ಕಿರುವಾರ ಎಸ್.ಸುದರ್ಶನ್ ಕೋಲಾರ
ಕೋಮುಲ್ ಚುನಾವಣೆ ನಡೆದು, 13 ಮಂದಿ ನಿರ್ದೇಶಕರ ಆಯ್ಕೆಯಾಗಿದೆ. ಆದರೆ, ಈಗ ರಾಜಕೀಯ ಹಾಗೂ ಸಾರ್ವಜನಿಕರ ವಲಯದಲ್ಲಿ ಅಧ್ಯಕ್ಷ ಸ್ಥಾನದ ಗೆಲುವಿನ ಲೆಕ್ಕಾಚಾರ ಶುರುವಾಗಿದೆ.
ರಾಜ್ಯದ ಗಮನ ಸೆಳೆಯುವ ರೀತಿ ಒಕ್ಕೂಟದ ಚುನಾವಣೆ ನಡೆದಿದೆ. ಅಭ್ಯರ್ಥಿಗಳು ಕೋಟಿಗಟ್ಟಲೇ ಹಣ ವೆಚ್ಚ ಮಾಡಿದ್ದಾರೆ. ಮತದಾರರನ್ನು ವಿಮಾನದಲ್ಲಿ, ಎಸಿ ಬಸ್ಗಳಲ್ಲಿ ಕರೆದುಕೊಂಡು ರೆಸಾರ್ಟ್ಗಳಲ್ಲಿ ಇರಿಸಿದ್ದರು. ಈ ಕುರಿತು ಸಾರ್ವಜನಿಕರ ವಲಯದಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
ಒಕ್ಕೂಟದ ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವು ಅಷ್ಟೇನು ಸುಲಭವಾಗಿ ಆಗಿಲ್ಲ. ಮತದಾರರಿಗೆ ಲಕ್ಷ ಲಕ್ಷ ನಗದು, ಬೆಲೆ ಬಾಳುವ ಉಡುಗೊರೆಗಳ ಆಮಿಷವೊಡ್ಡಿ ಕೆಲ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರೆ, ಇನ್ನು ಕೆಲವರು ಪರಾಭವಗೊಂಡಿದ್ದಾರೆ.
ಪರಾಭಾವಗೊಂಡಿರುವವರ ಪೈಕಿ ಯಾರು ತಮ್ಮ ಪರ ಮತ ಹಾಕಿದ್ದಾರೆ, ಯಾರು ಹಾಕಿಲ್ಲ ಎಂಬ ಕುರಿತು ಲೆಕ್ಕಚಾರ ನಡೆಯುತ್ತಿದ್ದು, ಮಧ್ಯಸ್ಥಿಕೆ ವಹಿಸಿದ್ದವರ ಜತೆಗೆ ಚರ್ಚಿಸಿ ಹಣ ವಾಪಸ್ ಪಡೆಯುವ ಯತ್ನ ನಡೆಯುತ್ತಿದೆ.
ಹಿಂದೆ ಒಕ್ಕೂಟದ ಚುನಾವಣೆ ಕೆಲವೇ ಮಂದಿ ಕೈಯಲ್ಲಿ ಅಧಿಕಾರ ಇರುತ್ತಿತ್ತು. ಕಳೆದ 2-3 ಅವಧಿಯಿಂದ ರಾಜಕೀಯ ಮುಖಂಡರು, ಶಾಸಕರು ಒಕ್ಕೂಟದ ಚುನಾವಣೆಗೆ ಪ್ರವೇಶ ಮಾಡುತ್ತಿದ್ದು, ದುಬಾರಿಯಾಗಿದೆ.
ನಿರ್ದೇಶಕರ ಚುನಾವಣೆಯಲ್ಲಿ ಜಯಿಸಿರುವವರ ಪೈಕಿ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, 8ನೇ ಬಾರಿ ಜಯಸಿಂಹ ಕೃಷ್ಣಪ್ಪ, ಕಾಡೇನಹಳ್ಳಿ ನಾಗರಾಜ್ ಹೀಗೆ ಹಿರಿಯ ನಿರ್ದೇಶಕರು ಇದ್ದಾರೆ. ಒಟ್ಟು 13 ಮಂದಿ ನಿರ್ದೇಶಕರ ಪೈಕಿ 9 ಮಂದಿ ಕಾಂಗ್ರೆಸ್ ಬೆಂಬಲಿತ ಹಾಗೂ 4 ಮಂದಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇಬ್ಬರು ಶಾಸಕರಲ್ಲಿ ಯಾರು ಅಧ್ಯಕ್ಷರಾಗುತ್ತಾರೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
* ಜೆಡಿಎಸ್ನಿಂದ ನಂಬರ್ ಗೇಮ್..!!
ಒಟ್ಟು 13 ಮಂದಿ ನಿರ್ದೇಶಕರ ಪೈಕಿ ಕಾಂಗ್ರೆಸ್ ಬೆಂಬಲಿತರಾಗಿ ಶಾಸಕರಾದ ಕೆ.ವೈ.ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ಜಯಸಿಂಹ ಕೃಷ್ಣಪ್ಪ, ಹನುಮೇಶ್, ಕಾಂತಮ್ಮ, ಶ್ರೀನಿವಾಸ್, ಮಹಾಲಕ್ಷಿ$್ಮ ಚಂಜಿಮಲೆ ರಮೇಶ್, ಕೆ.ಕೆ.ಮಂಜುನಾಥ್ ಸೇರಿ 9 ಮಂದಿ ಆಯ್ಕೆಯಾಗಿದ್ದು, ಶಾಸಕರಿಬ್ಬರು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ನಡುವೆ 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿರುವ ಜಯಸಿಂಹ ಕೃಷ್ಣಪ್ಪ ಅವರು ಅಧ್ಯಕ್ಷ ಸ್ಥಾನದ ಬೇಡಿಕೆಯಿಟ್ಟರೂ ಅಚ್ಚರಿ ಇಲ್ಲ. ಆಶ್ಚರ್ಯವಿಲ್ಲ. ಇನ್ನು ಕೆಎಚ್ಎಂ ಬಣದಿಂದ ಗೆಲುವು ಸಾಧಿಸಿರುವ ಇಬ್ಬರು, ಜೆಡಿಎಸ್&ಬಿಜೆಪಿ ಮೈತ್ರಿ ಬೆಂಬಲಿತರಾದ ಡಿ.ವಿ.ಹರೀಶ್, ಕಾಡೇನಹಳ್ಳಿ ನಾಗರಾಜ್, ಚಲುವನಹಳ್ಳಿ ನಾಗರಾಜ್, ಶಾಮೇಗೌಡ ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
* ಕೋಲಾರದಲ್ಲಿ 2 ಕೈ, 2 ಎನ್ಡಿಎ ಗೆಲುವು
ಕೋಲಾರ ತಾಲೂಕು ವ್ಯಾಪ್ತಿಯಲ್ಲಿ 5 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಎನ್ಡಿಎ ಹಾಗೂ 3 ಮಂದಿ ಕಾಂಗ್ರೆಸ್ ಬೆಂಬಲಿತರು ಆಯ್ಕೆಯಾಗಿದ್ದಾರೆ.
ಈಶಾನ್ಯ ಕ್ಷೇತ್ರದಿಂದ ಕಾಂಗ್ರೆಸ್ನಿಂದ ಸೀಸಂದ್ರ ಗೋಪಾಲಗೌಡ, ನೈರುತ್ಯ ಕೇಂದ್ರದಿಂದ ನಾಗನಾಳ ಸೋಮಣ್ಣ, ಮಹಿಳಾ ಉತ್ತರ ಕೆ.ಆರ್.ರೇಣುಕಾ ಅವರನ್ನು ಕಣಕ್ಕೆ ಇಳಿಸಿದ್ದರು. ಮಹಿಳಾ ಉತ್ತರ ಕ್ಷೇತ್ರದಿಂದ ಬಂಡಾಯವಾಗಿ ನಗರಸಭೆ ಮಾಜಿ ಅಧ್ಯೆ ಮಹಾಲಕ್ಷಿ$್ಮ ಸ್ಪರ್ಧಿಸಿದ್ದರು.
ಶಾಸಕ ಕೊತ್ತೂರು ಜಿ.ಮಂಜುನಾಥ್, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್ ಗಂಭೀರವಾಗಿ ತೆಗೆದುಕೊಂಡರಾದರು ಶ್ರಮವೇನು ಲಿಸಿಲ್ಲ. ನಾಲ್ಕು ಸ್ಥಾನದ ಪೈಕಿ ವೇಮಗಲ್ ಕ್ಷೇತ್ರದಿಂದ ಚಂಜಿಮಲೆ ರಮೇಶ್ ಆಯ್ಕೆಯಾಗಿದ್ದಾರೆ. ಆಡಳಿತ ಪಕ್ಷದ ಜನಪ್ರತಿನಿಧಿಗಳ ನಿರೀೆಯಂತೆ ಲಿತಾಂಶ ಲಭಿಸಿಲ್ಲ.
* ಗೆದ್ದನಂತರ ಮಹಾಲಕ್ಷ್ಮೀ ಕಾಂಗ್ರೆಸ್ ಅಭ್ಯರ್ಥಿ
ಕೆಎಚ್ಎಂ ಬಣದಿಂದ ಗುರುತಿಸಿಕೊಂಡಿದ್ದ ಮಹಾಲಕ್ಷ್ಮೀ ಅವರು ಮಹಿಳಾ ಉತ್ತರ ಕ್ಷೇತ್ರದಿಂದ ಬಂಡಾಯವಾಗಿ ಸ್ಪರ್ಧಿಸಿದ್ದರು. ಮತದಾನಕ್ಕೂ ಮುಂಚೆ ಶಾಸಕ ಕೊತ್ತೂರು ಜಿ.ಮಂಜುನಾಥ್ ಅವರು ಮಹಾಲಕ್ಷ್ಮೀ ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿಯಲ್ಲ ಅಂತ ಹೇಳಿದ್ದರು. ಇದಕ್ಕೆ ಶಾಸಕರು ಹಾಗೂ ನಿರ್ದೇಶಕರ ಕೆ.ವೈ.ನಂಜೇಗೌಡ ಅವರು ಮಂಜುನಾಥ್ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. ಈ ಮಹಾಲಕ್ಷ್ಮೀ ಗೆಲುವು ಸಾಧಿಸಿದ್ದು, ನಮ್ಮ ಪಕ್ಷದವರೇ ಎಂದು ಸಮರ್ಥಿಸಿಕೊಂಡಿದ್ದಾರೆ.
* ಜಿಲ್ಲಾಧ್ಯಕ್ಷರ ಕ್ಷೇತ್ರದಲ್ಲಿ ಸೋಲು
ಶಾಸಕರು ಹಾಗೂ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಅವರ ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್&ಬಿಜೆಪಿ ಮೈತ್ರಿಯಿಂದ ಯಲ್ದೂರು ಕ್ಷೇತ್ರದಿಂದ ಶಶಿಕಲಾ ಹಾಗೂ ಅಡ್ಡಗಲ್ ಕ್ಷೇತ್ರದಿಂದ ಪಾಳ್ಯ ಬೈರಾರೆಡ್ಡಿ ಅವರನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ, ಪ್ರತಿಸ್ಪರ್ಧಿಗಳ ವಿರುದ್ಧ ಪ್ರಬಲ ಪೈಪೋಟಿ ನೀಡಲಾಗದೆ ಭಾರಿ ಅಂತರದ ಮತಗಳಿಂದ ಎನ್ಡಿಎ ಅಭ್ಯರ್ಥಿಗಳು ಸೋಲುಂಡಿದ್ದಾರೆ.
* ಮುಳಬಾಗಿಲಿನಲ್ಲಿ ಕೈಗೆ ಸೆಡ್ಡು
ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಸಹಕಾರ ಸಂಸ್ಥೆಗಳ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ, ಡಿಸಿಸಿ ಬ್ಯಾಂಕ್, ಒಕ್ಕೂಟದ ಚುನಾವಣೆಗಳಲ್ಲಿ ತಮ್ಮ ಪಕ್ಷದ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳಲು ಹಾಕಿಕೊಂಡಿದ್ದ ಪ್ಲಾ$್ಯನ್ ಸಕ್ಸಸ್ ಆಗಿದೆ. ಆಡಳಿತ ಪಕ್ಷದ ಶಾಸಕರು ಬ್ಯಾಂಕ್ ಜತೆಗೆ, ಒಕ್ಕೂಟ ಪ್ರವೇಶಿಸಿದ್ದಲ್ಲದೆ, ಬೇರೆ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿ ಗೆಲ್ಲಿಸಿಕೊಳ್ಳಲು ಶತ ಪ್ರಯತ್ನ ಮಾಡಿದರು. ಆದರೆ, ತಳಮಟ್ಟದಿಂದ ಚುನಾವಣೆಗೆ ಸಿದ್ಧರಾಗಿ ಮುಳಬಾಗಿಲು ಕ್ಷೇತ್ರದಿಂದ ಕಾಡೇನಹಳ್ಳಿ ನಾಗರಾಜ್, ಶಾಮೇಗೌಡರನ್ನು ಗೆಲ್ಲಿಸಿಕೊಂಡು ಸೈ ಎನಿಸಿಕೊಂಡಿದ್ದಾರೆ.
* ಕೆಎಚ್ಎಂ-ಟಬಂಧನ್ ಬಲಾಬಲ
ಮಾಲೂರು ತಾಲೂಕು ವ್ಯಾಪ್ತಿಯ ಟೇಕಲ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೆ.ವೈ.ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರು ಕಸಬಾ ಕ್ಷೇತ್ರ ಶ್ರೀನಿವಾಸ್ನನ್ನು ಹಾಗೂ ಇತರ ತಾಲೂಕುಗಳಲ್ಲಿ ಸ್ಪರ್ಧಿಸಿದ್ದ ಟಬಂದನ್ ಗುಂಪಿನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪಣ ತೊಟ್ಟಿದರು. ಶಾಸಕ ಎನ್.ಎನ್.ನಾರಾಯಣಸ್ವಾಮಿ, ಮಹಾಲಕ್ಷಿ$್ಮ ಹೊರತುಪಡಿಸಿದರೆ ಉಳಿದವರೆಲ್ಲ ಕಾಂಗ್ರೆಸ್ನಿಂದ ಟಬಂದನ್ ಗುಂಪಿನವರೇ ಆಯ್ಕೆಯಾಗಿದ್ದು, ಅಧ್ಯಕ್ಷ ಸ್ಥಾನದ ಚುನಾವಣೆಗೆ ಬೇಕಾಗಿರುವ ಕೋರಂ ಹೆಚ್ಚಿಸಿಕೊಳ್ಳಲು ಎನ್ಡಿಎ ನಿರ್ದೇಶಕರನ್ನು ಸೆಳೆಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.
* ಸುಮ್ಮನಾಗಿಸಲು ಹೈಕಮಾಂಡ್ ಮೊರೆ
ಕೆಜಿಎ್ ಕ್ಷೇತ್ರದಿಂದ ಜಯಸಿಂಹ ಕೃಷ್ಣಪ್ಪ ಗೆಲುವು ಸಾಧಿಸಿದ್ದು, ಬಂಗಾರಪೇಟೆ ಅಭ್ಯರ್ಥಿ ಎಸ್.ಎನ್.ನಾರಾಯಣಸ್ವಾಮಿ ಅವರು ಒಕ್ಕೂಟ ಪ್ರವೇಶ ಮಾಡಬಾರದು ಎಂದು ವಿರೋಧಿಗಳು ಪಟ್ಟ ಪ್ರಯತ್ನ ವಿಲವಾಗಿದೆ. ಈ ಹಿಂದಿನಿಂದಲೂ ಒಕ್ಕೂಟದ ವಿಚಾರದಲ್ಲಿ ಹಗರಣಗಳ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡುತ್ತಾ ಬಂದಿರುವ ಎಸ್.ಎನ್.ನಾರಾಯಣಸ್ವಾಮಿ ಇನ್ನು ಮುಂದೆ ಏನು ಮಾಡುತ್ತಾರೆ ಎಂಬ ಆತಂಕ ಪಕ್ಷದ ನಿರ್ದೇಶಕರಲ್ಲಿ ಶುರುವಾಗಿದೆ. ಮುಂದಿನ ದಿನಗಳಲ್ಲಿ ಎಸ್.ಎನ್.ನಾರಾಯಣಸ್ವಾಮಿ ಅವರನ್ನು ಸುಮ್ಮನಾಗಿಸಬೇಕು ಎಂದು ತಮ್ಮದೆ ಪಕ್ಷದ ಜನಪ್ರತಿನಿಧಿಗಳು ಹೈಕಮಾಂಡ್ ಮೊರೆ ಹೋಗಲಿದ್ದಾರೆ.