ತಿ.ನರಸೀಪುರದ ವಿದ್ಯೋದಯ ಕಾಲೇಜು ಆವರಣದಲ್ಲಿ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ, ಕನ್ನಡ ಚಿತ್ರರಂಗದ ಅಭಿನಯ ಶಾರದೆ ಬಿ.ಸರೋಜಾದೇವಿ ಹಾಗೂ ಮಾಜಿ ಉಪ ಸಭಾಪತಿ ತಿಪ್ಪಣ್ಣ ಅವರಿಗೆ ತಾಲೂಕು ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೆ.ಎನ್.ಪ್ರಭುಸ್ವಾಮಿ, ಕಿರಗಸೂರು ಶಂಕರ್, ಜ್ಞಾನೇಂದ್ರಮೂರ್ತಿ, ಮೂಗೂರು ಕುಮಾರಸ್ವಾಮಿ ಇತರರು ಇದ್ದರು. 
ನ್ಯೂಸ್

ಅಗಲಿದ ಗಣ್ಯರಿಗೆ ನುಡಿನಮನದೊಂದಿಗೆ ಶ್ರದ್ಧಾಂಜಲಿ

ತಿ.ನರಸೀಪುರ: ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ಬುಧವಾರ ಸಂಜೆ ಹಿರಿಯ ಪತ್ರಕರ್ತ ಕೆ.ಬಿ.ಗಣಪತಿ, ಕನ್ನಡ ಚಿತ್ರರಂಗದ ಅಭಿನಯ ಶಾರದೆ ಬಿ.ಸರೋಜಾದೇವಿ ಹಾಗೂ ಮಾಜಿ ಉಪ ಸಭಾಪತಿ ತಿಪ್ಪಣ್ಣ ಅವರಿಗೆ ತಾಲೂಕು ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮೈಸೂರು ಪತ್ರಿಕೋದ್ಯಮದ ಭೀಷ್ಮ ಎನಿಸಿದ್ದ ಕೆ.ಬಿ.ಗಣಪತಿ, ಕನ್ನಡ ಚಿತ್ರರಂಗದ ಅಭಿನಯ ಶಾರದೆ ಬಿ.ಸರೋಜಾದೇವಿ ಹಾಗೂ ಮಾಜಿ ಉಪ ಸಭಾಪತಿ ತಿಪ್ಪಣ್ಣನವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ ಕೆಲವು ನಿಮಿಷಗಳ ಕಾಲ ಮೌನಾಚರಣೆಯ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಆಗಲಿದ ಮೂವರು ಗಣ್ಯರಿಗೂ ಸಂತಾಪ ನುಡಿಗಳ ಮೂಲಕ ಅಕ್ಷರ ನಮನ ಸಲ್ಲಿಸಲಾಯಿತು.

ಚೌಹಳ್ಳಿ ಲಿಂಗರಾಜಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಕೆ.ಎನ್.ಪ್ರಭುಸ್ವಾಮಿ, ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ವಕೀಲ ಜ್ಞಾನೇಂದ್ರಮೂರ್ತಿ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಎನ್.ಲೋಕೇಶ್, ಮೊಬೈಲ್ ಕೃಷ್ಣಪ್ಪ, ನಿವೃತ್ತ ಪ್ರಾಚಾರ್ಯ ಸೋಮಣ್ಣ, ಡಿವೈಎಫ್‌ಐ ಅಧ್ಯಕ್ಷ ಸಿ.ಪುಟ್ಟಮಲ್ಲಯ್ಯ, ಇಂಜಿನಿಯರ್ ಮಂಜುನಾಥ್, ಬೃಂದಾ ಆಸ್ಪತ್ರೆಯ ಗುರು, ಮುಖಂಡರಾದ ಸೋಸಲೆ ರಾಜಶೇಖರಮೂರ್ತಿ, ಸಿ.ಪುಟ್ಟಯ್ಯ, ಕುರುಬೂರು ನಾಗರಾಜು, ತರಕಾರಿ ನಿಂಗರಾಜು, ಅಂಗಡಿ ನಾಗೇಶ, ಹೊಸೂರುಹುಂಡಿ ತೋಂಟೇಶ್, ಸಿದ್ದಪ್ಪ, ದುಂಡುಮಾದಯ್ಯ ಹಾಗೂ ಇತರರು ಇದ್ದರು.