Viral Video: ಒಂದ್ಕಡೆ ಇರಾನ್ - ಅಮೆರಿಕಾ ಸಂಘರ್ಷದಿಂದ ಪೆಟ್ರೋಲ್ ರೇಟ್ ಗಗನಕ್ಕೇರಿದೆ. ಗಾಡಿ ಹೊರಗೆ ತೆಗೆಯೋದೇ ಕಷ್ಟ ಆಗ್ತಿರೋ ಈ ಕಾಲದಲ್ಲಿ, ಮತ್ತೊಂದ್ಕಡೆ ಜನ ಮಾತ್ರ ರೀಲ್ಸ್ ಮೋಹಕ್ಕೆ ಬಿದ್ದು ಏನೇನೋ ಹುಚ್ಚಾಟ ಆಡ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿರೋ ವಿಡಿಯೋವೊಂದರಲ್ಲಿ, ಯುವಕನೊಬ್ಬ ಪೆಟ್ರೋಲ್ ಬಂಕ್‌ನಲ್ಲಿ ಬರೋಬ್ಬರಿ ಪೆಟ್ರೋಲ್‌ನಿಂದಲೇ ತನ್ನ ಕಾಲು ಹಾಗೂ ಚಪ್ಪಲಿಯನ್ನು ತೊಳೆಯುತ್ತಿರೋದನ್ನು ಕಾಣಬಹುದು.
ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಲಾದ ಈ ವಿಡಿಯೋ ಈಗ ಎಲ್ಲೆಡೆ ಸದ್ದು ಮಾಡ್ತಿದೆ. ಆದ್ರೆ, ಈ ಘಟನೆ ಯಾವ ಊರಿನ ಪೆಟ್ರೋಲ್ ಬಂಕ್‌ನಲ್ಲಿ ನಡೆದಿದೆ ಅನ್ನೋದಕ್ಕೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.
ನೋಡೋಕೆ ಇದು ನಿಜಾನೇ ಅನಿಸಿದರೂ, ಇದು ಕೇವಲ ಲೈಕ್ಸ್ ಮತ್ತು ವ್ಯೂಸ್‌ಗಾಗಿ ಮಾಡಿದ ರೀಲ್ಸ್ ಅಷ್ಟೇ ಅಂತ ಹೇಳಲಾಗಿದೆ. ನೊಜಲ್‌ನಿಂದ ಬರುತ್ತಿರುವುದು ನಿಜವಾದ ಪೆಟ್ರೋಲ್ ಹೌದಾ ಅಥವಾ ನೀರಾ ಅನ್ನೋದು ಇನ್ನು ಪಕ್ಕಾ ಆಗಿಲ್ಲ.
ಆದ್ರೂ, ದೊಡ್ಡ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿವೆ. ಪೆಟ್ರೋಲ್ ಬಂಕ್‌ಗಳ ಹತ್ತಿರ ಈ ತರಹ ಮೈಮರೆತು ಸ್ಟಂಟ್ ಮಾಡುವುದರಿಂದ ಬೆಂಕಿ ಹತ್ತುಕೊಳ್ಳುವ ಅಪಾಯವಿರುತ್ತೆ ಹಾಗೂ ಅಮೂಲ್ಯವಾದ ಇಂಧನ ಕೂಡ ಪೋಲಾಗುತ್ತದೆ ಅಂತ ಜನ ಆಕ್ರೋಶ ಹೊರಹಕಿದ್ದಾರೆ.
ಮನರಂಜನೆ ಅಥವಾ ರೀಲ್ಸ್‌ಗಾಗಿ ಈ ರೀತಿ ಜೀವದೊಟ್ಟಿಗೆ ಚೆಲ್ಲಾಟ ಆಡುವುದು ಕಾನೂನು ಬಾಹಿರ ಹಾಗೂ ಡೇಂಜರಸ್. ಯಾರೂ ಇಂತಹ ಹುಚ್ಚಾಟಗಳಿಗೆ ಕೈಹಾಕಬೇಡಿ ಎಂದು ನೆಟ್ಟಿಗರು ಗರಂ ಆಗಿದ್ದಾರೆ.