DMK : ಪಂಚಾಯ್ತಿಯಲ್ಲಿನ ಅಕ್ರಮಗಳನ್ನು ಎತ್ತಿ ತೋರಿಸಿದ ಕಾರಣಕ್ಕಾಗಿ ಗ್ರಾಮದ ವ್ಯಕ್ತಿಯೊಬ್ಬನನ್ನು ಕೊಲೆಗೈದ ಆರೋಪದ ಮೇಲೆ ಡಿಎಂಕೆಯ ಪಂಚಾಯತ್ ಅಧ್ಯಕ್ಷ ವಿನಯಾಗಂ ಪಳನಿಸ್ವಾಮಿ ಎಂಬುವವರನ್ನು ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿ ಪೊಲೀಸರು ಗುರುವಾರ (ಸೆಪ್ಟೆಂಬರ್ 11) ಬಂಧಿಸಿದ್ದಾರೆ.
ಪಳನಿಸ್ವಾಮಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈತ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ವೇಳೆ, ಪಂಚಾಯತ್ ಅಧ್ಯಕ್ಷ ತನ್ನ ಕಾರಿನಲ್ಲಿ ಆತನ ಮೇಲೆ ಹರಿಸಿ ಕೊಂದಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ.
ಈ ಮೊದಲು ಅಧಿಕಾರಿಗಳು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸಿದ್ದರಿಂದ ಹಿಟ್ ಎಂಡ್ ರನ್ ಎಂದು ಕೇಸು ದಾಖಲಿಸಲಾಗಿತ್ತು. ಆದರೆ, ಮೃತರ ಕುಟುಂಬವು ಪಳನಿಸ್ವಾಮಿ ಹಾಗೂ ಪಂಚಾಯತ್ ಮುಖ್ಯಸ್ಥರೊಂದಿಗೆ ಸಮಸ್ಯೆಗಳಿರುವುದನ್ನು ಅಧಿಕಾರಿಗಳಿಗೆ ತಿಳಿಸಿದ್ದು, ಕೊಲೆ ಶಂಕೆಯನ್ನು ವ್ಯಕ್ತಪಡಿಸಿದ್ದರು. ಈ ನಂತರ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ಆರಂಭಿಸಿದ್ದರು.
ಈ ಮೊದಲು ಬಲಿಪಶು ಪಹಳಸ್ವಾಮಿ ಖಾಸಗಿ ರಸ್ತೆಯನ್ನು ಪಂಚಾಯತ್‌ಗೆ ಹಸ್ತಾಂತರಿಸದಿರುವ ಬಗ್ಗೆ ದೂರು ನೀಡಿದ್ದರು. ಈ ವೇಳೆ ಪಂಚಾಯತ್ ಅಧ್ಯಕ್ಷರಿಗೂ ಬಲಿಪಶು ನಡುವೆ ಜಗಳ ಸಂಭವಿಸಿತ್ತು. ಇನ್ನು ಹಲವಾರು ಸಮಸ್ಯೆಗಳನ್ನು ಎತ್ತಿ ತೋರಿಸಿರುವುದು ಕೊಲೆಗೆ ಕಾರಣವಾಗಿರಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಎನ್ಡಿಟಿವಿಗೆ ತಿಳಿಸಿದ್ದಾರೆ.
ಇನ್ನು ಪಂಚಾಯತ್ ಅಧ್ಯಕ್ಷನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಸ್ಥಳೀಯ ನ್ಯಾಯಾಲಯ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ರಾಜ್ಯದಲ್ಲಿ ಅಪರಾಧಗಳು ಹೆಚ್ಚುತ್ತಿದ್ದು, ಕಾನೂನು ಸುವ್ಯವಸ್ಥೆ ಕುಸಿತದ ಬಗ್ಗೆ ಆಡಳಿತಾರೂಢ ಡಿಎಂಕೆ ವಿರುದ್ಧ ವಿರೋಧ ಪಕ್ಷಗಳು ಆರೋಪ ಮಾಡುತ್ತಿರುವ ಸಮಯದಲ್ಲೇ ಈ ಘಟನೆ ಸಂಭವಿಸಿದೆ. ಆದರೆ, ಆಡಳಿತ ಪಕ್ಷ ಮತ್ತು ರಾಜ್ಯ ಪೊಲೀಸರು ಈ ಆರೋಪಗಳನ್ನು ನಿರ್ಲಕ್ಷಿಸಿದ್ದಾವೆ. ಇನ್ನು ರಾಜ್ಯದಲ್ಲಿ ಯಾವುದೇ ಅಪರಾಧಗಳು ಕಂಡು ಬಂದಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್)