ನ್ಯೂಸ್

ಒಂದು ವಿಭಿನ್ನ ಪ್ರತಿಭಟನೆ... ತಮ್ಮ ವಿವಾಹಕ್ಕೆ ಕುಂದು ತಂದ ಲಾಕ್​ಡೌನ್ ನಿಯಮಾವಳಿಗಳ ವಿರುದ್ಧ ಇಟಲಿಯ ಯುವತಿಯರು ಮಾಡಿದ್ದೇನು?

sspmiracle1982

ರೋಮ್: ಇಟಲಿಯ ಇತ್ತೀಚಿನ COVID-19 ಲಾಕ್‌ಡೌನ್ ನಿಯಮಾವಳಿಗಳ ವಿರುದ್ಧ ಒಂದು ರೀತಿಯ ವಿಭಿನ್ನ ಹಠಾತ್ ಪ್ರತಿಭಟನೆ ರೋಮ್‌ನ ಬೀದಿಗಳಲ್ಲಿ ನಡೆದಿದೆ.

ವಿವಾಹ ಸಮಾರಂಭಗಳಿಗೆ ಅನುಮತಿ ನೀಡದಿರುವುದಕ್ಕೆ ಕೋಪಗೊಂಡ ಮಹಿಳೆಯರ ಗುಂಪು, ವೈಭವದ ವಿವಾಹದ ಉಡುಗೆ ಧರಿಸಿ, ಇತ್ತೀಚಿನ ಲಾಕ್‌ಡೌನ್ ಆದೇಶದ ವಿರುದ್ಧ ರ್ಯಾಲಿ ನಡೆಸಿತು.

ಅಂದಾಜು 15-ಮಹಿಳೆಯರು, ಎಲ್ಲರೂ ಬಿಳಿ ಮಾಸ್ಕ್ ಮತ್ತು ಬಿಳಿ ಪ್ಯಾರಾಸೋಲ್​​ಗಳನ್ನು ಧರಿಸಿ, ಕೈಯಲ್ಲಿ ಪ್ಲೆಕಾರ್ಡ್​​ಗಳನ್ನು ಹಿಡಿದು ಟ್ರೆವಿ ಕಾರಂಜಿ ಮುಂದೆ ನಿಂತಿದ್ದರು. ಅದೇ ಗುಂಪು ನಂತರ ಸಂಸತ್ತಿನ ಕಟ್ಟಡಗಳ ಹೊರಗಡೆ ಲಾಕ್​ಡೌನ್​​ ನಿಯಮಗಳಿಂದ ತೊಂದರೆಗೀಡಾದ ಇತರ ಕೈಗಾರಿಕೆಗಳ ಪ್ರತಿಭಟನಾಕಾರರೊಂದಿಗೆ ಹೊರಟಿತು.

ಅವಿವಾಹಿತರ ಹಠಾತ್ ಪ್ರತಿಭಟನೆ ಎಂಬ ಹೆಸರಿನಲ್ಲಿ ಈ ಪ್ರತಿಭಟನೆಯನ್ನು ಇಟಲಿಯ ವಿವಾಹ ಸಂಘಟನೆ ಆಯೋಜಿಸಿತ್ತು.

'ನಿರ್ಬಂಧಗಳಿಲ್ಲದ ವಿವಾಹಗಳು', 'ನೀವು ನಮ್ಮ ಮದುವೆಗಳನ್ನು ಮುರಿದಿದ್ದೀರಿ', 'ಮದುವೆಗಳಿಗೆ ಚರ್ಚ್​​​​​​​​​​​​​​​​​​​​ ಬಾಗಿಲುಗಳನ್ನು ಮುಚ್ಚಲಾಗಿದೆ' ಎಂಬ ಸಂದೇಶಗಳಿರುವ ಪ್ಲ್ಯಾಕಾರ್ಡ್‌ಗಳನ್ನು ಹೊಂದಿರುವ ಮಹಿಳೆಯರನ್ನು ಹಠಾತ್ ಪ್ರತಿಭಟನೆಯ ದೃಶ್ಯಾವಳಿ ವೀಡಿಯೊದಲ್ಲಿದೆ.

" ಚರ್ಚ್ ಹೊರತುಪಡಿಸಿ ರೆಸ್ಟೋರೆಂಟ್‌ಗಳು ನನಗೆ ಸಿಗುತ್ತಿಲ್ಲ, ಆದ್ದರಿಂದ ಮುಂದಿನ ವರ್ಷಕ್ಕೆ ಮದುವೆಯಾಗಲು ನಿರ್ಧರಿಸಿದ್ದೇನೆ. ಏಕೆಂದರೆ ಆಗ ಎಲ್ಲವೂ ಚೆನ್ನಾಗಿರುತ್ತದೆ, ನಾನು ಅಂತಿಮವಾಗಿ ಮದುವೆಯಾಗಬಹುದು ಎಂಬ ಆಶಾಭಾವನೆ ಇದೆ. ಎನ್ನುತ್ತಾಳೆ 22 ವರ್ಷದ ಒಬ್ಬ ಪ್ರತಿಭಟನಾಗಾರ್ತಿ.

COVID-19 ಹರಡುವುದನ್ನು ತಡೆಗಟ್ಟಲು ಇಟಲಿಯಲ್ಲಿ ಎರಡು ತಿಂಗಳು ವಿವಾಹ ಮಹೋತ್ಸವ ಸೇರಿದಂತೆ ಎಲ್ಲ ಸದ್ಯ ಅನಿವಾರ್ಯವಲ್ಲದ ವ್ಯವಹಾರಗಳು ಮತ್ತು ಚಟುವಟಿಕೆಗಳನ್ನು ನಿಷೇಧಿಸಿದ ಕೆಲವೇ ದಿನಗಳಲ್ಲಿ ಈ ಪ್ರತಿಭಟನೆ ನಡೆದಿದೆ.

ಆದರೆ ಲಾಕ್‌ಡೌನ್ ಆದೇಶದ ಮೊದಲು, ರೋಮ್‌ನ ಸಿಟಿ ಹಾಲ್‌ನ ಅಧಿಕಾರಿಗಳು ಚರ್ಚ್ ಹೊರತುಪಡಿಸಿ ಇತರೆಡೆ ವಿವಾಹ ಮಹೋತ್ಸವ ಬುಕ್ ಮಾಡಿದ ದಂಪತಿಗೆ ವಿನಾಯಿತಿ ನೀಡಿದ್ದರು. ಅತಿಥಿಗಳ ಸಂಖ್ಯೆಯನ್ನು ಕೇವಲ ಇಬ್ಬರಿಗೆ ಸೀಮಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.