ಎಸ್‌ಐಆರ್ ವಿರೋಧಿಸಿ ‘ಪ್ರಜಾಪ್ರಭುತ್ವದ ಅಂತ್ಯಕ್ರಿಯೆ’ ಮಾಡಿ ಸಾಂಕೇತಿಕ ಪ್ರತಿಭಟನೆ 
ನ್ಯೂಸ್

‘ಪ್ರಜಾಪ್ರಭುತ್ವದ ಅಂತ್ಯಕ್ರಿಯೆ’ ನಡೆಸಿ ವಿಭಿನ್ನ ಪ್ರತಿಭಟನೆ; CEC ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ | SIR Protest

ಬೆಂಗಳೂರಿನಲ್ಲಿ ಎಸ್‌ಐಆರ್ ಪರಿಷ್ಕರಣೆ ವಿರೋಧಿಸಿ ‘ಪ್ರಜಾಪ್ರಭುತ್ವದ ಅಂತ್ಯಕ್ರಿಯೆ’ ಹೆಸರಿನಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

Bengaluru SIR Protest: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆದಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ‘ಪ್ರಜಾಪ್ರಭುತ್ವದ ಅಂತ್ಯಕ್ರಿಯೆ’ ಹೆಸರಿನಲ್ಲಿ ಸಾಂಕೇತಿಕ ಕಾರ್ಯಕ್ರಮ ನಡೆಸಿ, ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಲಾಯಿತು.

ಎಸ್‌ಐಆರ್ ವೇಳೆ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ ಅವರು, ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ

ಎಸ್‌ಐಆರ್ ಜ್ಞಾನೇಶ್ ಕುಮಾರ್ ಅವರು ಇತರೆ ಚುನಾವಣಾ ಆಯುಕ್ತರ ಆಕ್ಷೇಪಣೆಗಳ ನಡುವೆಯೂ ಎಸ್‌ಐಆರ್​ಗೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಉಲ್ಲೇಖಿಸಿ ಪ್ರತಿಭಟನಾಕಾರರು ಅವರ ರಾಜೀನಾಮೆಗೆ ಆಗ್ರಹಿಸಿದರು.

ಆಯುಕ್ತರ ನಡುವೆ ಭಿನ್ನಾಭಿಪ್ರಾಯ

ಈ ಆರೋಪಗಳ ಬೆನ್ನಲ್ಲೇ, ಚುನಾವಣಾ ಆಯೋಗವು ಆಯುಕ್ತರ ನಡುವೆ ಭಿನ್ನಾಭಿಪ್ರಾಯ ಇರುವುದು ಸಹಜ. ಇದು ಸಾಂಸ್ಥಿಕ ಚರ್ಚೆಯ ಒಂದು ಭಾಗವಾಗಿದ್ದು, ಆಯೋಗದ ಆದೇಶಗಳು ಕಾನೂನುಬದ್ಧವಾಗಿವೆ ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ನೇಪಾಳದಲ್ಲಿ ಮಳೆ ಮರಣಮೃದಂಗ: ಭೂಕುಸಿತಕ್ಕೆ 10 ಬಲಿ, ನೋಡನೋಡುತ್ತಿದ್ದಂತೆ ಕೊಚ್ಚಿಹೋಯ್ತು ಸೇತುವೆ! | Nepal Flood

ಪ್ರತಿಭಟನೆಯ ವೇಳೆ ‘ಪ್ರಜಾಪ್ರಭುತ್ವದ ಅಂತ್ಯಕ್ರಿಯೆ’ಯನ್ನು ಸಾಂಕೇತಿಕವಾಗಿ ನಡೆಸಲಾಯಿತು. ಬಳಿಕ ಶುದ್ಧೀಕರಣ ವಿಧಿವಿಧಾನ ನಡೆಸಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.