ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯ ಗೆಲುವಿಗೆ ಚಿತ್ರದುರ್ಗದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಕೆ.ಟಿ. ಕುಮಾರಸ್ವಾಮಿ,ಎ.ಎಸ್.ಪಾಟೀಲ್‌ನಡಹಳ್ಳಿ, ಸುರೇಶ್, ಹರೀಶ್, ಸೌಭಾಗ್ಯ ಬಸವರಾಜನ್, ಮಾಧುರಿಗಿರೀಶ್, ಡಾ. ಸಿದ್ದಾರ್ಥ ಗುಂಡಾರ್ಫಿ ಇತರರು ಇದ್ದರು. 
ನ್ಯೂಸ್

ಹಿಂದೂ ವಿರೋಽ ಆಡಳಿತಕ್ಕೆ ತಕ್ಕ ಪಾಠ

ಪ್ರಮುಖ ಮುಖ್ಯಾಂಶಗಳು

  • ೩ ರಾಜ್ಯಗಳ ಗೆಲುವಿಗೆ ಕಮಲ ಪಡೆ ಹರ್ಷ
  • ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ
  • ಪ್ರಧಾನಿ ನರೇಂದ್ರ ಮೋದಿ
ಚಿತ್ರದುರ್ಗ: ಪಶ್ಚಿಮಬಂಗಾಳ, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳಲ್ಲಿ ಪಕ್ಷದ ಅಭೂತ ಗೆಲುವಿಗಾಗಿ ಬಿಜೆಪಿ ಕಾರ್ಯಕರ್ತರು ಚಿತ್ರದುರ್ಗದ ಮದಕರಿ ನಾಯಕರ ವೃತ್ತದಲ್ಲಿ ಸೋಮವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆ ಕೂಗಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ. ಕುಮಾರಸ್ವಾಮಿ ಮಾತನಾಡಿ, ಕಾರ್ಯಕರ್ತರ ಸಂಘಟನಾತ್ಮಕ ಪರಿಶ್ರಮಕ್ಕೆ ಈ ಮೂರು ರಾಜ್ಯಗಳ ಲ್ಲೂ ಅತ್ಯುತ್ತಮ ಫಲ ಸಿಕ್ಕಿದೆ. ಪಶ್ಚಿಮ ಬಂಗಾಳದಲ್ಲಿ ಈವರೆಗೆ ಹಿಂದೂ ವಿರೋಽ ಸರ್ಕಾರ ಅಸ್ತಿತ್ವದಲ್ಲಿತ್ತು.
ಅಲ್ಲಿನ ಮತದಾರರು, ವಿಶೇಷವಾಗಿ ಹಿಂದೂಗಳು ಅನುಭವಿಸಿದ ದಬ್ಬಾಳಿಕೆ, ಸರ್ಕಾರದ ಆಡಳಿತ ವೈಖರಿಗೆ ಬೇಸತ್ತು ಈ ಬಾರಿ ಬಿಜೆಪಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದಾರೆ. ಟಿಎಂಸಿ ದುರಾರಳಿತಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದರು.
ಅಸ್ಸಾA ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಕಳೆದ ೨ ಅವಽಯ ಜನಪರ ಆಡಳಿತ ಮೆಚ್ಚಿ ಜನರು ಈ ಬಾರಿಯೂ
ಬಿಜೆಪಿ ಬೆಂಬಲಿಸಿದ್ದಾರೆ. ಈ ಮೂಲಕ ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಸಾಽಸಿದೆ. ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿ ಕೂಟ ಅಽ ಕಾರಕ್ಕೆ ಬರಲಿದೆ. ಜಗತ್ತಿನ ಅತೀ ದೊಡ್ಡ ಪಕ್ಷ ಬಿಜೆಪಿ ಈ ಗೆಲುವಿನ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಭಾಷ್ಯ ಬರೆಯಲಿದೆ ಎಂದರು.
ಮುದ್ದೇಬಿಹಾಳದ ಮಾಜಿ ಶಾಸಕ ಎ.ಎಸ್.ಪಾಟೀಲ್‌ನಡಹಳ್ಳಿ, ನಗರಸಭೆ ಮಾಜಿ ಸದಸ್ಯ ಸುರೇಶ್, ಹರೀಶ್, ಜಿಪಂ ಮಾಜಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್, ರಘು ಕೌಟಿಲ್ಯ, ಅಶ್ವಿನಿ ಶಂಕರ್, ಮಾಧುರಿ ಗಿರೀಶ್, ಡಾ. ಸಿದ್ದಾರ್ಥ ಗುಂಡಾರ್ಫಿ, ಜಿ.ಎಚ್. ಮೋಹನ್‌ಕುಮಾರ್, ಭಾರ್ಗವಿ ದ್ರಾವಿಡ, ವೆಂಕಟೇಶ್‌ಯಾದವ್, ನಾಗರಾಜ್, ಮಲ್ಲಿಕಾರ್ಜನ್, ರಾಜೇಶ್, ರೇಖಾ, ರಜಿನಿ, ಬಸ ಮ್ಮ,ಭಾರತಿ ಮಲ್ಲಿಕಾರ್ಜನ್, ಶೈಲಜಾರೆಡ್ಡಿ, ನಾಗರಾಜ್‌ಬೇದ್ರೆ, ದಗ್ಗೆ ಶಿವಪ್ರಕಾಶ್, ಯಶವಂತ, ರಾಜೇಶ್ ಬುರುಡೆಕಟ್ಟೆ, ಮಂಜು ಳಮ್ಮ ಇತರರು ಇದ್ದರು.