KSEshwarappa 
ನ್ಯೂಸ್

ಒಬಿಸಿಗೆ ಮೀಸಲಾತಿ ಇಲ್ಲದೆ ಜಿಪಂ, ತಾಪಂ ಚುನಾವಣೆ ನಡೆಸದಿರಲು ಸರ್ಕಾರ ನಿರ್ಧರಿಸಿದೆ: ಈಶ್ವರಪ್ಪ

ಕಲಬುರಗಿ: ಒಬಿಸಿಗೆ ಮೀಸಲಾತಿ ಇಲ್ಲದೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸದಿರಲು ರಾಜ್ಯ ಸರ್ಕಾರ ತಿರ್ಮಾನಿಸಿದೆ ಎಂದು ಸಚಿವ ಕೆ.ಎಸ್​. ಈಶ್ವರಪ್ಪ ಹೇಳಿದರು.

ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಈ ಕುರಿತು ಸಿಎಂ ಮತ್ತು ತಜ್ಞರ ಜತೆ ಚರ್ಚಿಸಿದ್ದೇವೆ. ಒಬಿಸಿಗೆ ಅನ್ಯಾಯ ಆಗದಂತೆ ಚುನಾವಣೆ ಮಾಡಲು ನಿರ್ಧರಿಸಲಾಗಿದೆ. ಮೀಸಲಾತಿ ಬಗ್ಗೆ ಅಂತಿಮ ನಿರ್ಣಯ ಹೊರಬಿದ್ದ ಬಳಿಕ ಚುನಾವಣೆ ನಡೆಸಲಾಗುವುದು ಎಂದರು.

ಇನ್ನು ಮೇಕೆದಾಟು ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಈಶ್ವರಪ್ಪ, ಇದೊಂದು ಅರ್ಥಹೀನ ಪಾದಯಾತ್ರೆ. ಮೇಕದಾಟು ಯೋಜನೆ ಪಾರ್ಟ್-2, ಇದು ಕಾಂಗ್ರೆಸ್ ಪಕ್ಷದ ಪಾರ್ಟ್-2 ಅಷ್ಟೆ. ಕಾಂಗ್ರೆಸ್​ನವರಿಗೆ ಏನು ಮಾಡಬೇಕು, ಬಿಡಬೇಕು ಅಂತಾ ಗೊತ್ತಿಲ್ಲ. ಮೇಕೆದಾಟು ಯೋಜನೆ ಡಿಪಿಆರ್ ಮಾಡಿದ್ದು ಕುಮಾರಸ್ವಾಮಿ ಅವಧಿಯಲ್ಲಿ. ಅದಾದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದು ಜಾರಿ ಮಾಡಲು ಮುಂದಾಗಿದ್ವಿ. ಕಾಂಗ್ರೆಸ್ ಪಾದಯಾತ್ರೆ ಮಾಡೋದಕ್ಕೆ ನಮ್ಮದೇನೂ ಏನು ಅಭ್ಯಂತ‌ರ ಇಲ್ಲ. ಆದ್ರೆ ನೀವು ಸರ್ಕಾರದಲ್ಲಿ ಇದ್ದಾಗ ಯಾಕೆ ಮಾಡಲಿಲ್ಲ? ನೀವು ಪಾದಯಾತ್ರೆ ಮಾಡಿದ್ರೂ, ಮಾಡದಿದ್ದರೂ ನಾವು ಮೇಕೆದಾಟು ಯೋಜನೆ ಜಾರಿ ಮಾಡ್ತೇವೆ ಎಂದರು.