ಲಖನೌ: ಮನೆ ಬಿಟ್ಟು ಬಂದ ಪ್ರೇಮಿಗಳಿಗೆ ಮಹಿಳಾ ಪೊಲೀಸರೇ ಮುಂದೆ ನಿಂತು ಮದುವೆ ಮಾಡಿಸಿದ್ದಾರೆ.
ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳ ಮದುವೆಗೆ ಹುಡುಗಿ ಮನೆ ಕಡೆಯವರು ಒಪ್ಪಿರಲಿಲ್ಲ. ಹೀಗಾಗಿ ಪ್ರೇಮಿಗಳು ಪೊಲೀಸರ ಮೊರೆ ಹೋಗಿದ್ದರು. ಲಖನೌ ಮಹಿಳಾ ಪೊಲೀಸ್ ಠಾಣೆ ಪೊಲೀಸರು ಈ ಪ್ರೇಮಿಗಳ ಮುಹೂರ್ತಕ್ಕೆ ಪೌರೋಹಿತ್ಯ ವಹಿಸಿದ್ದರು.
ಮನೀಷಾ ಮತ್ತು ಕಿರಣ್ ಎನ್ನುವ ಪ್ರೇಮಿಗಳೇ ದಾಂಪತ್ಯಕ್ಕೆ ಕಾಲಿಟ್ಟವರು. ಮದುವೆಯಾಗಲು ಮನೆಯವರು ಒಪ್ಪದ ಕಾರಣಕ್ಕೆ ಮನೀಷಾ ತನ್ನ ಮನೆ ಬಿಟ್ಟು ಬಂದು ಕಿರಣ್ ಮನೆಯಲ್ಲಿದ್ದಳು.
ಹುಡುಗಿ ಮನೆಯ ಕಡೆಯವರಿಂದ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ ಪ್ರೇಮಿಗಳು ಪೊಲೀಸ್ ಆಯುಕ್ತರ ಮನೆಗೆ ತೆರಳಿ ತಮ್ಮ ದುಃಖ ಹೇಳಿಕೊಂಡಿದ್ದರು. ಆಯುಕ್ತರ ಸೂಚನೆ ಮೇರೆಗೆ ಮಹಿಳಾ ಪೊಲೀಸ್ ಅಧಿಕಾರಿ ಶಾರದಾ ಚೌಧರಿ ಮುಂದೆ ನಿಂತು ಪ್ರೇಮಿಗಳಿಗೆ ಮದುವೆ ಮಾಡಿಸಿ ಆಶೀರ್ವದಿಸಿದರು. (ಏಜೆನ್ಸೀಸ್)