ನ್ಯೂಸ್

ಫ್ರಾನ್ಸ್​ ಅಧ್ಯಕ್ಷರಾಗಿ ಇಮ್ಯಾನುವೆಲ್​ ಮಾಕ್ರನ್​ ಮರು ಆಯ್ಕೆ

ಪ್ಯಾರಿಸ್​: ಫ್ರಾನ್ಸ್​ ಅಧ್ಯಕ್ಷರಾಗಿ 44 ವರ್ಷದ ಇಮ್ಯಾನುವೆಲ್​ ಮಾಕ್ರನ್​ ಅವರು ಪುನರ್​ ಆಯ್ಕೆಯಾಗಿದ್ದಾರೆ. ಎದುರಾಳಿಯಾಗಿದ್ದ ಕಟ್ಟರ್​ ಬಲಪಂಥೀಯ ನಾಯಕಿ ಮರೀನ್ ಲೆ ಪೆನ್​ ಅವರು ಸೋಲುಂಡಿದ್ದಾರೆ. ಚಲಾವಣೆಯಾಗಿದ್ದ ಒಟ್ಟು ಮತಗಳ ಪೈಕಿ ಶೇ.58 ರಷ್ಟು ಮಾಕ್ರನ್​ ಪರವಾಗಿ ಬಂದಿದೆ.

ಫ್ಯಾರಿಸ್​ನ ವಿಶ್ವಪ್ರಸಿದ್ಧ ಐಫೆಲ್​ ಟವರ್​ ಬಳಿ ಅಭಿಮಾನಿಗಳ ಜತೆ ವಿಜಯೋತ್ಸವ ಆಚರಿಸಿದ ಮ್ಯಾಕ್ರನ್, ಶೀಘ್ರವೇ ಬದಲಾವಣೆ ಆಗುತ್ತೆ. ಭರವಸೆ ಇರಲಿ ಎಂದಿದ್ದಾರೆ. ಅತ್ತ ಮರೀನ್​ ಲೆ ಪೆನ್​ ಅಭಿಮಾನಿಗಳು ಕೂಡ ಲೆ ಪೆನ್​ ಪರ ಘೋಷಣೆ ಕೂಗಿದ್ದಾರೆ. ಯಾವುದೇ ಕಾರಣಕ್ಕೂ ರಾಜಕೀಯದಿಂದ ಹೊರಹೋಗುವುದಿಲ್ಲ. ನನ್ನ ಹೋರಾಟ ಮುಂದುವರಿಯಲಿದೆ. ಮುಂಬರುವ ಜೂನ್​ನಲ್ಲಿ ನಡೆಯಲಿರುವ ಶಾಸಕಾಂಗ ಚುನಾವಣೆಯಲ್ಲಿ ತಕ್ಕ ಉತ್ತರ ನೀಡುವೆ ಎಂದು ಸವಾಲು ಹಾಕಿದ್ದಾರೆ.

ಭಾನುವಾರ ನಡೆದ ಫ್ರಾನ್ಸ್​ ಅಧ್ಯಕ್ಷೀಯ ಚುನಾವಣೆ ಇಡೀ ಜಗತ್ತಿನ ಗಮನ ಸೆಳೆದಿತ್ತು. ಯೂಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರಿಸಿದ್ದು, ಯುದ್ಧದ ಮೇಲೆ ನ್ಯಾಟೋ ಪಾತ್ರ, ಐರೋಪ್ಯ ಒಕ್ಕೂಟದ ನಾಯಕತ್ವ ವಿಚಾರದಲ್ಲೂ ಫ್ರಾನ್ಸ್​ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಪ್ರಭಾವ ಬೀರಲಿದೆ.