ಹಾವೇರಿ: ಕೌಟುಂಬಿಕ ಕಲಹ ಹಿನ್ನೆಲೆ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದ ಪತಿ, ತಾನು ಜೀವಂತವಾಗಿ ಉಳಿಯಲು ಇಚ್ಛಿಸದೆ, ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹಾವೇರಿಯ ನಜೀಕ ಲಕಮಾಪುರ ಗ್ರಾಮದಲ್ಲಿ ವರದಿಯಾಗಿದೆ.
ಇದನ್ನೂ ಓದಿ: ಭಾರತದ ಮೇಲೆ ಟ್ರಂಪ್ ಸುಂಕ ಸಮರ! ಪುಟಿನ್ ಜತೆಗೆ ಅಜಿತ್ ದೋವಲ್ ಮಾತುಕತೆ, ಹಲವು ವಿಷಯಗಳು ಚರ್ಚೆ | Trump Tariffs
ಮೃತ ಮಹಿಳೆಯನ್ನು ಲಲಿತವ್ವ (55 ವರ್ಷ) ಎಂದು ಗುರುತಿಸಲಾಗಿದೆ. ತನ್ನ ಹೆಂಡತಿಯನ್ನೇ ಭೀಕರವಾಗಿ ಕೊಲೆ ಮಾಡಿದ ಪತಿಯನ್ನು ಸಿದ್ದಪ್ಪ ಡಬ್ಬಣ್ಣವರ (60) ಎಂದು ಹೇಳಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆ ಪತ್ನಿಯನ್ನು ಹತ್ಯೆಗೈದ ಸಿದ್ದಪ್ಪ, ಗ್ರಾಮದ ಹೊರ ವಲಯದಲ್ಲಿರುವ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ.
ನಿನ್ನೆ ( ಆ.07) ರಾತ್ರಿ ಗಂಡ- ಹೆಂಡತಿ ಮಧ್ಯೆ ಜಗಳ ಉಂಟಾಗಿದೆ. ಇಬ್ಬರ ನಡುವಿನ ಜಟಾಪಟಿ ತಾರಕಕ್ಕೇರಿದ ಕಾರಣ, ಕುಡಿತದ ಚಟಕ್ಕೆ ದಾಸನಾಗಿದ್ದ ಸಿದ್ದಪ್ಪ, ಪತ್ನಿಯನ್ನು ಕೊಲೈಗೈದಿದ್ದಾನೆ. ನಂತರ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಗಂಡ-ಹೆಂಡತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು. ಸಿದ್ದಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ. ಇದರಿಂದಲೇ ಇಬ್ಬರ ಮಧ್ಯೆ ಜಟಾಪಟಿ ನಡೆಯುತ್ತಿತ್ತು ಎಂದು ಹೇಳಲಾಗಿದೆ. ಮೃತ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು, ಓರ್ವ ಪುತ್ರನಿದ್ದಾನೆ. ಘಟನೆ ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.