ನ್ಯೂಸ್

ಹಸುವಿನ ಮೈ ತೊಳೆಯತ್ತಿರುವಾಗಲೇ ಬಾಲಕರಿಬ್ಬರ ದುರಂತ ಸಾವು!

ಹಾವೇರಿ: ಹಿರೆಕೇರೂರು ತಾಲೂಕಿನ ದೂದಿಹಳ್ಳಿ ಗ್ರಾಮದ ಬಾಲಕರಿಬ್ಬರು ಹಸುವಿನ ಮೈತೊಳೆಯಲು ಹೋಗು ದುರಂತ ಅಂತ್ಯ ಕಂಡ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ.

ಅಭಿಷೇಕ ಹಂಡೋರಿ ಮತ್ತು ಹರೀಶ ಬಾಳಿಕಾಯಿ ಮೃತ ದುರ್ದೈವಿಗಳು. ಇವರಿಬ್ಬರು ಗೂದಿಹಳ್ಳಿ ಗ್ರಾಮದ ಮಾಸೂರು ರಸ್ತೆ ಬಳಿಯ ಕೆರೆಯಲ್ಲಿ ಹಸುವಿನ ಮೈತೊಳೆಯಲು ಹೋಗಿದ್ದರು.

ಈ ವೇಳೆ ಕೆರೆಯಲ್ಲಿ ಕಾಲು ಜಾರಿ ಬಿದ್ದು ಈಜಲು ಬಾರದೆ ಜಲಸಮಾಧಿ ಆಗಿದ್ದಾರೆ. ಮೃತರ ಪಾಲಕರ ಆಕ್ರಂದನ ಮುಗಿಲುಮುಟ್ಟಿತ್ತು. ಹಿರೆಕೇರೂರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.