ಕಿರುವಾರ ಎಸ್. ಸುದರ್ಶನ್ ಕೋಲಾರ
ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಅಭ್ಯರ್ಥಿಗಳ ಸೋಲು&ಗೆಲುವಿಗೆ ಕಾರಣಗಳು ಏನು ಎಂಬುದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಆದ ಬೆಳವಣಿಗೆಗಳು ರಾಜ್ಯ, ರಾಷ್ಟ್ರದ ಗಮನಸೆಳೆದಿತ್ತು. ಆಗಿನಿಂದಲೇ ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರಗಳ ಬಗ್ಗೆ ಚರ್ಚೆಗಳು ಶುರುವಾಗಿದ್ದವು.
ಈ ಬಾರಿ ಗ್ರಾಮೀಣ ಭಾಗದಲ್ಲಿ ಚುನಾವಣೆಯ ಕಾವು ಜೋರಾಗಿಯೇ ಇತ್ತು. ಜೆಡಿಎಸ್ ಬಿಜೆಪಿಯೊಂದಿಗೆ ಮೈತ್ರಿಯಾಗಿದ್ದು, ಕುಮಾರಸ್ವಾಮಿ ಮೇಲಿನ ಅಭಿಮಾನಕ್ಕೆ ಜನ ಹೆಚ್ಚು ಒಲವು ತೋರಿದ್ದಾರೆ. ಮೈತ್ರಿಯಿಂದಲೇ ಜೆಡಿಎಸ್ ಗೆಲುವಾಗಿದೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಬೇರೆ ಕ್ಷೇತ್ರಗಳಲ್ಲಿ ಚುನಾವಣೆಗೆ 1-2 ತಿಂಗಳು ಮುಂಚೆಯೇ ಅಭ್ಯರ್ಥಿಗಳ ಘೋಷಣೆಯಾಗಿ, ಪ್ರಚಾರದ ಮೂಲಕ ಮತದಾರರನ್ನು ಸಂಪರ್ಕಿಸುವ ಪ್ರಯತ್ನ ನಡೆಯಿತು. ಆದರೆ, ಕೋಲಾರದಲ್ಲಿ ಚುನಾವಣೆಯ ದಿನಾಂಕ ಪ್ರಕಟವಾದ ನಂತರ ನಾಮಪತ್ರ ಸಲ್ಲಿಸಲು ಐದು ದಿನ ಬಾಕಿ ಇದ್ದ ಸಮಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೆ.ವಿ.ಗೌತಮ್ ಹೆಸರು ಪ್ರಕಟಗೊಂಡಿತು. ಮತದಾನಕ್ಕೆ ಕಡಿಮೆ ಅವಧಿಯಿದ್ದ ಕಾರಣ ಮತದಾರರನ್ನು ಸಂಪರ್ಕಿಸಲು ಸಾಧ್ಯವಾಗದಿರುವುದೇ ಸೋಲಿಗೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.
ಬಿಜೆಪಿ&ಜೆಡಿಎಸ್ ಮೈತ್ರಿ ಕೂಟದಿಂದ ಕ್ಷೇತ್ರವು ಜೆಡಿಎಸ್ಗೆ ಹಂಚಿಕೆಯಾದ ಬಳಿಕ ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್, ದೇವನಹಳ್ಳಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಹಾಗೂ ಮಲ್ಲೇಶ್ ಬಾಬು ಆಕಾಂಗಳಾಗಿದ್ದರು. ಎರಡೂ ಪಕ್ಷಗಳ ನಾಯಕರು ಒಮ್ಮತದಿಂದ ಮಲ್ಲೇಶ್ ಬಾಬು ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದರು.
ಆದರೆ, ಆಡಳಿತಾರೂಢ ಕಾಂಗ್ರೆಸ್ನಿಂದ ಅಭ್ಯರ್ಥಿ ಆಯ್ಕೆ ವಿಚಾರ ಬಾರಿ ಸದ್ದು ಮಾಡಿತು. ಅಳೆದು ತೂಗಿ ಗೌತಮ್ ಆಯ್ಕೆ ಮಾಡಿ ಕ್ಷೇತ್ರದ ಮುಖಂಡರಿಗೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿ ನೀಡಲಾಗಿತ್ತು. ಆದರೆ ಲಿತಾಂಶ ತಲೆಕೆಳಗಾಗಿದ್ದು, ಆಡಳಿತ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.
- ಇಬ್ಬರು ಸಚಿವರಿದ್ದರೂ ಲಿಸಲಿಲ್ಲ ಗೆಲುವು
ಕೋಲಾರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಜವಾಬ್ದಾರಿಯನ್ನು ಸಚಿವರಾದ ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್ ಹಾಗೂ ಕಾಂಗ್ರೆಸ್ ಶಾಸಕರಿಗೆ ನೀಡಲಾಗಿತ್ತು. ಪ್ರಚಾರಕ್ಕೆ ಚಾಲನೆ ನೀಡಲು ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಳಬಾಗಿಲು, ಬಂಗಾರಪೇಟೆಗೆ ಆಗಮಿಸಿದ್ದು, ಮಾಲೂರಿಗೆ ರಾಹುಲ್ ಗಾಂಧಿ ಅವರನ್ನು ಕರೆಯಿಸಿ ಬೃಹತ್ ಸಮಾವೇಶ ನಡೆಸಿದ್ದರು. ಐದು ಮಂದಿ ಕಾಂಗ್ರೆಸ್ ಶಾಸಕರು, ಇಬ್ಬರು ಸಚಿವರು ಇರುವ ಕ್ಷೇತ್ರದಲ್ಲಿ ಗೆಲುವು ಸುಲಭವಾಗಬಹುದು ಎಂದು ನಿರೀೆಯಲ್ಲಿದ್ದ ಗೌತಮ್ ಅವರಿಗೆ ನಿರಾಸೆಯುಂಟಾಗಿದೆ. ಸಚಿವ ಸುಧಾಕರ್ ಕ್ಷೇತ್ರದಲ್ಲೂ ಕಾಂಗ್ರೆಸ್ಗೆ ಹಿನ್ನಡೆಯಾಗಿದೆ. ಕೋಲಾರ ಉಸ್ತುವಾರಿ ಸಚಿವ ಬೈರತಿ ಸುರೇಶ್ ಪಟ್ಟ ಪ್ರಯತ್ನ ವಿಲವಾಗಿದೆ ಎಂಬುದು ಲಿತಾಂಶದ ಮೂಲಕ ಸಾಬೀತಾಗಿದೆ.
- ವಿಧಾನಸಭೆ ಚುನಾವಣೆಯಷ್ಟೇ ಮುನ್ನಡೆ
ಶ್ರೀನಿವಾಸಪುರದಲ್ಲಿ ಜೆಡಿಎಸ್ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ವಿಧಾನಸಭೆಯಲ್ಲಿ ಗೆಲುವು ಸಾಧಿಸಿರುವ ಮತಗಳ ಅಂತರದಷ್ಟೇ ಮಲ್ಲೇಶ್ಗೂ ಮುನ್ನಡೆ ದೊರೆತಿದೆ. ಮಲ್ಲೇಶ್ ಬಾಬು ಅವರನ್ನು ಶತಾಯಗತಾಯ ಗೆಲ್ಲಿಸಿಕೊಳ್ಳಬೇಕು ಎಂದು ಪಣತೊಟ್ಟಿದ್ದ ವೆಂಕಟಶಿವಾರೆಡ್ಡಿ ಪ್ರಯತ್ನಕ್ಕೆ ಮುಖಂಡರು ಸಾಥ್ ನೀಡಿದರು. ಇನ್ನು ಮಾಜಿ ಸಚಿವ ರಮೇಶ್ ಕುಮಾರ್ ಪ್ರಚಾರದ ವೇಳೆ ಒಕ್ಕಲಿಗ ಸಮುದಾಯವನ್ನು ಗುರಿಯಾಗಿಸಿಕೊಂಡು ಹೇಳಿಕೆ ನೀಡಿದ್ದು, ಜೆಡಿಎಸ್ಗೆ ಪ್ಲಸ್ ಆಯಿತು ಎಂದೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಅಂತೆಯೇ, ಶಿಡ್ಲಟ್ಟ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ ಬಂಡಾಯ ಎದ್ದಿದ್ದ ಪುಟ್ಟು ಆಂಜಿನಪ್ಪ ಅವರನ್ನು ಕಾಂಗ್ರೆಸ್ಗೆ ಸೇರ್ಪಡೆ ಮಾಡಿಕೊಳ್ಳಲು ರಾಜೀವ್ಗೌಡ ಸೇರಿ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದರು. ಆಂಜಿನಪ್ಪ ಅವರನ್ನು ಸೇರಿಸಿಕೊಂಡರೆ ಕಾಂಗ್ರೆಸ್ಗೆ ಲಾಭವಾಗುತ್ತದೆ ಎಂಬುದನ್ನು ಅರಿತ ರಾಜ್ಯ ಮುಖಂಡರು ರಾಜೀವ್ ಗೌಡರನ್ನು ಮನವೊಲಿಸಿ ಕಾಂಗ್ರೆಸ್ಗೆ ಸೇರಿಸಿಕೊಂಡರು. ಆದರೂ ಹೆಚ್ಚಿನ ಮತ ಪಡೆಯಲು ಸಾಧ್ಯವಾಗಿಲ್ಲ.
- ರಾಹುಲ್ ಗಾಂಧಿ ಬಂದರೂ ಮತ ಬರಲಿಲ್ಲ
ಲೋಕಸಭೆ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆಲ್ಲಿಸಿಕೊಳ್ಳಲಾಗುವುದು ಎಂದು ಮಾಲೂರಿಗೆ ರಾಹುಲ್ಗಾಂಧಿ ಕ್ಷೇತ್ರಕ್ಕೆ ಆಗಮಿಸಿದ್ದಾಗ ಶಾಸಕ ಕೆ.ವೈ.ನಂಜೇಗೌಡ ಹೇಳಿದ್ದರು. ಆದರೆ, ಬಿಜೆಪಿಯ ಹೂಡಿ ವಿಜಯ್ಕುಮಾರ್ ಮೈತ್ರಿ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಜತೆಗೆ ಮಾಜಿ ಶಾಸಕ ಕೆ.ಎಸ್.ಮಂಜುನಾಥ್ಗೌಡ ಪ್ರಚಾರ ನಡೆಸಿದ್ದರು. ಇಲ್ಲಿಗೆ ಮಾಜಿ ಪ್ರಧಾನಿ ದೇವೇಗೌಡರು ಆಗಮಿಸಿ ಹೂಡಿ ಮನೆಗೆ ಭೇಟಿ ನೀಡಿದ್ದು ಜೆಡಿಎಸ್ ಲಾಭವಾಯಿತು.
- ಎರಡು ಬಾರಿ ಸೋತಿದ್ದ ಅನುಕಂಪ
ಬಂಗಾರಪೇಟೆಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಲೋಕಸಭೆ ಚುನಾವಣೆಯ ನಂತರ ಸಚಿವ ಸ್ಥಾನ ಸಿಗುವ ನಿರೀೆಯಲ್ಲಿದ್ದರು. ಆದರೆ ಗೌತಮ್ ಸೋಲು ನಿರಾಸೆಯುಂಟು ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕರು ಗೌತಮ್ಗೆ ಎಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಲೀಡ್ ಕೊಡಿಸುವ ಭರವಸೆ ನೀಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ್ದರು. ಮಲ್ಲೇಶ್ ಬಾಬು 2018 ಹಾಗೂ 2023ರ ವಿಧಾನಸಭಾ ಚುನಾವಣೆಯಲ್ಲಿ ಬಂಗಾರಪೇಟೆ ಕ್ಷೇತ್ರದಿಂದ ಪರಾಭಾವಗೊಂಡಿದ್ದರು. ಎರಡು ಬಾರಿ ಸೋತಿದ್ದ ಅನುಕಂಪವೂ ಮತಗಳಾಗಿ ಪರಿವರ್ತನೆಯಾಗಿವೆ ಎಂಬ ಚರ್ಚೆ ನಡೆಯುತ್ತಿದೆ.
- ಸಚಿವಸ್ಥಾನ ನೀಡಲು ಒತ್ತಾಯ
ಕುಟುಂಬದ ಸದಸ್ಯರಿಗೆ ಟಿಕೆಟ್ ಸಿಗದಿದ್ದರೂ ಕೆಜಿಎ್ ಕ್ಷೇತ್ರದಲ್ಲಿ ಶಾಸಕಿ ಎಂ.ರೂಪಕಲಾ ಪಟ್ಟು ಬಿಡದೆ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಅಲ್ಲಿ ಅಧಿಕ ಮತಗಳು ಕಾಂಗ್ರೆಸ್ಗೆ ಮುನ್ನಡೆಯಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ರೂಪಕಲಾ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯ ಕ್ಷೇತ್ರದ ಜನರಿಂದ ಕೇಳಿಬಂದಿದೆ.
- ಪ್ರತಿ ಚುನಾವಣೆಯಲ್ಲೂ ಎನ್ಡಿಎಗೆ ಮುನ್ನಡೆ
ಕೇಂದ್ರದ ಚುನಾವಣೆ ಎಂದರೆ ಮುಳಬಾಗಿಲು ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದು ವಾಡಿಕೆಯಾಗಿದೆ. ಕಳೆದ ಚುನಾವಣೆಗಳಲ್ಲೂ ಕಾಂಗ್ರೆಸ್ಗೆ ಮುನ್ನಡೆ ಬಂದಿರುವ ಇತಿಹಾಸವಿಲ್ಲ. ಕಳೆದ ಚುನಾವಣೆಗಿಂತ ಇಲ್ಲಿ ಅಧಿಕ ಮತಗಳು ಮೈತ್ರಿ ಅಭ್ಯರ್ಥಿಗೆ ಲಭಿಸಿವೆ. ಮುಳಬಾಗಿಲಿಗೆ ಎಚ್.ಡಿ. ಕುಮಾರಸ್ವಾಮಿ, ಡಾ.ಅಶ್ವತ್ಥನಾರಾಯಣ ಸೇರಿದಂತೆ ಹಲವಾರು ರಾಜ್ಯ ನಾಯಕರು ಪ್ರಚಾರಕ್ಕಾಗಿ ಆಗಮಿಸಿದ್ದು ಮೈತ್ರಿ ಅಭ್ಯರ್ಥಿ ಗೆಲುವಿಗೆ ಸಹಾಯ ಮಾಡಿದೆ.