ನವದೆಹಲಿ: ಹಾರಾಟ ನಡೆಸಿದ ಕೆಲವೇ ಕ್ಷಣದಲ್ಲಿ ಇಂಡಿಗೋ ವಿಮಾನದ ಇಂಜಿನ್ ಕಂಪಿಸಿದ್ದರಿಂದ ಕೂಡಲೇ ಮಾರ್ಗ ಬದಲಾಯಿಸಿ ತುರ್ತು ಲ್ಯಾಂಡಿಂಗ್ ಮಾಡಲಾಗಿದ್ದು, ಮುಂದಾಗಬಹುದಾದ ಅನಾಹುತವೊಂದು ತಪ್ಪಿದೆ.
ಗುರುವಾರ ಮಧ್ಯರಾತ್ರಿ ಈ ದೆಹಲಿಯಿಂದ ವಡೋದರಾಗೆ ಹಾರಾಟ ನಡೆಸಿದ್ದ ವಿಮಾನ ಕೆಲವೇ ಕ್ಷಣದಲ್ಲಿ ಇಂಜಿನ್ ಕಂಪಿಸಿದ್ದರಿದಂದ ಜೈಪುರದ ವಿಮಾನ ನಿಲ್ದಾಣದಲ್ಲಿ ಸುರಕ್ಷಿತ ಲ್ಯಾಂಡಿಗ್ ಮಾಡಲಾಯಿತು. ಸದ್ಯ ಈ ಬಗ್ಗೆ ವಿಮಾನಯಾನ ಸಚಿವಾಲಯ ತನಿಖೆಗೆ ಆದೇಶಿಸಿದೆ. ಇಂಜಿನ್ ಕಂಪಿಸಿದ ತಕ್ಷಣವೇ ಎಚ್ಚೆತ್ತ ಪೈಲೆಟ್ ವಿಮಾನ ನಿಲ್ದಾಣಕ್ಕೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಜೈಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವ್ಯವಸ್ಥೆ ಮಾಡಲಾಯಿತು.
ಸದ್ಯ ಇಂಜಿನ್ ಅಲುಗಾಡಲು ಕಾರಣವೇನು, ಹಾರಾಟಕ್ಕೂ ಮುನ್ನ ಪರಿಶೀಲನೆ ನಡೆಸಲಾಗಿರಲಿಲ್ಲವೇ ಎಂದು ಪ್ರಸ್ನಿಸಿರುವ ಡಿಜಿಸಿಎ ಸಂಪೂರ್ಣ ವರದಿ ನೀಡಬೇಕು ಎಂದಿದ್ದು, ತನಿಖೆಗೂ ಆದೇಶಿಸಿದೆ. (ಏಜೆನ್ಸೀಸ್)