ಬೀದರ್: ಇಲ್ಲಿನ ಖಾಸಗಿ ಆಸ್ಪತ್ರೆ ವೈದ್ಯರೋರ್ವರು ದೇವಸ್ಥಾನವೊಂದರಲ್ಲಿ ಉಚಿತವಾಗಿ ಮಾಸ್ಕ್ ವಿತರಣೆ ಮಾಡುವ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ನಗರದಲ್ಲಿ ಐತಿಹಾಸಿಕ ಪ್ರಸಿದ್ಧವಾದ ಪಾಪನಾಶ ದೇವಸ್ಥಾನಕ್ಕೆ ಬರುವ ಭಕ್ತರಿಗೆ ವೈದ್ಯ ಅಲ್ಲಮ ಪ್ರಭು ಆನಂದವಾಡೆ ಎಂಬುವರು ಪ್ರಸಾದ ರೂಪದಲ್ಲಿ ಎನ್95 ಮಾಸ್ಕ್ ವಿತರನೆ ಮಾಡುತ್ತಿದ್ದಾರೆ.
ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ಅಷ್ಟಾದರೂ ಕೆಲವರು ಮಾಸ್ಕ್ ಧರಿಸದೆ ಓಡಾಡುತ್ತಿದ್ದಾರೆ. ಅಂಥವರಲ್ಲಿ ಅರಿವು ಮೂಡಿಸುವ ಕೆಲಸವನ್ನೂ ಡಾ. ಅಲ್ಲಮ ಪ್ರಭು ಮಾಡುತ್ತಿದ್ದಾರೆ. ಇದನ್ನೂ ಓದಿ: ದೇಶದಲ್ಲಿ ಇಂದು 28,701 ಮಂದಿಯಲ್ಲಿ ಕರೊನಾ; 9 ಲಕ್ಷದ ಸಮೀಪಕ್ಕೆ ಬಂತು ಸೋಂಕಿತರ ಸಂಖ್ಯೆ
ಅಲ್ಲಮ ಪ್ರಭು ಅವರು ಭಾಲ್ಕಿಯ ಕುಂಟೆಸಿರ್ಸಿ ಗ್ರಾಮದವರು. ಹೈದರ್ಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ತಮ್ಮೂರಿನ ಜನರಿಗಾಗಿ ಸ್ವಂತ ಖರ್ಚಿನಲ್ಲಿಯೇ ಮಾಸ್ಕ್ ವಿತರಣೆ ಮಾಡುತ್ತಿದ್ದಾರೆ. ಇದುವರೆಗೆ ಒಟ್ಟು ಒಂದು ಸಾವಿರ ಎನ್ 95 ಮಾಸ್ಕ್ಗಳನ್ನು ನೀಡಿದ್ದಾರೆ.
ಈ ಹಿಂದೆ ಡಾ. ಅಲ್ಲಮ ಅವರು ಹೈದರಾಬಾದ್ನಲ್ಲಿ ನೆಲೆಸಿರುವ ಕನ್ನಡಿಗರಿಗೆ 1300 ಮಾಸ್ಕ್ಗಳನ್ನ ವಿತರಣೆ ಮಾಡಿದ್ದರು.