ಟೊಕಿಯೋ: ಪ್ರಪಂಚದ ಅತ್ಯಂತ ಹಿರಿಯ ವ್ಯಕ್ತಿ ಎನಿಸಿಕೊಂಡಿದ್ದ ಚಿಟೆಟ್ಸು ವಟನಾಬೆ ಭಾನುವಾರಂದು ತಮ್ಮ ಕೊನೆಯುಸಿರೆಳೆದಿದ್ದಾರೆ. 112 ವರ್ಷಗಳ ಕಾಲ ಬದುಕಿದ್ದ ಚಿಟೆಟ್ಸು ಎರಡು ವಾರಗಳ ಹಿಂದಷ್ಟೇ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಬರೆದಿದ್ದರು.
ಚಿಟೆಟ್ಸುಗೆ ಐವರು ಮಕ್ಕಳಿದ್ದಾರೆ. ಇತ್ತೀಚೆಗೆ ನಡೆದಿದ್ದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಸದಾ ನಗುತ್ತಿದ್ದರೆ ಹೆಚ್ಚು ವರ್ಷ ಬದುಕಬಹುದು ಎಂದು ಹೇಳಿದ್ದರು. ಸಿಹಿ ತಿಂಡಿ ಎಂದರೆ ಇಷ್ಟ ಎಂದಿದ್ದ ಚಿಟೆಟ್ಸು ತಾನು ಸಾಕಷ್ಟು ಸಿಹಿ ತಿಂಡಿ ಬದುಕಿರುವುದಾಗಿಯೂ ತಿಳಿಸಿದ್ದರು.
ಜಪಾನ್ನ ವಿಶ್ವದಲ್ಲೇ ಅತೀ ಹೆಚ್ಚು ಜೀವಿತಾವಧಿ ಹೊಂದಿರುವ ದೇಶವೆನಿಸಿಕೊಂಡಿದೆ. ಇದುವರೆಗೆ ಪ್ರಪಂಚದ ಅತ್ಯಂತ ಹಿರಿಯ ವಯಸ್ಕರು ಎನಿಸಿಕೊಂಡಿರುವವರು ಬಹುಪಾಲು ಜನರು ಜಪಾನ್ ಮೂಲದವರೇ ಆಗಿದ್ದಾರೆ. ಇದುವರೆಗೆ ಅತಿ ಹೆಚ್ಚು ವರ್ಷ ಬದುಕಿದ್ದವರಲ್ಲಿ ಫ್ರಾನ್ಸ್ನ ಜೀನ್ ಲೂಯಿಸ್ ಕ್ಯಾಲ್ಮೆಂಟ್ (122) ಮೊದಲಿಗರಾಗಿದ್ದಾರೆ. ಅವರು 1997ರಲ್ಲಿ ಕೊನೆಯುಸಿರೆಳೆದಿದ್ದರು. (ಏಜೆನ್ಸೀಸ್)