ನ್ಯೂಸ್

ಶಿವಸೇನಾ ನಾಯಕ ಸಂಜಯ್​ ರಾವತ್​ಗೆ ಶಾಕ್​ ಕೊಟ್ಟ ಇಡಿ!

ಮುಂಬೈ: ಶಿವಸೇನಾ ನಾಯಕ, ಸಂಸದ ಸಂಜಯ್​ ರಾವತ್​ಗೆ ಇಡಿ(ಜಾರಿ ನಿರ್ದೇಶನಾಲಯ) ಸಮನ್ಸ್​ ಜಾರಿ ಮಾಡಿದೆ.

ಮುಂಬೈನ ಕೋರೇಂಗಾವ್​ನಲ್ಲಿರುವ ಪತ್ರಾ ಬಡಾವಣೆ ಅಭಿವೃದ್ಧಿಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾವತ್​ಗೆ ಸಮನ್ಸ್​ ಜಾರಿ ಮಾಡಿರುವ ಇಡಿ, ನಾಳೆ(ಮಂಗಳವಾರ) ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. MHADA ನ 47 ಎಕರೆ ಜಾಗಕ್ಕೆ ಸಂಬಂಧಿಸಿದಂತೆ ಉದ್ಯಮಿ ಪ್ರವೀಣ್​ ಜತೆ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಸಂಜಯ್​ ರಾವತ್​ ಮೇಲಿದ್ದು, 1,034 ಕೋಟಿ ರೂ. ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಭೂ ಅಭಿವೃದ್ಧಿ ಹಗರಣದಲ್ಲಿ ರಾವತ್​ಗೆ ಸಂಬಂಧಿಸಿದ 9 ಆಸ್ತಿಯನ್ನು ಜಪ್ತಿ ಮಾಡಿಕೊಳ್ಳಲಿದೆ. ರಾವತ್​ ಪತ್ನಿಗೆ ಸಂಬಂಧಿಸಿದ 2 ಆಸ್ತಿಯನ್ನೂ ಜಪ್ತಿ ಮಾಡಲಾಗಿದೆ. 672 ಕುಟುಂಬಗಳಿಗೆ ಇ-ಟೆಂಡರ್​ ಮೂಲಕ ಮನೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಹಫ್ತಾ, ಹವಾಲ, ವಿದೇಶಿ ಹಣ ಬಳಕೆ ಮಾಡಲಾಗಿದೆ ಎಂಬ ಆರೋಪವಿದೆ.

ಅತ್ತ ಮಹಾ ಆಘಾಡಿ ಸರ್ಕಾರಕ್ಕೆ ರೆಬಲ್​ ಶಾಸಕರು ಬೆಂಬಲ ಹಿಂಪಡೆದಿದ್ದು, ಉದ್ಧವ್​ ಠಾಕ್ರೆ ಪತನದಂಚಿಗೆ ತಲುಪಿದೆ. ಸಂಜಯ್​ ರಾವತ್​ ಅವರ ನಡವಳಿಕೆಯೇ ಮಹಾರಾಷ್ಟ್ರ ಪತನಕ್ಕೆ ಕಾರಣ ಎಂದು ಕೆಲ ಬಂಡಾಯ ಶಾಸಕರು ಹೇಳಿದ್ದಾರೆ. ಈ ನಡುವೆ ಇಡಿ ಸಮನ್ಸ್​ ಜಾರಿ ಮಾಡಿರುವುದು ರಾವತ್​ ಪಾಲಿಗೆ ಸಂಕಷ್ಟದ ಸಮಯ.