ಮೆಣಸೂರು ಗ್ರಾಪಂನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಬಿಂದುಸತೀಶ್ ಚಾಲನೆ ನೀಡಿದರು. ಡಿ.ಆರ್.ಶ್ರೀನಾಥ್,ಎನ್.ಡಿ.ಪ್ರಸಾದ್,ಬಿನು, ಎಂ.ಟಿ.ಪ್ರವೀಣ್, ಶಿಲ್ಪಾ, ಉಮಾ, ಅಣ್ಣಪ್ಪ ಇದ್ದರು. 
ನ್ಯೂಸ್

ಕಾಂಗ್ರೆಸ್ ಸರ್ಕಾರದ ಕನಸಿನ ಯೋಜನೆ

ಎನ್.ಆರ್.ಪುರ: ಗೃಹಲಕ್ಷ್ಮೀ ಯೋಜನೆ ಕಾಂಗ್ರೆಸ್ ಸರ್ಕಾರದ ಕನಸಿನ ಕಾರ್ಯಕ್ರಮ ಎಂದು ಮೆಣಸೂರು ಗ್ರಾ ಪಂ ಸದಸ್ಯ ಬಿನು ಹೇಳಿದರು.
ಬುಧವಾರ ಮೆಣಸೂರು ಗ್ರಾಪಂನಲ್ಲಿ ಗೃಹಲಕ್ಷ್ಮೀಯೋಜನೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಗೃಹಲಕ್ಷ್ಮೀ ಯೋಜನೆಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿದ್ಯುಕ್ತವಾಗಿ ಚಾಲನೆ ನೀಡಿದ್ದಾರೆ. ಯೋಜನೆಯಲ್ಲಿ ಪ್ರತಿ ಕುಟುಂಬದ ಯಜಮಾನಿ ಖಾತೆಗೆ ನೇರವಾಗಿ 2 ಸಾವಿರ ರೂಪಾಯಿ ಜಮೆ ಮಾಡಲಾಗುತ್ತದೆ. ಇದರಿಂದ ಮಹಿಳೆಯರು ಆರ್ಥಿಕವಾಗಿ ಸದೃಢರಾಗಬಹುದು. ಈ ಹಣದಿಂದ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲ ನೀಡಿದಂತಾಗುತ್ತದೆ ಎಂದರು.
ಗ್ರಾಪಂ ಸದಸ್ಯ ಡಿ.ಆರ್.ಶ್ರೀನಾಥ್ ಮಾತನಾಡಿ, ಬಡ ಜನರಿಗೆ ಅನುಕೂಲವಾಗುವಂತಹ ಯೋಜನೆಗಳಿಗೆ ನಮ್ಮ ಬೆಂಬಲ ಇರುತ್ತದೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಂದು ಮಹಿಳೆಯರು ಕೆಳ ಹುದ್ದೆಯಿಂದ ರಾಷ್ಟ್ರಪತಿಯ ಹುದ್ದೆಯವರೆಗಿನ ಸ್ಥಾನಗಳನ್ನು ನಿಭಾಯಿಸುತ್ತಿದ್ದಾರೆ. ಮಹಿಳೆಯರ ಸಬಲೀಕರಣಕ್ಕೆ ಇದು ಅನುಕೂಲವಾಗಲಿದೆ. ಸರಳ ರೀತಿಯಲ್ಲಿ ಖಾತೆಗೆ ಹಣ ಸಂದಾಯವಾಗುವ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ ಎಂದರು.
ಬಿಂದು ಸತೀಶ್ ಮಾತನಾಡಿ, ಗೃಹಲಕ್ಷ್ಮೀಯೋಜನೆಯಿಂದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬಂದು, ಎಲ್ಲ ಕ್ಷೇತ್ರದಲ್ಲೂ ಗುರುತಿಸಿಕೊಳ್ಳಬೇಕು. ಮಹಿಳೆಯರು ಸರ್ಕಾರದ ಸವಲತ್ತನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಗ್ರಾಪಂ ಉಪಾಧ್ಯಕ್ಷೆ ಪಚ್ಚೆಯಮ್ಮ, ಸದಸ್ಯರಾದ ಎನ್.ಡಿ.ಪ್ರಸಾದ್, ಅಣ್ಣಪ್ಪ, ಯಾಸ್ಮೀನ್, ಶಿಲ್ಪಾ, ಎ.ಯು.ರಚಿತಾ, ಎಂ.ಟಿ.ಪ್ರವೀಣ್,ಉಮಾ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಧನಂಜಯ ಮೇದೂರು, ಪಿಡಿಒ ಎ.ಸಂತೋಷ್‌ಕುಮಾರ್ ಇದ್ದರು.