ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ವೃತ್ತಿ ಅನುಭವ ಕೇಳಲಾಗಿದೆ. ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. 7 ವರ್ಷದ ಅವಧಿಗೆ ತಾತ್ಕಾಲಿಕ ನೇಮಕ ಪ್ರಕ್ರಿಯೆ ಮಾಡಲಾಗುತ್ತಿದ್ದು, 70 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೇ ದಿನ: 21/4/2022
ಮಾಹಿತಿಗೆ: www.nitcouncil.org.in