ನ್ಯೂಸ್

ಹಕ್ಕಿಜ್ವರಕ್ಕೆ 11 ವರ್ಷದ ಬಾಲಕ ಬಲಿ! ಇದು ದೇಶದ ಮೊದಲ ಪ್ರಕರಣ

ದೆಹಲಿ: ಕರೊನಾ ಮೊದಲ ಮತ್ತು ಎರಡನೇ ಅಲೆಗೆ ಇಡೀ ದೇಶವೇ ತತ್ತರಿಸಿದ್ದು, ಮೂರನೇ ಅಲೆಯ ಆತಂಕದಲ್ಲಿ ದಿನದೂಡುತ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರಕ ಕಾಯಿಲೆ ಹಕ್ಕಿ ಜ್ವರ ಮತ್ತಷ್ಟು ಭೀತಿ ಹುಟ್ಟಿಸಿದೆ. ಹಕ್ಕಿಜ್ವರಕ್ಕೆ 11 ವರ್ಷದ ಬಾಲಕ ಬಲಿಯಾಗಿದ್ದು, ಇದು ಈ ವರ್ಷ ಭಾರತದಲ್ಲಿ ಮೊದಲ ಸಾವಾಗಿದೆ.

ದೆಹಲಿಯಲ್ಲಿರುವ ಅಖಿಲ ಭಾರತ ವಿಜ್ಞಾನ ಸಂಸ್ಥೆ(ಏಮ್ಸ್​ ಆಸ್ಪತ್ರೆ)ಗೆ ಜು.2ರಂದು ದಾಖಲಾಗಿದ್ದ 11 ವರ್ಷದ ಬಾಲಕನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು. ಬಾಲಕನನ್ನು ಉಳಿಸಿಕೊಳ್ಳಲು ವೈದ್ಯರು ಹರಸಾಹಸ ಪಟ್ಟರಾದರೂ ಫಲಿಸಲಿಲ್ಲ. ಮಂಗಳವಾರ ಆಸ್ಪತ್ರೆಯಲ್ಲೇ ಬಾಲಕ ಕೊನೆಯುಸಿರೆಳೆದಿದ್ದಾನೆ. ಮೃತ ಬಾಲಕ ನ್ಯುಮೋನಿಯಾದಿಂದಲೂ ಬಳಲುತ್ತಿದ್ದ. ಆಸ್ಪತ್ರೆಗೆ ದಾಖಲಾದ ಆರಂಭದಲ್ಲಿ ಕರೊನಾ ಟೆಸ್ಟ್ ಮಾಡಲಾಗಿತ್ತು. ವರದಿಯು ನೆಗೆಟಿವ್​ ಬಂದಿತ್ತು.

ಮನುಷ್ಯ, ಪ್ರಾಣಿ-ಪಕ್ಷಿಗಳಿಗೂ ಬಹುಬೇಗ ಹರಡುವ ಹಕ್ಕಿ ಜ್ವರ ಶೇ.60ರಷ್ಟು ಸಾವಿನ ಪ್ರಮಾಣ ಹೊಂದಿದೆ. ಹಾಗಾಗಿ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ.