ನ್ಯೂಸ್

ಹಳ್ಳಕ್ಕೆ ಬಿದ್ದ ಕಾರು...ನಾಲ್ವರು ಪಾರು: ನಾಯಿ ಸಾವು

ಉತ್ತರಕನ್ನಡ: ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದ ಕಾರು ಹಳ್ಳಕ್ಕೆ ಬಿದ್ದ ಘಟನೆ ಅಂಕೋಲಾದ ಬೆಳಸೆ ಗ್ರಾಮದ ಬಳಿ ನಡೆದಿದೆ.

ಈ ಕಾರಿನಲ್ಲಿ ನಾಲ್ವರು ಇದ್ದರು. ಹಾಗೇ ಒಂದು ನಾಯಿಯೂ ಇತ್ತು. ಅಪಘಾತ ತಪ್ಪಿಸಲು ಪ್ರಯತ್ನ ಪಟ್ಟಾಗ ಈ ಅವಘಡ ನಡೆದಿದೆ. ನಾಲ್ವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಕಾರಿನಲ್ಲಿದ್ದ ನಾಯಿ ಹೊರಬರಲಾರದೆ ಮೃತಪಟ್ಟಿದೆ.