ಬೆಂಗಳೂರು: ಸಮಗ್ರ ಕೃಷಿ ಪದ್ಧತಿಯಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ದುಪ್ಪಟ್ಟು ಅಲ್ಲ, ಹತ್ತು ಪಟ್ಟು ವೃದ್ಧಿಸಿಕೊಳ್ಳಬಹುದು. ಅದರಲ್ಲೂ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ನಾಡಿನಾಚೆಗೂ ಮಾರುಕಟ್ಟೆ ಇರುವುದರಿಂದ ಜಮೀನಿಗೆ ಹಾಕಿದ ಬಂಡವಾಳ ಕೆಲವೇ ವರ್ಷಗಳಲ್ಲಿ ದೊಡ್ಡ ಇಡಗಂಟಾಗಿ ಕೈಸೇರುವುದು ಖಚಿತ.
ಅನನ್ಯ ಪ್ರೀತಿ, ಶ್ರದ್ಧೆ, ಪರಿಶ್ರಮದಿಂದಾಗಿ ಬಂಗಾರದ ಬೆಳೆ ಬೆಳೆಯುತ್ತಿರುವ ತುಮಕೂರು ಜಿಲ್ಲೆಯ ಮಷಣಾಪುರದ ಪ್ರಗತಿಪರ ರೈತ ಎಂ.ಎಸ್.ಮೃತ್ಯುಂಜಯ ಅವರು ಇಂತಹ ಮಾತುಗಳನ್ನು ನಿಜವಾಗಿಸುವ ಸಾಧನೆ ಮಾಡಿದ್ದಾರೆ.
ತಮ್ಮ ಜಮೀನನ್ನೇ ಕರ್ಮಭೂಮಿಯನ್ನಾಗಿಸಿಕೊಂಡಿರುವ ಇವರು ತೋಟದ ಮನೆಯಲ್ಲೇ ವಾಸವಿದ್ದಾರೆ. ಇಡೀ ದಿನ ಗಿಡಗಳ ಆರೈಕೆಗೆ ಅಧಿಕ ಸಮಯ ಮೀಸಲಿಡುತ್ತಾರೆ. ದೂರದ ಪ್ರದೇಶಗಳಿಂದ ತಂದು ನೆಟ್ಟಿರುವ ಗಿಡಗಳ ಬೆಳವಣಿಗೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಾರೆ. ಕೃಷಿ ತಜ್ಞರು ನೀಡುವ ಸಲಹೆಗಳನ್ನು ಪಾಲಿಸುವ ಜತೆಗೆ ಸರ್ಕಾರದ ವಿವಿಧ ಸಬ್ಸಿಡಿ ಕಾರ್ಯಕ್ರಮಗಳ ಪ್ರಯೋಜನ ಪಡೆದು ಕೃಷಿ ಮುಂದುವರಿಸಿದ್ದಾರೆ. ತೋಟದಲ್ಲೇ ಬೆಳೆಸಿದ ಗಿಡಗಳಿಂದ ಕಸಿ ಮಾಡಿ ಮಾರಾಟ ಮಾಡಲು ನರ್ಸರಿ ಆರಂಭಿಸಿದ್ದಾರೆ. ಜೇನುಕೃಷಿ, ನಾಯಿಮರಿ ಸಾಕಣೆ, ಅಲಂಕಾರಿಕ ಪಕ್ಷಗಳನ್ನು ಸಾಕಿ ಅದರಿಂದಲೂ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ. ಇವರ ತೋಟದ ವೈಶಿಷ್ಟ್ಯವೆಂದರೆ ಅಡಿಗಡಿಗೂ ವೈವಿಧ್ಯಮಯ ಗಿಡಗಳು ಸೊಂಪಾಗಿ ಬೆಳೆದು ಅರಣ್ಯ ಹೊಕ್ಕಿ ಬಂದ ಅನುಭವ ನೀಡುತ್ತದೆ.
- ಉಳುಮೆ ಮಾಡದೆ ಬೇಸಾಯ
ತೋಟವನ್ನು ರಾಸಾಯನಿಕ ಮುಕ್ತಗೊಳಿಸುವ ಉದ್ದೇಶದಿಂದ ಸಾವಯವ ಪದ್ಧತಿಗೆ ಒತ್ತು ನೀಡಲಾಗಿದೆ. ಭೂಮಿಯನ್ನು ಉಳಮೆ ಮಾಡದೆ ಗಿಡದಿಂದ ನೆಲಕ್ಕೆ ಬಿದ್ದ ಎಲೆ, ಕೊಂಬೆಗಳನ್ನು ಅಲ್ಲಿಯೇ ಕೊಳೆಸಲಾಗುತ್ತದೆ. ತೆಂಗಿನ ಸಿಪ್ಪೆಯನ್ನು ಬಿಡಿಸಿ ಅದರಿಂದ ಗೊಬ್ಬರವಾಗಿಸಿ ಗಿಡಗಳಿಗೆ ಪೋಷಕಾಂಶವಾಗಿ ನೀಡಲಾಗುತ್ತದೆ. ಹನಿ ನೀರಾವರಿ ಮೂಲಕವೇ ನೀರು ಹಾಯಿಸುವುದರಿಂದ ಹೆಚ್ಚಿನ ಕೂಲಿಯಾಳುಗಳನ್ನು ಬಳಸುತ್ತಿಲ್ಲ. ನಾಟಿ ಹಸುವಿನ ಸೆಗಣಿ ಬಳಸಿ ತಯಾರಿಸಿದ ಜೀವಾಮೃತ ದ್ರಾವಣವನ್ನು ಗಿಡಗಳು ಹಾಕುತ್ತಿರುವುದರಿಂದ ಎಲ್ಲಾ ಬೆಳೆಗಳು ರೋಗಬಾಧೆಯಿಂದ ಮುಕ್ತವಾಗಿದ್ದು, ಅಧಿಕ ಇಳುವರಿ ಕಾಣಲು ಸಾಧ್ಯವಾಗಿದೆ ಎನ್ನುತ್ತಾರೆ ಮೃತ್ಯುಂಜಯ.
- ತೋಟದಲ್ಲಿ ಏನುಂಟು, ಏನಿಲ್ಲ?
ಸದಾ ಹಚ್ಚಹಸಿರಿನಿಂದ ಕೂಡಿರುವ ತೋಟದಲ್ಲಿ ಸಾಾತ್ ಸಸ್ಯಶಾಮಲೆ ಮೈದಾಳಿ ನಿಂತಂತಿದೆ. ಅಡಿಗಡಿಗೂ ಬೆಳೆಸಿರುವ ವೈವಿಧ್ಯಮಯ ಗಿಡ&ಮರಗಳು ಲಭರಿತವಾಗಿವೆ. 300 ತೆಂಗು, 800 ಅಡಕೆ ಬೆಳೆ ತೋಟದೆಲ್ಲೆಡೆ ಆವರಿಸಿದೆ. ಇದರ ಮಧ್ಯೆಯೇ ಮಿಶ್ರ ಬೆಳೆಯಾಗಿ ಮಾವು, ನಿಂಬೆ, ಸೀಬೆ, ಸಪೋಟ, ಕಿತ್ತಳೆ, ಮೂಸಂಬಿ, ಅನಾನಸ್, ಪಪ್ಪಾಯ ಗಿಡಗಳನ್ನು ಬೆಳೆಸಲಾಗಿದೆ. ಕಾಫಿ, ವೆನಿಲಾ, ಗೆಣಸು, ಚಕ್ಕೋತ, ಡ್ರಾ$ಗನ್ ್ರೂಟ್, ಚೆರಿ, ರಾಮಲ, ಲಕ್ಷ$್ಮಣಲ, ಸೀತಾಲ ದೊಡ್ಡ ಮರಗಳಾಗಿ ಬೆಳೆದಿವೆ. ಸಾಂಬಾರು ಪದಾರ್ಥಗಳಾದ ಅರಿಶಿನ, ಏಲಕ್ಕಿ, ಮೆಣಸು, ಚಕ್ಕೆ, ಲವಂಗ, ಜಾಕಾಯಿ, ಜಾಪತ್ರೆ ಗಿಡಗಳು ಉಂಟು. ಅಪರೂಪದ ತಳಿಗಳಾದ ಚಕ್ರಮನಿ (ರಕ್ತದೊತ್ತಡ, ಮಧುಮೇಹಕ್ಕೆ ರಾಮಬಾಣ), ಮಹಾಕೂಟ (ಇನ್ಸುಲಿನ್ ಬದಲಿಗೆ ಬಳಕೆ), ಪನ್ನೇರಳೆ, ಅಂಜೂರ ಗಿಡಗಳೂ ಇವೆ. ಮಿಂಟ್, ಸೋಂಪು, ಕಾಡು ಕೊತ್ತಂಬರಿ ಗಿಡಗಳು ಸೊಂಪಾಗಿ ಬೆಳೆದಿವೆ. ಕೆಲ ಔಷಧಯುಕ್ತ ತಳಿಗಳನ್ನು ಪ್ರಾಯೋಗಿಕವಾಗಿ ಬೆಳೆಸಲಾಗಿದೆ.
- ಅಪ್ಪ&ಮಗನ ದುಡಿಮೆಗೆ ತಜ್ಞರೇ ಬೆಸ್ತು !
ರೈತ ಮೃತ್ಯುಂಜಯ ಎಂಟು ಎಕರೆ ಜಮೀನಿನಲ್ಲಿ ಸ್ಥಳಿಯ ಹವಾಗುಣಕ್ಕೆ ಹೊಂದಿಕೊಳ್ಳದ ಬೆಳೆಗಳನ್ನು ಕೂಡ ಬೆಳೆದು ಕೃಷಿ ತಜ್ಞರಿಂದ ಸೈ ಎನಿಸಿಕೊಂಡಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ತುಸು ಉಷ್ಣಾಂಶ ಹೆಚ್ಚಿರುವ ಕಾರಣ ಶೀತ ಪ್ರದೇಶದ ತಳಿಗಳು ಇಲ್ಲಿನ ಹವಾಗುಣಕ್ಕೆ ಹೊಂದುವುದಿಲ್ಲ ಎಂಬ ಮಾತಿದೆ. ಇದಕ್ಕೆ ಅಪವಾದ ಎಂಬಂತೆ ಮೃತ್ಯುಂಜಯ ಹಾಗೂ ಅವರ ಪುತ್ರ ಚನ್ನಕೇಶವ ವಿದೇಶದಿಂದ ಕೆಲ ಗಿಡಗಳನ್ನು ತರಿಸಿ ಬೆಳೆಸಿದ್ದಾರೆ. ಇಪ್ಲೀ, ಡ್ರಾ$ಗನ್ ್ರೂಟ್, ಅಮೃತ್ ನೋನಿ, ಸೇಬು, ಕಿತ್ತಳೆ, ಚೆರಿ, ವಿದೇಶಿ ತಳಿಗಳಾದ ಬ್ಲಾ$್ಯಕ್ ಬರಿ, ಪೀನಟ್ ಬಟರ್ ಗಿಡಗಳನ್ನು ಬೆಳೆಸಲಾಗಿದೆ. ಪಿತ್ರಾರ್ಜಿತ ಜಮೀನಿನ ಜತೆಗೆ ಮತ್ತಷ್ಟು ಭೂಮಿ ಖರೀದಿಸಿ ಕೃಷಿಯನ್ನು ಎತ್ತರಕ್ಕೆ ಏರಿಸಿದ್ದಾರೆ.
- ಕೇಂದ್ರ ಸಚಿವರ ಶ್ಲಾಘನೆ
ಮೃತ್ಯುಂಜಯ ಅವರ ತೋಟಕ್ಕೆ ಕೇಂದ್ರ ಹಾಗೂ ರಾಜ್ಯದ ಹಲವು ಸಚಿವರು ಭೇಟಿ ನೀಡಿ ಇಲ್ಲಿನ ತಳಿ ವೈವಿಧ್ಯತೆಗೆ ತಲೆದೂಗಿದ್ದಾರೆ. ಅಂಜೂರ ಗಿಡ ಮರವಾಗಿ ಬೆಳೆದಿರುವುದಕ್ಕೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕೃಷಿ ವಿವಿಗಳ ಅಧಿಕಾರಿಗಳು, ತಜ್ಞರು ಕೂಡ ಭೇಟಿ ನೀಡಿ ಪ್ರಗತಿಪರ ರೈತನ ಬೆನ್ನುತಟ್ಟಿದ್ದಾರೆ.