| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಲೋಕಸಭೆ ಚುನಾವಣೆ ಮಹತ್ವದ ಘಟ್ಟ ತಲುಪಿದ್ದು ರಾಜಕೀಯ ಪಕ್ಷಗಳು ತಂತ್ರ-ಪ್ರತಿತಂತ್ರ ಹೂಡುತ್ತಲೇ ಇವೆ. ಚುನಾವಣೆ ಯಾವ ತಳಹದಿಯ ಮೇಲೆ ನಡೆಯಬೇಕೆಂದು ನಿರೂಪಣೆ ರೂಪಿಸುವ ಕೆಲಸದಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ನಿರತರಾಗಿದ್ದರೆ. ಇನ್ನೊಂದೆಡೆ ತಳ ಮಟ್ಟದಲ್ಲಿ ಬೂತ್ ಗೆಲ್ಲಲು ಪರಸ್ಪರ ಪೈಪೋಟಿ ಶುರುವಾಗಿದೆ. ರಾಜ್ಯದ 58 ಸಾವಿರ ಬೂತ್ಗಳನ್ನು ಗುರಿಯಾಗಿಸಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯತಂತ್ರ ರೂಪಿಸಿದ್ದು, ಬೂತ್ಗಳಲ್ಲಿ ಲೀಡ್ ಪಡೆದುಕೊಳ್ಳುವ ಮೂಲಕ ಅಭ್ಯರ್ಥಿ ಗೆಲ್ಲಿಸುವ ಹಂಬಲ ಎರಡೂ ಪಕ್ಷಗಳದ್ದಾಗಿದೆ.
ಮತಗಳ ಮೇಲೆ ನಿಗಾ: ಪ್ರತಿ ಬೂತ್ನಲ್ಲಿ ಸಾಮಾನ್ಯವಾಗಿ ಸರಾಸರಿ 1000-1200 ಮತಗಳಿರುತ್ತವೆ. ಸರಿಸುಮಾರು 350-400 ಮನೆಗಳಿರಬಹುದು. ಪಕ್ಷದ ಬೂತ್ ಸಮಿತಿ ಇಷ್ಟು ಮನೆಗಳಲ್ಲಿ ತಮಗೆ ಮತ ತಂದುಕೊಡಬಹುದಾದ ಮನೆಗಳು ಯಾವುದು, ಯಾವ ಮತ ನಮ್ಮ ಪರವಾಗಿ ಬರದೇ ಇರುವುದು ಹಾಗೂ ಯಾರನ್ನು ಮನವೊಲಿಸಿ ನಮ್ಮ ಕಡೆ ಸೆಳೆದುಕೊಳ್ಳಬಹುದು ಎಂದು ಅಂದಾಜಿಸಲು ಸಾಧ್ಯವಾಗುತ್ತದೆ. ಈ ಕಾರ್ಯವನ್ನು ಬಿಜೆಪಿ ಹೆಚ್ಚಾಗಿ ಮಾಡಿಕೊಂಡು ಬಂದಿದೆ.
ಮತಾವಲೋಕನ: 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆ ಮತ್ತು 2023ರ ವಿಧಾನಸಭೆ ಚುನಾವಣೆ ಯಲ್ಲಿ ಆಯಾ ಬೂತ್ನಲ್ಲಿ ಪಕ್ಷಕ್ಕೆ ಬಂತ ಮತಗಳನ್ನು ಅವಲೋಕನ ನಡೆಸಲು ಎರಡೂ ಪಕ್ಷಗಳು ಸಿದ್ಧತೆ ಮಾಡಿಕೊಂಡಿವೆ. ನಿಶ್ಚಿತವಾಗಿ ಒಂದೇ ಪಕ್ಷದ ಬಗ್ಗೆ ಒಲವು ಹೊಂದಿದವರು, ಚುನಾವಣೆಯಿಂದ ಚುನಾವಣೆಗೆ ನಿಲುವ ಬದಲಿಸುವವರನ್ನು ಅಂದಾಜಿಸಿ ಅವರನ್ನು ತಮ್ಮ ಪರವಾಗಿ ಉಳಿಸಿಕೊಳ್ಳುವ ಕಾರ್ಯತಂತ್ರ ಎರಡೂ ಪಕ್ಷದ್ದೂ ಒಂದೇ ರೀತಿಯದ್ದಾಗಿರುವುದು ವಿಶೇಷ.
1. ‘ನನ್ನ ದೇಶ- ನನ್ನ ಮತ’ ಘೊಷವಾಕ್ಯದಡಿ ಮತದಾರ ಚೇತನ ಮಹಾಅಭಿಯಾನವನ್ನು 2023ರ ಸೆ.1ರಿಂದ 10ರವರೆಗೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬಿಎಲ್ಎ 2 (ಏಜೆಂ ಟ್) ನೇಮಿಸಲಾಯಿತು.
2. ಬಿಎಲ್ಎಗಳ ಮೂಲಕ ಆಯಾ ಬೂತ್ನಲ್ಲಿ ಹೊಸ ಹೆಸರು ಸೇರ್ಪಡೆ, ಡಿಲೀಟ್ ಸೇರಿ ಅನೇಕ ಕಾರ್ಯಗಳನ್ನು ನಡೆಸಿಕೊಂಡು ಬರಲಾಗಿದೆ.
3. ಪೇಜ್ ಪ್ರಮುಖರನ್ನು ನೇಮಕ ಮಾಡಿ 40 ಮತದಾರರ ಜವಾಬ್ದಾರಿ ನೀಡಲಾಗಿದೆ. ಅವರು ಮತದಾರರ ಸಂಪರ್ಕ, ಮನವೊಲಿಕೆ, ಪಕ್ಷದ ಸೂಚನೆ ಮನೆಗೆ ತಲುಪಿಸುವ ಕೆಲಸ ಮಾಡಿದ್ದಾರೆ.
4. ಯುಗಾದಿ ಬಳಿಕ 2 ದಿನ ಏಕಕಾಲಕ್ಕೆ 58 ಸಾವಿರ ಬೂತ್ಗಳಲ್ಲೂ ಬೂತ್ ಸಮಿತಿ ಸಭೆ ನಡೆಸಲಾಗುತ್ತಿದೆ. ಮುಂದಿನ ಕಾರ್ಯತಂತ್ರದ ಅನುಷ್ಠಾನಕ್ಕೆ ಚಾಲನೆ ನೀಡಲಾಗುತ್ತದೆ.
5. ಮಹಾ ಸಂಪರ್ಕ ಅಭಿಯಾನ ಕೈಗೊಳ್ಳಲಾಗುತ್ತಿದೆ. ಈ ವೇಳೆ ಪ್ರತಿ ಮನೆಗೂ ಕೇಂದ್ರ ಸರ್ಕಾರದ ಕಾರ್ಯಕ್ರಮ ವಿವರ, ಪಕ್ಷದ ಪ್ರಣಾಳಿಕೆ ತಲುಪಿಸಲಾಗುತ್ತದೆ.
1. ನನ್ನ ಪಕ್ಷ, ನನ್ನ ಅಭ್ಯರ್ಥಿ, ನನ್ನ ಬೂತ್ ಸಂಕಲ್ಪದಂತೆ ಕಾರ್ಯನಿರ್ವಹಿಸುವಂತೆ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಸೂಚನೆ ಕೊಡಲಾಗಿದೆ.
2. 58 ಸಾವಿರ ಬೂತ್ಗಳಲ್ಲೂ ಬೂತ್ ಸಮಿತಿ ರಚಿಸಲಾಗಿದೆ. ಇದೀಗ ಬೂತ್ ಸಮಿತಿ ಬಲವರ್ಧನೆಗೆ ಮತ್ತೆ 10-20 ಜನರನ್ನು ಸಮಿತಿಗೆ ಸೇರಿಸಲಾಗುತ್ತದೆ.
3. ಈ ಸಮಿತಿ ಮೂಲಕ ಮನೆಮನೆಗೆ ಗ್ಯಾರಂಟಿ ಕಾರ್ಡ್ ತಲುಪಿದೆಯೇ ಎಂದು ಪರಿಶೀಲನೆ ನಡೆಸುವ ಜತೆಗೆ ಕೊರತೆ ಇದ್ದರೆ ಸರಿಪಡಿಸಿ, ಪ್ರಚಾರವನ್ನೂ ನಡೆಸಲಾಗುತ್ತದೆ.
4. ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿಗಳು ಬೂತ್ ಕಮಿಟಿಗಳೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷದ ಶಾಸಕರು, ಮುಂಚೂಣಿ ಘಟಕಗಳೊಂದಿಗೆ ಸಮನ್ವಯ ಸಾಧಿಸುವರು.
5. ಪಂಚಾಯಿತಿ ಮಟ್ಟದಲ್ಲಿ ಗ್ಯಾರಂಟಿ ಜಾಥಾ ನಡೆಸುವ ಜತೆಗೆ ಬೂತ್ ಮಟ್ಟದಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಮಾಡಿ ಮತದಾರರನ್ನು ಮನವೊಲಿಸುವ ಕಾರ್ಯ ನಡೆಸಲಾಗುತ್ತದೆ.
ಬೂತ್ ಮಟ್ಟದ ಸಮಿತಿ ಬಲವರ್ಧನೆಗೆ ಪ್ರಯತ್ನ ನಡೆಸಿದ್ದೇವೆ. ಬೂತ್ ಹಂತದಲ್ಲಿ ಪಕ್ಷದ ಜವಾಬ್ದಾರಿ ದೊಡ್ಡದಿದ್ದು, ಹೆಚ್ಚಿನ ಗಮನ ನೀಡಲಾಗಿದೆ. ಮತದಾನ ಜಾಗೃತಿ, ಮನೆ ಮನೆ ಭೇಟಿಗೆ ಒತ್ತು ನೀಡುತ್ತಿದ್ದೇವೆ.| ಜಿ.ಸಿ.ಚಂದ್ರಶೇಖರ್ ಕೆಪಿಸಿಸಿ ಕಾರ್ಯಾಧ್ಯಕ್ಷನಾವು ಈ ಬಾರಿ ಮನೆ ಮನೆ ಭೇಟಿ, ಕಾರ್ನರ್ ಸಭೆಗೆ ಒತ್ತು ನೀಡಿದ್ದೇವೆ. ಏಪ್ರಿಲ್ 11, 12ರಂದು 58 ಸಾವಿರ ಬೂತ್ಗಳಲ್ಲೂ ಸಭೆ ನಡೆಯುತ್ತಿದೆ, ಮಹಾ ಸಂಪರ್ಕ ಅಭಿಯಾನ ನಡೆಸಲಾಗುತ್ತಿದೆ.| ಸುನಿಲ್ ಕುಮಾರ್ಬಿಜೆಪಿ ಚುನಾವಣಾ ನಿರ್ವಹಣಾ ಸಮಿತ ಸಂಚಾಲಕ