ನ್ಯೂಸ್

ಚಿನ್ನದ ದರದಲ್ಲಿ ಭಾರಿ ಇಳಿಕೆ

ನವದೆಹಲಿ: ಸತತ ಬೆಲೆ ಏರಿಕೆ ಮೂಲಕ ಆಭರಣ ಪ್ರಿಯರಿಗೆ ಶಾಕ್ ನೀಡಿದ್ದ ಚಿನ್ನದ ದರದಲ್ಲಿ ಮಂಗಳವಾರ ಭಾರಿ ಇಳಿಕೆ ಕಂಡಿದೆ. ದೆಹಲಿಯಲ್ಲಿ ಚಿನ್ನದ ಬೆಲೆ -ಠಿ; 1,317 ತಗ್ಗಿದ್ದು, ಪ್ರತಿ 10 ಗ್ರಾಂಗೆ -ಠಿ; 54,763ಕ್ಕೆ ತಲುಪಿದೆ. ಚಿನ್ನದ ದರ 56 ಸಾವಿರದ ಗಡಿ ದಾಟಿತ್ತು. ಬೆಳ್ಳಿ ದರದಲ್ಲೂ -ಠಿ; 2,943 ಇಳಿಕೆ ಕಂಡಿದ್ದು, ಪ್ರತಿ ಕೆ.ಜಿಗೆ -ಠಿ; 73,600ಕ್ಕೆ ಮುಟ್ಟಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಪ್ರತಿ ಔನ್ಸ್​ಗೆ 1,989 ಡಾಲರ್ ಆಗಿದ್ದು, ಬೆಳ್ಳಿ ಪ್ರತಿ ಔನ್ಸ್​ಗೆ 27.90 ಡಾಲರ್ ತಲುಪಿದೆ.

ಮುಂಬೈ ಷೇರುಮಾರುಕಟ್ಟೆಯಲ್ಲಿ ಮಂಗಳವಾರ 224.93 (ಶೇ.0.59) ಅಂಶ ಏರಿಕೆ ಕಂಡು 38,407.01ಕ್ಕೆ ದಿನದ ವಹಿವಾಟು ಅಂತ್ಯಗೊಳಿಸಿದೆ. ನಿಫ್ಟಿ ಕೂಡ 52.35 (ಶೇ.0.46) ಅಂಶ ಏರಿಕೆ ಕಂಡು 11,322.50ಕ್ಕೆ ವಹಿವಾಟು ಮುಗಿಸಿದೆ. ಸೆನ್ಸೆಕ್ಸ್​ನ 30 ಪ್ರಮುಖ ವಲಯದಲ್ಲಿ ಆಕ್ಸಿಸ್ ಬ್ಯಾಂಕ್ ಷೇರು ಮೌಲ್ಯ ಶೇ.3.96 ಹೆಚ್ಚಾಗಿದೆ. ನಂತರದ ಸ್ಥಾನಗಳಲ್ಲಿ ಇಂಡಸ್​ಲ್ಯಾಂಡ್ ಬ್ಯಾಂಕ್, ಐಟಿಸಿ, ಎಚ್​ಡಿಎಫ್​ಸಿ ಬ್ಯಾಂಕ್, ಟಾಟಾ ಸ್ಟೀಲ್, ಎಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಇವೆ. ಮತ್ತೊಂದೆಡೆ ಟೈಟಾನ್, ಭಾರ್ತಿ ಏರ್​ಟೆಲ್, ಎಚ್​ಸಿಎಲ್ ಟೆಕ್ ಮತ್ತು ಒಎನ್​ಜಿಸಿ ಷೇರು ಮೌಲ್ಯ ಶೇ.3.73 ಇಳಿಕೆ ಕಂಡಿವೆ. ಡಾಲರ್ ಎದುರು ರೂಪಾಯಿ ಮೌಲ್ಯ 12 ಪೈಸೆ ಹೆಚ್ಚಾಗಿದ್ದು, ಪ್ರತಿ ಡಾಲರ್​ಗೆ -ಠಿ; 74.78ಕ್ಕೆ ತಲುಪಿದೆ.