ಕೆಜಿಎಫ್​ ತಾಲೂಕಿನ ನಲ್ಲೂರು ಸಮೀಪ ಪಾಲರ್​ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿರುವ ಸೇತುವೆಯನ್ನು ಸಚಿವ ಸತೀಶ್​ ಜಾರಕಿಹೊಳಿ ಅವರು ಉದ್ಘಾಟಿಸಿದರು. ಕೆ.ಎಚ್​.ಮುನಿಯಪ್ಪ, ರೂಪಕಲಾ, ಡಾ.ಮೈತ್ರಿ, ರಾಮೂರ್ತಿ ಇದ್ದರು.  
ನ್ಯೂಸ್

ದಶಕಗಳ ಕನಸು ನನಸು

ಕೋಲಾರ/ಬೇತಮಂಗಲ: ಹಿಂದಿನ ಸರ್ಕಾರದ ಅವಧಿಯಲ್ಲಿ ಆಗದ ಕೆಲಸವನ್ನು ಇಂದು ನಮ್ಮ ಸರ್ಕಾರ ಕೈಗೊಂಡು, ಜನರ ಹಲವು ದಶಕಗಳ ಕನಸನ್ನು ನನಸು ಮಾಡಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.

ಕೆಜಿಎಫ್ ತಾಲೂಕಿನ ನಲ್ಲೂರು ಹಾಗೂ ನತ್ತ ಗ್ರಾಮದ ಸಮೀಪ ಪಾಲರ್​ ನದಿಗೆ ಅಡ್ಡಲಾಗಿ ಲೋಕೋಪಯೋಗಿ ಇಲಾಖೆಯಿಂದ 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಸೇತುವೆ ಹಾಗೂ ರಸ್ತೆಯನ್ನು ಉದ್ಘಾಟಿಸಿ ಮಾತನಾಡಿದರು.

ಕಾಲುವೆ ಮೇಲೆ ರಸ್ತೆ ಹಾದು ಹೋಗಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಎದುರಾಗಿತ್ತು. ಈ ಸಮಸ್ಯೆ ಕುರಿತು ಗಮನಕ್ಕೆ ಬಂದ ಕೂಡಲೇ ಸೇತುವೆ ನಿರ್ಮಿಸುವ ಮೂಲಕ ಸಮಸ್ಯೆ ನಿವಾರಣೆ ಮಾಡಲಾಗುತ್ತಿದೆ ಎಂದರು.

ಶಾಸಕ ಎಸ್​.ಎನ್​.ನಾರಾಯಣಸ್ವಾಮಿ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಲಕ್ಷಿ$್ಮನಾರಾಯಣ, ಮಾಜಿ ಅಧ್ಯಕ್ಷ ಕೆ.ಚಂದ್ರಾರೆಡ್ಡಿ, ಎಪಿ ಡಾ.ಮೈತ್ರಿ, ಕೆಜಿಎಫ್​ ನಗರಸಭೆ ಅಧ್ಯಕ್ಷೆ ಇಂದಿರಾಗಾಂಧಿ, ಸ್ಥಾಯಿ ಸಮಿತಿ ಅಧ್ಯಕ್ಷ ಒಳ್ಳಲ್​ ಮುನಿಸ್ವಾಮಿ, ಮಾಜಿ ಅಧ್ಯಕ್ಷ ರಮೇಶ್​ ಜೈನ್​, ಗ್ರಾಪಂ ಅಧ್ಯಕ್ಷ ಟಿ.ಗೊಲ್ಲಹಳ್ಳಿ ಮಂಜುನಾಥ್​, ಬೇತಮಂಗಲ ವಿನುಕಾರ್ಥಿಕ್​, ಹುಲ್ಲೂರು ಸೊನ್ನಮ್ಮ ರಮೇಶ್​, ಜಿಪಂ ಮಾಜಿ ಸದಸ್ಯರಾದ ಅಮೂಲಕ್ಷ್ಮಿ ನಾರಾಯಣ, ನಾರಾಯಣಸ್ವಾಮಿ, ಇನಾಯತ್​ ಉಲ್ಲಾ ಷರೀಫ್​, ಬೇತಮಂಗಲ ಎಸ್​ಎ್​ಸಿಎಸ್​ ಅಧ್ಯಕ್ಷ ವೆಂಕಟಾಚಲಪತಿ, ಮಾಜಿ ಅಧ್ಯಕ್ಷ ಪ್ರಸನ್ನ, ಶಂಕರ್​, ಮುನಿಸ್ವಾಮಿ ರೆಡ್ಡಿ, ಪಿಎಲ್ಡಿ ಬ್ಯಾಂಕ್​ ಮಾಜಿ ಅಧ್ಯಕ್ಷ ವೆಂಕಟಕೃಷ್ಣ ರೆಡ್ಡಿ, ಗ್ರಾಪಂ ಸದಸ್ಯರಾದ ಸುರೇಂದ್ರ ಗೌಡ, ಸುಕನ್ಯ ಅರ್ಭಿನ್​ ತಾಜ್​, ಮಂಜುನಾಥ ಇದ್ದರು.

* 200 ಕಾಲುಸಂಕ ನಿರ್ಮಾಣದ ಗುರಿ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಲೆನಾಡು ಪ್ರದೇಶದಲ್ಲಿ ಕಳೆದ ವರ್ಷ 100 ಕಾಲು ಸಂಕ ನಿಮಾರ್ಣ ಮಾಡಿದೆ. ಆದೇ ರೀತಿ ಪ್ರಸಕ್ತ ಸಾಲಿನಲ್ಲಿ 200 ಕಾಲು ಸಂಕ ನಿರ್ಮಾಣದ ಗುರಿ ಹೊಂದಲಾಗಿದೆ. ಇದೇ ರೀತಿ ನದಿ, ಕಾಲುವೆ ಹಾದು ಹೋಗಿರುವ ಕಡೆ ಆದ್ಯತೆ ಮೇರೆಗೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಸತೀಶ್​ ಜಾರಕಿಹೊಳಿ ಭರವಸೆ ನೀಡಿದರು.

* ಕೈಗಾರಿಕೆಗಳ ಸ್ಥಾಪನೆಗೆ ಒತ್ತು

ಆಹಾರ ಇಲಾಖೆ ಸಚಿವ ಕೆ.ಎಚ್​.ಮುನಿಯಪ್ಪ ಮಾತನಾಡಿ, ಸರ್ಕಾರದ ಸಹಕಾರದಿಂದ ಕ್ಷೇತ್ರವು ಅಭಿವೃದ್ಧಿಯತ್ತ ಸಾಗುತ್ತಿದೆ. ಇನ್ನು ಬಹಳಷ್ಟು ಅಭಿವೃದ್ಧಿ ಕೆಲಸಗಳು ಆಗಬೇಕಿದ್ದು, ಸರ್ಕಾರ ಸ್ಪಂದಿಸುತ್ತದೆ. ಕೆಜಿಎ್​ ಭಾಗದಲ್ಲಿ 1,200 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ತ್ವರಿತವಾಗಿ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡಬೇಕು. ಮಾರಿಕುಪ್ಪಂ&ಕುಪ್ಪಂ ರೈಲ್ವೆ ಮಾರ್ಗಕ್ಕೆ ಅನುದಾನ ಮೀಸಲಿರಿಸಲಾಗಿದ್ದು, ಈ ಯೋಜನೆಗಳನ್ನು ಸಾಕಾರಗೊಳಿಸಬೇಕು. ಜತೆಗೆ ಬಾಕಿ ಕೆಲಸಗಳನ್ನು ಕೈಗೆತ್ತಿಕೊಳ್ಳುವ ಜವಾಬ್ದಾರಿ ಸಂಸದರಾದ ಎಂ.ಮಲ್ಲೇಶ್​ ಬಾಬು, ಡಾ.ಕೆ.ಸುಧಾಕರ್​ ಅವರ ಮೇಲಿದ್ದು, ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಜಾರಿಗೊಳಿಸಬೇಕು ಎಂದು ಕಿವಿಮಾತು ಹೇಳಿದರು.

* ಹಿಂದಿನ ಸರ್ಕಾರದ ಅವಧಿಯಲ್ಲಿ ಸ್ಪಂದನೆ ಸಿಗಲಿಲ್ಲ

ಪಾಲರ್​ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಹಿಂದಿನ ಸರ್ಕಾರದ ಅವಧಿಯಲ್ಲಿ ಅನುದಾನ ತರಲಾಗಲಿಲ್ಲ. ನಮ್ಮ ಸರ್ಕಾರ ಬಂದ ಮೇಲೆ ಸಚಿವರಿಗೆ ಈ ಭಾಗದ ಜನರು ಅನುಭವಿಸುತ್ತಿದ್ದ ತೊಂದರೆಗಳ ಬಗ್ಗೆ ಚಿತ್ರಗಳನ್ನು ತೋರಿಸಿ ಅರ್ಥೈಸಿದಾಗ ಪ್ರತಿಕ್ರಿಯೆ ನೀಡಲಿಲ್ಲ, ಮೌನವಾಗಿದ್ದರು. ಆಗ ನಿರಾಸೆ ಆಯಿತು. ಬಳಿಕ ಅನುದಾನ ಮಂಜೂರು ಮಾಡಿದರು ಎಂದು ಶಾಸಕಿ ರೂಪಕಲಾ ಸಂತಸ ವ್ಯಕ್ತಪಡಿಸಿದರು.

* ಪ್ರವಾಸಿ ಮಂದಿರ ನಿರ್ಮಾಣಕ್ಕೆ ಮನವಿ

ತಾಲೂಕು ಆಡಳಿತ, ನಗರ ಭಾಗದಲ್ಲಿ ರಾಜಗೋಪುರ, ಅಂಬೇಡ್ಕರ್​ ಅಧ್ಯಯನ ಕೇಂದ್ರ, ಸರ್ಕಾರಿ ಶಾಲೆಗಳನ್ನು ಇಲಾಖೆಯಿಂದ ಕೈಗೆತ್ತಿಕೊಂಡಿದೆ. ರಸ್ತೆ, ಸೇತುವೆ ಸಿಮೀತವಾಗದೆ ಇದರ ಜತೆಗೆ ಪ್ರವಾಸಿ ಮಂದಿರ ನಿಮಾರ್ಣ ಮಾಡಿಕೊಡಬೇಕು ಎಂದು ರೂಪಕಲಾ ಕೋರಿದರು.