ನ್ಯೂಸ್

ತನ್ನ ಮರಿಯ ಅಗಲಿಕೆ ನೋವು ಮರೆಯಲು ಹಸುವಿನ ಕರುಗೆ ಹಾಲುಣಿಸುತ್ತಿದೆ ತಾಯಿ ಮೇಕೆ!

arunakunigal

ಮಾಸ್ತಿ: ನಿಷ್ಕಲ್ಮಷ ಪ್ರೇಮಕ್ಕೆ ನಿದರ್ಶನ ಮಾತೃಹೃದಯ. ಇದಕ್ಕೊಂದು ಉದಾಹರಣೆ ಟೇಕಲ್​ ಹೋಬಳಿ ಕುಂಟನಹಳ್ಳಿಯಲ್ಲಿ ನಡೆಯಿತು. ರೈತ ಆನಂದ ಮನೆಯ ಮೇಕೆಯು ಸೀಮೆಹಸು ಕರುವಿಗೆ ಹಾಲುಣಿಸುವ ಮೂಲಕ ಅಮ್ಮನ ಪ್ರೀತಿ ಧಾರೆಯೆರೆಯುತ್ತಿದೆ. ತನ್ನ ಮರಿ ತೀರಿಕೊಂಡಿದ್ದು, ಅಗಲಿಕೆ ನೋವು ಮರೆಯಲು ಮೇಕೆಯು ಸೀಮೆ ಹಸುವಿನ ಕರುವಿಗೆ ಹಾಲು ಕೊಡುತ್ತಿದೆ. ಕರು ಕೆಚ್ಚಲನ್ನು ಕಚ್ಚಿದರೂ, ತಿವಿದರೂ, ಪ್ರತಿರೋಧ ತೋರದೆ ನಿತ್ಯ ಹಾಲುಣಿಸುತ್ತಿದೆ.

ಆನಂದ ಅವರು ಸೀಮೆಹಸು ಮತ್ತು ಮೇಕೆಯನ್ನು ಒಟ್ಟಿಗೆ ಸಾಕುತ್ತಿದ್ದು, ಕಳೆದ ವಾರ ಮೇಕೆ ಮರಿ ಹಾಕಿತ್ತು. ಇದೇ ವೇಳೆ ಸೀಮೆಹಸು ಸಹ ಕರುವೊಂದಕ್ಕೆ ಜನ್ಮ ನೀಡಿತ್ತು. ಕೊಟ್ಟಿಗೆಯಲ್ಲಿ ಅಕ್ಕಪಕ್ಕದಲ್ಲೇ ಇವುಗಳನ್ನು ಕಟ್ಟಲಾಗುತ್ತಿತ್ತು. ಮೇಕೆ ಮರಿ ಮೃತಪಟ್ಟಿದ್ದರಿಂದ ಮೇಕೆ ತನ್ನಲ್ಲಿರುವ ಹಾಲನ್ನು ಕರುವಿಗೆ ನೀಡುತ್ತಿದೆ. ನಾಲ್ಕೈದು ದಿನದಿಂದ ಕರುವಿಗೆ ಮೇಕೆ ಹಾಲುಣಿಸುತ್ತಿದ್ದು, ಅಪರೂಪದ ಈ ಬಾಂಧವ್ಯ ನೋಡಲು ಸುತ್ತಮುತ್ತಲಿನ ಜನ ಬರುತ್ತಿದ್ದಾರೆ.