ನ್ಯೂಸ್

ಯುವಕರಿಬ್ಬರ ಮೇಲೆ ಗುಂಪು ಹಲ್ಲೆ ನಡೆಸಿ ಪರಾರಿ

ಸುಂಟಿಕೊಪ್ಪ: ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಕೊಡಗರಹಳ್ಳಿಯಲ್ಲಿ ಬುಧವಾರ ರಾತ್ರಿ ವಿನಾಕಾರಣ ಸುಂಟಿಕೊಪ್ಪದನ ಅಬ್ಬಾಸ್ ಹಾಗೂ ಶಫೀಕ್ ಎಂಬುವರ ಮೇಲೆ ಯುವಕರ ಗುಂಪೊಂದು ಮನಸೋಇಚ್ಛೆ ಹಲ್ಲೆ ಮಾಡಿದೆ.

ಕುಶಾಲನಗರ ವ್ಯಾಪ್ತಿಯ ನಿವಾಸಿಗಳಾದ ಕಣ್ಣನ್, ಬಿಲಾಲ್, ಅಭಿ, ಸಜಿ ಮತ್ತು ಇತರರು ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿದೆ. ಅಬ್ಬಾಸ್ ಮತ್ತು ಶಫೀಕ್ ಇಬ್ಬರೂ ಕೊಡಗರಹಳ್ಳಿ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ಮಾತನಾಡುತ್ತಿದ್ದ ಸಂದರ್ಭ ಯುವಕರ ತಂಡ ಅನವಶ್ಯಕವಾಗಿ ತಗಾದೆ ತೆಗೆದಿದೆ. ಈ ನಡುವೆ ಮಾತಿನ ಚಕಾಮಕಿ ನಡೆದು ಯುವಕರ ತಂಡ ಏಕಾಏಕಿ ಇಬ್ಬರ ಮೇಲೆ ಗಂಭೀರ ಗಾಯಗೊಳಿಸಿ ಪರಾರಿಯಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಸುಂಟಿಕೊಪ್ಪ ಪೊಲೀಸರು ಶೋಧ ನಡೆಸುತ್ತಿದ್ದಾರೆ.