ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ಹಿರಿಯೂರು ಶಾಸಕಿ ಪತಿ ದರ್ಬಾರ್​! ಸರ್ಕಾರಿ ಬ್ಯಾನರ್​ನಲ್ಲೂ ರಾರಾಜಿಸಿದ ಶ್ರೀನಿವಾಸ್

ಚಿತ್ರದುರ್ಗ: ಸರ್ಕಾರಿ ಕಾರ್ಯಕ್ರಮದಲ್ಲಿ ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಶ್ರೀನಿವಾಸ್ ದರ್ಬಾರ್​ ನಡೆಸಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಹಿರಿಯೂರು ಹೊರವಲಯದ ಆದಿವಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 25 ಕೋಟಿ ರೂ. ವೆಚ್ಚದ ಮಲ್ಟಿ ಸ್ಪೆಷಾಲಿಟಿ ತಾಲೂಕು ಆಸ್ಪತ್ರೆ ಉದ್ಘಾಟನೆ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಶಾಸಕಿ ಪೂರ್ಣಿಮಾ ಮಾಡಬೇಕಿದ್ದ ಪ್ರಾಸ್ತಾವಿಕ ಭಾಷಣವನ್ನು ಅವರ ಪತಿ ಶ್ರೀನಿವಾಸ್​ ಮಾಡಿದ್ದಾರೆ.

ಪ್ರಾಸ್ತಾವಿಕ ಭಾಷಣ ಮಾಡಿದ ಶ್ರೀನಿವಾಸ್​.

ಕೇಂದ್ರ ಸಚಿವ ನಾರಾಯಣಸ್ವಾಮಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಜತೆ ಸರ್ಕಾರಿ ಕಾರ್ಯಕ್ರಮದಲ್ಲಿ ಶಾಸಕಿ ಪತಿ ಶ್ರೀನಿವಾಸ್​ ವೇದಿಕೆ ಹಂಚಿಕೊಂಡಿದ್ದಾರೆ.

ಸಚಿವ ಸುಧಾಕರ್​ ಜತೆ ವೇದಿಕೆ ಹಂಚಿಕೊಂಡ ಶ್ರೀನಿವಾಸ್

ಶಿಷ್ಟಾಚಾರ ಉಲ್ಲಂಘನೆಯಾದ್ರೂ ಜಿಲ್ಲಾಡಳಿತ ಮತ್ತು ಸಚಿವರು ಸುಮ್ಮನಿದ್ದದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರಿ ಬ್ಯಾನರ್​ನಲ್ಲೂ ಶ್ರೀನಿವಾಸ್ ಭಾವಚಿತ್ರ ರಾರಾಜಿಸಿದೆ. ಶಾಸಕಿ ಪೂರ್ಣಿಮಾ ಹೇಳಬೇಕಿದ್ದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆಯೂ ಸಚಿವರ ಮುಂದೆ ಶ್ರೀನಿವಾಸ್ ಅವರೇ ಮಾತನಾಡಿದ್ದಾರೆ.