ಕದ್ರಿ ಪಾರ್ಕ್‌ನಲ್ಲಿ ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ನಡೆಯುವ ಗೇರು, ವಾವು, ಹಲಸು ಮೇಳವನ್ನು ಗೇರು ಹಣ್ಣು ಮೌಲ್ಯವರ್ಧನೆಯ ರೂವಾರಿ ಶ್ರೀಪಡ್ರೆ ಉದ್ಘಾಟಿಸಿದರು. ಭರತ್‌ರಾಜ್ ಸೊರಕೆ ಮತ್ತಿತರರಿದ್ದರು.
- ಗೇರು ಹಣ್ಣಿಗೂ ಉತ್ತಮ ವೇದಿಕೆ
- ಕದ್ರಿ ಪಾರ್ಕ್‌ನಲ್ಲಿ ರೈತ ಕುಡ್ಲ ಪ್ರತಿಷ್ಠಾನ ಸಹಯೋಗ
- ಗೇರು, ಮಾವು, ಹಲಸು ಮೇಳ
ಮಂಗಳೂರು: ಗೇರು ಹಣ್ಣಿನ ಜ್ಯೂಸ್‌ಗೆ ಉತ್ತಮ ವೇದಿಕೆ ಸಿಕ್ಕಿದಲ್ಲಿ ಗೇರು ಬೀಜದ ಐದು ಪಟ್ಟು ಹೆಚ್ಚು ಆದಾಯ ಗೇರು ಹಣ್ಣಿನಿಂದ ಪಡೆಯಬಹುದಾಗಿದ್ದು, ಇದು ಗೇರು ಬೆಳೆಗಾರ ಕೃಷಿಕರ ಆದಾಯ ಹೆಚ್ಚಿಸಲಿದೆ ಎಂದು ಗೇರು ಹಣ್ಣು ಮೌಲ್ಯವರ್ಧನೆಯ ರೂವಾರಿ ಶ್ರೀಪಡ್ರೆ ಹೇಳಿದರು.
ಕದ್ರಿ ಪಾರ್ಕ್‌ನಲ್ಲಿ ರೈತ ಕುಡ್ಲ ಪ್ರತಿಷ್ಠಾನ ನೇತೃತ್ವದಲ್ಲಿ ಸಿರಿ ತೋಟಗಾರಿಕೆ ಸಂಘ ಮಂಗಳೂರು, ಸಾವಯವ ಕಷಿಕ ಗ್ರಾಹಕ ಬಳಗ ಮಂಗಳೂರು ಸಹಯೋಗದೊಂದಿಗೆ ಗೇರು, ಮಾವು, ಹಲಸು ಮೇಳ ಉದ್ಘಾಟಿಸಿ ಮಾತನಾಡಿದರು.
ಬ್ರೆಜಿಲ್‌ನಲ್ಲಿ ಒಟ್ಟು ಗೇರು ಹಣ್ಣಿನಲ್ಲಿ ಶೇ.75ರಲ್ಲಿ ಆದಾಯ ಪಡೆಯುತ್ತಿದ್ದಾರೆ. ಗೇರು ಹಣ್ಣಿನ ಮೌಲ್ಯವರ್ಧನೆ ಬಗ್ಗೆ ವೇದಿಕೆ ಇರಲಿಲ್ಲ. ಇದೀಗ ಗೇರು ಹಣ್ಣಿನ ಜ್ಯೂಸ್, ಮೌಲ್ಯವರ್ಧಿತ ಉತ್ಪನ್ನಗಳ ಬಗ್ಗೆ ಕಾರ್ಯಗಾರ ಆಯೋಜಿಸಿ ಪ್ರೇರಣೆ ನೀಡುತ್ತಿರುವುದರಿಂದ ಇಂದು ಗೇರು ಹಣ್ಣಿನ ಜ್ಯೂಸ್ ಕ್ರಾಂತಿ ವಾಡುವ ಹಂತಕ್ಕೆ ಬಂದಿದೆ ಎಂದರು.
ರೈತ ಕುಡ್ಲ ಪ್ರತಿಷ್ಠಾನ ಅಧ್ಯಕ್ಷ ಭರತ್‌ರಾಜ್ ಸೊರಕೆ ಅಧ್ಯಕ್ಷತೆ ವಹಿಸಿದ್ದರು. ಸಿರಿ ತೋಟಗಾರಿಕೆ ಸಂದ ಕೋಶಾಧಿಕಾರಿ ಹರಿಶ್ಚಂದ್ರ ಅಡ್ಕ, ಮಂಗಳೂರು ಸಾವಯವ ಕಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಕಾರ್ಯಕಾರಿ ಸದಸ್ಯರಾದ ಜಗನ್ನಾಥ ಗಾಂಭೀರ್, ಜಿ.ಕೆ. ಭಟ್, ರಾಮ ಮೊಗರೋಡಿ, ಕದ್ರಿ ಪಾರ್ಕ್‌ನ ರೂಪೇಶ್ ಮತ್ತಿತರರು ಇದ್ದರು.
1 ಕೆ.ಜಿ. ಮಾವು 2.5 ಲಕ್ಷ ರೂ.
ಮೇಳದಲ್ಲಿ ಜಪಾನ್‌ನ ಮಿಯಾಜಾಕಿ ಎಂಬ ಮಾವು ಕೆ.ಜಿ.ಗೆ 2.5 ಲಕ್ಷ ರೂ. ಇತ್ತು. ಈ ಹಣ್ಣನ್ನು ಮೇಳದಲ್ಲಿ ಒಂದು ಪೀಸ್‌ಗೆ (ಸಣ್ಣ ಭಾಗ) 2 ಸಾವಿರ ರೂ.ನಂತೆ ಮಾರಾಟ ವಾಡಲಾಗಿದೆ. ಹೊನ್ನಾವರ ಮೂಲದ ವ್ಯಾಪಾರಿಯೊಬ್ಬರು ಈ ವಾವು ವಾರಾಟ ವಾಡುತ್ತಿದ್ದು, ಗ್ರಾಹಕರು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿರುವುದು ಕಂಡುಬಂತು.